ಹಾಸನ: ಸರ್ಕಾರಿ ಪದವಿ ಕಾಲೇಜುಗಳ ಮೂಲಸೌಕರ್ಯ, ಶಿಕ್ಷಣದ ಗುಣಮಟ್ಟದ ಮಾನದಂಡಗಳನ್ನು ಆಧರಿಸಿ, ಶ್ರೇಣಿ ನೀಡುವ ನ್ಯಾಕ್ ಸಮಿತಿ, ಜಿಲ್ಲೆಯ ಹಲವು ಕಾಲೇಜುಗಳಿಗೆ ಈಗಾಗಲೇ ಭೇಟಿ ನೀಡಿದೆ. ಇನ್ನೂ ಕೆಲ ಕಾಲೇಜುಗಳಿಗೆ ಭೇಟಿ ನೀಡಬೇಕಾಗಿದೆ.
ಪದವಿ ಶಿಕ್ಷಣ ನೀಡುವ ಕಾಲೇಜುಗಳು ಎಲ್ಲ ರೀತಿಯ ಮೂಲ ಸೌಕರ್ಯಗಳನ್ನು ಹೊಂದಿರಬೇಕು ಎಂಬುದು ನ್ಯಾಕ್ ಸಂಸ್ಥೆಯ ಪ್ರಮುಖ ಉದ್ದೇಶ. ಪದವಿ ಕಾಲೇಜುಗಳು ಹೊಂದಿರುವ ಸೌಲಭ್ಯ ಮತ್ತು ಶೈಕ್ಷಣಿಕವಾಗಿ ಮಾಡಿರುವ ಸಾಧನೆಗಳನ್ನು 5 ವರ್ಷಕ್ಕೆ ಒಮ್ಮೆ ಪರಿಶೀಲಿಸಿ ಅದಕ್ಕೆ ಶ್ರೇಣಿ ಕೊಡಲಾಗುತ್ತದೆ. ಎ+ ನಿಂದ ಹಿಡಿದು ಸಿ ವರೆಗೆ ಶ್ರೇಣಿಗಳನ್ನು ಕೊಡಲಾಗುತ್ತದೆ..
ನ್ಯಾಕ್ ಸಮಿತಿಯು ಕಾಲೇಜಿನ ಮೂಲ ಸೌಕರ್ಯಗಳ ಜೊತೆಗೆ ವಿದ್ಯಾರ್ಥಿಗಳ ಸಂಖ್ಯೆ, ಬೋಧನೆಯ ಗುಣಮಟ್ಟ, ಫಲಿತಾಂಶ, ಅಧ್ಯಾಪಕರ ಶೈಕ್ಷಣಿಕ ಮಟ್ಟ, ಪ್ರತಿ ವಿಷಯಗಳ ಪಠ್ಯ ಮತ್ತು ಪಠ್ಯೇತರ ಚಟುವಟಿಕೆ, ಕಾಲೇಜಿನ ಹೊರಗಿನ ಮತ್ತು ಒಳಗಿನ ವಾತಾವರಣ, ಪರಿಸರ ಸಂರಕ್ಷಣೆ, ಕ್ರೀಡಾ ಚಟುವಟಿಕೆ, ಎನ್‌ಸಿಸಿ ಮತ್ತು ಎನ್ಎಸ್‌ಎಸ್, ಕಾರ್ಯಕ್ರಮಗಳು ಹೀಗೆ ಹಲವಾರು ಮಾನದಂಡಗಳನ್ನು ಆಧರಿಸಿ, ಶ್ರೇಣಿ ನೀಡಲಾಗುತ್ತದೆ
ಬಹುತೇಕ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಮೂಲಸೌಕರ್ಯಗಳ ಜೊತೆಗೆ ಪ್ರಾಧ್ಯಾಪಕ ಕೊರತೆಯೇ ಪ್ರಮುಖ ಸಮಸ್ಯೆಯಾಗಿದೆ. ಬೋಧನೆ ಮಾಡಲು ಅತಿಥಿ ಉಪನ್ಯಾಸಕರನ್ನೇ ಅವಲಂಬಿಸುವ ಅನಿವಾರ್ಯತೆ ಇದೆ. ಖಾಲಿ ಇರುವ ಹುದ್ದೆಗಳ ಭರ್ತಿಗೆ ಸರ್ಕಾರಗಳು ಮುಂದಾಗುತ್ತಿಲ್ಲ. ಇನ್ನೊಂದೆಡೆ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು. ಅದಕ್ಕಾಗಿ ಅತಿಥಿ ಉಪನ್ಯಾಸಕರನ್ನೇ ಅವಲಂಬಿಸಬೇಕು ಎಂದು ಸರ್ಕಾರಿ ಕಾಲೇಜಿನ ಪ್ರಾಧ್ಯಾಪಕರೊಬ್ಬರು ಹೇಳುತ್ತಾರೆ. .
ನ್ಯಾಕ್ ಸಮಿತಿ ಒಂದು ಸ್ವಯತ್ತ ಸಂಸ್ಥೆಯಾಗಿದ್ದು, ಸಮಿತಿಯು 7 ಮಾನದಂಡಗಳೊಂದಿಗೆ ಕಾಲೇಜಿನ ಸ್ಥಿತಿಗತಿಗಳ ಬಗ್ಗೆ ನ್ಯಾಕ್ ಕೇಂದ್ರ ಕಚೇರಿಗೆ ಮಾಹಿತಿ ನೀಡುತ್ತದೆ. ಪ್ರಸಕ್ತ ವರ್ಷದಿಂದ ನ್ಯಾಕ್ ಸಮಿತಿಯು ಕಾಲೇಜುಗಳಿಗೆ ಮಾನ್ಯತೆ ಒದಗಿಸಲು ಆನ್‌ಲೈನ್ ಮೂಲಕ ಮಾಹಿತಿಯನ್ನು ಕ್ರೋಡೀಕರಿಸುತ್ತಿದ್ದು, ಈ ಮೂಲಕ ಶೇ 70 ರಷ್ಟು ಅಂಕವನ್ನು ನಿಗದಿ ಮಾಡುತ್ತದೆ.
ಈ ಕಾಲೇಜುಗಳು ತಮ್ಮ ಕಾಲೇಜಿನ ಶೈಕ್ಷಣಿಕ ಹಾಗೂ ಮೂಲಭೂತ ಸೌಕರ್ಯಗಳ ಬಗ್ಗೆ ಅಗತ್ಯ ಮಾಹಿತಿಗಳನ್ನು ಆನ್‌ಲೈನ್ ಮೂಲಕವೇ ಅಪ್‌ಲೋಡ್ ಮಾಡಬೇಕಾಗುತ್ತದೆ. ಉಳಿದ ಶೇ 30ರಷ್ಟು ಅಂಕಕ್ಕೆ ವಿಶ್ರಾಂತ ಕುಲಪತಿ, ಪ್ರಾಂಶುಪಾಲ, ಸ್ವಾಯತ್ತ ಕಾಲೇಜು ಪ್ರಾಂಶುಪಾಲರನ್ನು ಮೂರು ಜನರ ಸ್ವಯಂ-ಅಧ್ಯಯನ ವರದಿ ತಂಡ ಕಾಲೇಜಿಗೆ ಭೇಟಿ ನೀಡುತ್ತದೆ.
ಆನ್‌ಲೈನ್‌ನಲ್ಲಿ ದಾಖಲಿಸಿದ ಮಾಹಿತಿಯನ್ನು ಎರಡು ದಿನ ಪರಾಮರ್ಶಿಸಿ, ಸ್ಥಳ ಪರಿಶೀಲನೆ ನಂತರ ಶೇ 100 ಅಂಕಗಳನ್ನು ಕ್ರೋಡೀಕರಿಸಿ, ಶ್ರೇಣಿಗಳನ್ನು ನೀಡಲಾಗುತ್ತದೆ ಎಂದು ನಿವೃತ್ತ ಉಪನ್ಯಾಸಕ ದೇಸಾಯಿ ಸೋಮಶೇಖರ್ ಮಾಹಿತಿ ನೀಡುತ್ತಾರೆ.
ಜಿಲ್ಲೆಯಲ್ಲಿ ಶೇ 90ರಷ್ಟು ಸರ್ಕಾರಿ ಕಾಲೇಜುಗಳು ನ್ಯಾಕ್ ಸಮಿತಿಯ ಮಾನ್ಯತೆ ಪಡೆದಿದ್ದು, ಮೊಸಳೆ ಹೊಸಳ್ಳಿ, ಹೆತ್ತೂರು ಹಾಗೂ ಹಾಸನ ನಗರದ ಗಂಧದ ಕೋಠಿ ಪದವಿ ಕಾಲೇಜುಗಳಿಗೆ ನ್ಯಾಕ್ ಮಾನ್ಯತೆ ದೊರೆಯಬೇಕಿದೆ.
ಬೇಲೂರು ಪಟ್ಟಣ ಸಮೀಪದ ವೈ.ಡಿ.ಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಫೆಬ್ರುವರಿ ತಿಂಗಳಲ್ಲಿ ನ್ಯಾಕ್ ಕಮಿಟಿ ಭೇಟಿ ನೀಡಿದ್ದು ಬಿ. ಗ್ರೇಡ್ ನೀಡಲಾಗಿದೆ. ಕಾಲೇಜಿನಲ್ಲಿ ಮೂಲ ಸೌಕರ್ಯಗಳು ಚೆನ್ನಾಗಿವೆ. ಕೆಲವೇ ಅಂಕಗಳಲ್ಲಿ ಬಿ+ ಶ್ರೇಣಿ ಕೈತಪ್ಪಿದೆ ಎಂದು ಕಾಲೇಜಿನ ಪ್ರಾಂಶುಪಾಲ ಪುಟ್ಟರಾಜು ತಿಳಿಸಿದ್ದಾರೆ.
ಚನ್ನರಾಯಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಫೆಬ್ರುವರಿಯಲ್ಲಿ ನ್ಯಾಕ್ ತಂಡ ಭೇಟಿ ನೀಡಿದ್ದು, ಬಿ++ (ಸಿಜಿಪಿಎ 2.84) ಅಂಕ ದೊರೆತಿದೆ. ಉದಯಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಜನವರಿಯಲ್ಲಿ ತಂಡ ಭೇಟಿ ನೀಡಿದ್ದು, ಕಾಲೇಜಿಗೆ ಬಿ++ (ಸಿಜಿಪಿಎ 2.85) ಅಂಕ ನೀಡಿದೆ.
ಕಾಲೇಜುಗಳಲ್ಲಿರುವ ಮೂಲಸೌಕರ್ಯ, ಬೋಧನಾ ಮತ್ತು ಕಲಿಕಾ ವಿಧಾನ, ಸಂಶೋಧನೆ, ಸಾಂಸ್ಕೃತಿಕ ಚಟುವಟಿಕೆ, ವಿದ್ಯಾರ್ಥಿಗಳ ಸಂಖ್ಯೆ, ಫಲಿತಾಂಶ ಹಾಗೂ ವಿಸ್ತರಣಾ ಚಟುವಟಿಕೆಗಳ ಸೌಲಭ್ಯ ಪರಿಶೀಲಿಸಿ ಪದವಿ ಕಾಲೇಜುಗಳಿಗೆ 5 ವರ್ಷಕ್ಕೊಮ್ಮೆ ನ್ಯಾಕ್ ತಂಡ ಗ್ರೇಡ್ ನೀಡಲಿದೆ.
ಹಳೇಬೀಡು ಕಾಲೇಜಿಗೆ ರೂಸಾ ಅನುದಾನ ಗ್ರಾಮೀಣ ವಿದ್ಯಾರ್ಥಿಗಳು ಕಲಿಯುತ್ತಿರುವ ಹಳೇಬೀಡಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನ್ಯಾಕ್ ಬಿ+ ಶ್ರೇಯಾಂಕ ಪಡೆದು ರೂಸಾ ಅನುದಾನಕ್ಕೆ ಒಳಪಟ್ಟಿದೆ. ಗ್ರಾಮೀಣ ಭಾಗದ ಕಾಲೇಜು ಅಭಿವೃದ್ದಿಯತ್ತ ಸಾಗುತ್ತಿರುವುದಕ್ಕೆ ಪೋಷಕರು ಹಾಗೂ ವಿದ್ಯಾರ್ಥಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಹಳೇಬೀಡು ಕಾಲೇಜು 2007 ರಲ್ಲಿ ಆರಂಭವಾಗಿದ್ದು ಪದವಿಯಲ್ಲಿ 322 ಸ್ನಾತಕೋತ್ತರ ಎಂಕಾಂ ಪದವಿಯಲ್ಲಿ 42 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಒಟ್ಟು 364 ವಿದ್ಯಾರ್ಥಿಗಳು ಕಾಲೇಜಿನಲ್ಲಿದ್ದಾರೆ. 5 ವರ್ಷದ ಹಿಂದೆ ನಡೆದ ನ್ಯಾಕ್ ಮೌಲ್ಯಮಾಪನ ಪರಿಶೀಲನೆಯಲ್ಲಿ ಕಾಲೇಜು ಸಿ ಶ್ರೇಯಾಂಕದಲ್ಲಿತ್ತು. ಈ ವರ್ಷ ಫೆಬ್ರುವರಿಯಲ್ಲಿ ನಡೆದ ಎರಡನೇ ಮೌಲ್ಯಾಂಕನದಲ್ಲಿ ಕಾಲೇಜು ಬಿ+ ಶ್ರೇಯಾಂಕ ಪಡೆದಿದೆ. ಕಾಲೇಜಿನ ಎಲ್ಲ ವಿಭಾಗದಲ್ಲಿಯೂ ಪ್ರಾಧ್ಯಾಪಕರು ವಿಶೇಷ ಛಾಪು ಮೂಡಿಸುವ ಕೆಲಸ ಕೈಗೊಂಡಿದ್ದಾರೆ. ಪ್ರಾಂಶುಪಾಲರು ಬೆನ್ನೆಲುಬಾಗಿ ನಿಂತು ಹಗಲು ರಾತ್ರಿ ಎನ್ನದೇ ಕೆಲಸ ಮಾಡಿದ್ದರಿಂದ ಕಾಲೇಜಿಗೆ ಬಿ+ ಶ್ರೇಯಾಂಕ ಬಂದಿದೆ. ಕಾಲೇಜು ಬಿ ಶ್ರೇಣಿಗಿಂತ ಮೇಲಕ್ಕೇರಿರುವುದರಿಂದ ರೂಸಾ ಅನುದಾನಕ್ಕೆ ಕಾಲೇಜು ಒಳಪಟ್ಟಿದೆ. ಕಾಲೇಜು ಎ ಶ್ರೇಣಿ ಪಡೆಯುವಂತಹ ಲಕ್ಷಣಗಳನ್ನು ಹೊಂದಿದೆ. ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಇರುವುದರಿಂದ ನ್ಯಾಕ್ ಸಮಿತಿ ಸದಸ್ಯರು ಹೆಚ್ಚಿನ ಸೌಲಭ್ಯ ನಿರೀಕ್ಷಿಸುತ್ತಾರೆ. ಹೀಗಾಗಿ ಬಿ+ನಲ್ಲಿ ತೃಪ್ತಿಪಟ್ಟುಕೊಳ್ಳುವಂತಾಗಿದೆ. ಮುಂದಿನ ಮೌಲ್ಯಮಾಪನದಲ್ಲಿ ಕಾಲೇಜಿಗೆ ಎ ಶ್ರೇಣಿ ಬರುವುದು ಖಚಿತ ಎಂಬ ಮಾತು ವಿದ್ಯಾರ್ಥಿಗಳಿಂದ ಕೇಳಿ ಬರುತ್ತಿದೆ.
ಶೀಘ್ರ ನ್ಯಾಕ್‌ಗೆ ಪ್ರಸ್ತಾವ ಮೂಲಸೌಲಭ್ಯಗಳ ಕೊರತೆಯಿಂದಾಗಿ ನ್ಯಾಕ್ ಸಮಿತಿಗೆ ಪ್ರಸ್ತಾವ ಸಲ್ಲಿಸಲು ವಿಳಂಬವಾಗಿದೆ. ಸದ್ಯ ಕಾಲೇಜಿನಲ್ಲಿ 31 ಅತಿಥಿ ಉಪನ್ಯಾಸಕರು ಹಾಗೂ ಎಂಟು ಮಂದಿ ಕಾಯಂ ಉಪನ್ಯಾಸಕರು ಕಾರ್ಯನಿರ್ವಹಿಸುತ್ತಿದ್ದಾರೆ. ಕಳೆದ ವರ್ಷದಿಂದ ನೂತನ ಕಟ್ಟಡದಲ್ಲಿ ಕಾಲೇಜು ಪ್ರಾರಂಭವಾಗಿದ್ದು ಮೂಲಸೌಲಭ್ಯ ಕೊರತೆ ನೀಗಿಸಲಾಗಿದೆ. ಆದಷ್ಟು ಶೀಘ್ರ ನ್ಯಾಕ್ ಸಮಿತಿಗೆ ಪ್ರಸ್ತಾವ ಸಲ್ಲಿಸಲಾಗುವುದು. ಕವಿತಾ ಪ್ರಾಂಶುಪಾಲೆ ಗಂಧದ ಕೋಠಿ ಸರ್ಕಾರಿ ಮಹಿಳಾ ಕಾಲೇಜು ಹಾಸನ ಕಾಲೇಜಿಗೆ ಬಿ++ ಶ್ರೇಣಿ ಕಾಲೇಜಿಗೆ ನ್ಯಾಕ್ ಸಮಿತಿ ಭೇಟಿ ನೀಡಿದ್ದು ಬಿ++ ಶ್ರೇಣಿ ದೊರೆತಿದೆ. ನ್ಯಾಕ್ ಸಮಿತಿ ಭೇಟಿಯಿಂದ ಕಾಲೇಜಿನ ಶೈಕ್ಷಣಿಕ ಪ್ರಗತಿಗೆ ಪೂರಕವಾಗಲಿದೆ. ಯುಜಿಸಿ ಹಾಗೂ ರಾಜ್ಯ ಸರ್ಕಾರದಿಂದ ಕಾಲೇಜು ಅಭಿವೃದ್ಧಿಗೆ ಅಗತ್ಯ ನೆರವು ದೊರೆಯಲಿದ್ದು ಪ್ರತಿವರ್ಷ ನ್ಯಾಕ್ ಸಮಿತಿಗೆ ಕಾಲೇಜಿನ ಶೈಕ್ಷಣಿಕ ಸೇರಿದಂತೆ ಮೂಲ ಸೌಕರ್ಯಗಳ ಪ್ರಗತಿ ಹಾಗೂ ನಿರ್ವಹಣೆ ಬಗ್ಗೆ ವರದಿ ನೀಡಬೇಕಾಗುತ್ತದೆ. ಪ್ರೊ.ಟಿ.ಪಿ ಪುಟ್ಟರಾಜು ಸರ್ಕಾರಿ ಕಲಾ ವಾಣಿಜ್ಯ ಮತ್ತು ಸ್ನಾತಕೋತ್ತರ ಸ್ವಾಯತ್ತ ಕಾಲೇಜು ಪ್ರಾಂಶುಪಾಲ ಎರಡು ಅಂಕದಲ್ಲಿ ಬಿ+ ವಂಚಿತ ನ್ಯಾಕ್ ಕಮಿಟಿಯಿಂದ ಬಿ+ ಗ್ರೇಡ್ ಬರಬೇಕಿತ್ತು. ಅದರೆ ಎರಡು ಅಂಕಗಳಿಂದ ಬಿ ಗ್ರೇಡ್ ಬಂದಿದೆ. 12 ಜನ ಕಾಯಂ ಉಪನ್ಯಾಸಕರು 12 ಜನ ಅತಿಥಿ ಉಪನ್ಯಾಸಕರಿದ್ದಾರೆ. ಬಿ.ಕಾಂ.ನಲ್ಲಿ ಶೇ 100 ಹಾಗೂ ಬಿ.ಎ.ಯಲ್ಲಿ ಶೇ 87 ಫಲಿತಾಂಶ ಬಂದಿದೆ. ಪುಟ್ಟರಾಜು ಬೇಲೂರು ಸರ್ಕಾರಿ ಕಾಲೇಜು ಪ್ರಾಂಶುಪಾಲ ಮುಂದಿನ ಬಾರಿ ಎ ಶ್ರೇಣಿ ಡಿಜಟಲೀಕರಣ ಜಾಗತಿಕ ಗುಣಮಟ್ಟದ ಬೋಧನೆ ವಿದ್ಯಾರ್ಥಿಗಳಲ್ಲಿ ಹೆಚ್ಚುತ್ತಿರುವ ಕೌಶಲ ಪ್ರಾಧ್ಯಾಪಕರು ಹಾಗೂ ಸಿಬ್ಬಂದಿ ಆಸಕ್ತಿಯಿಂದ ಕೆಲಸ ಮಾಡಿದ್ದರಿಂದ ಕಾಲೇಜು ಬಿ+ ಶ್ರೇಯಾಂಕ ಪಡೆದಿದೆ. ಮುಂದಿನ ಮೌಲ್ಯಮಾಪನದಲ್ಲಿ ಎ ಗ್ರೇಡ್ ಪಡೆಯಬೇಕು ಎಂದು ಪ್ರಾಧ್ಯಾಪಕರು ಹಾಗೂ ಸಿಬ್ಬಂದಿಯಲ್ಲಿ ಛಲ ಮೂಡಿದೆ. ಎಚ್.ಎನ್.ಹೇಮೇಶ್ ಹಳೇಬೀಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಸಾಂಸ್ಕೃತಿಕ ಚಟುವಟಿಕೆಗೆ ವೇದಿಕೆ ಕಾಲೇಜಿಗೆ ನ್ಯಾಕ್ ಸಮಿತಿ ಬರಲಿದೆ ಎಂದಾಗ ಭಾರಿ ಚಟುವಟಿಕೆಗಳು ಆರಂಭವಾದವು. ಶೈಕ್ಷಣಿಕ ಚಟುವಟಿಕೆ ಜೊತೆಯಲ್ಲಿ ಸಾಂಸ್ಕೃತಿಕ ಚಟುವಟಿಕೆಗೆ ವೇದಿಕೆ ಸೃಷ್ಟಿಯಾಯಿತು. ನ್ಯಾಕ್ ಸಮಿತಿ ಬಂದಾಗ ಕರಾವಳಿಯ ಯಕ್ಷಗಾನದಲ್ಲಿ ಭಾಗವಹಿಸಿದ್ದ ಕ್ಷಣಗಳನ್ನು ಮರೆಯುವಂತಿಲ್ಲ. ರಂಜಿತಾ ಎಚ್.ಕೆ. ಹಳೇಬೀಡು ಕಾಲೇಜಿನ ವಿದ್ಯಾರ್ಥಿನಿ ಕಾಲೇಜಿನಲ್ಲಿ 1052 ವಿದ್ಯಾರ್ಥಿಗಳು ಕಾಲೇಜಿನಲ್ಲಿ ಕುಡಿಯುವ ನೀರು ಕ್ರೀಡೆ ಗ್ರಂಥಾಲಯ ಮೂರು ಸಭಾಂಗಣಗಳಿವೆ. 2022- 23ನೇ ಶೈಕ್ಷಣಿಕ ಸಾಲಿಗೆ ಕಲಾ ವಾಣಿಜ್ಯ ವಿಜ್ಞಾನ ವಿಭಾಗದಲ್ಲಿ 1052 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಡಾ.ಬಿ.ಎಸ್. ಪೂರ್ಣಿಮಾ ಚನ್ನರಾಯಪಟ್ಟಣ ಸರ್ಕಾರ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲೆ ಅಗತ್ಯ ಸೌಕರ್ಯ ಲಭ್ಯ ಉದಯಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ನ್ಯಾಕ್‌ನಿಂದ ಉತ್ತಮ ಗ್ರೇಡ್ ದೊರೆತಿದೆ. ಕಾಲೇಜಿನಲ್ಲಿ ಉತ್ತಮ ಕಟ್ಟಡ ಸುಸಜ್ಜಿತ ಗ್ರಂಥಾಲಯ ಆಟದ ಮೈದಾನ ಕ್ರೀಡಾ ಸವಲತ್ತು ಇದೆ. ಎಚ್.ಡಿ. ಕುಮಾರ್ ಉದಯಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.