ಕೆರೆಗೆ ಕಲುಷಿತ ನೀರು: ಮೀನುಗಳ ಸಾವು

ಹಾಸನ: ತಾಲ್ಲೂಕಿನ ಕೊಕ್ಕನಘಟ್ಟ ಕೆರೆ ನೀರು ಕಲುಷಿತಗೊಂಡು ಸೋಮವಾರ ನೂರಾರು ಮೀನುಗಳು ಮೃತಪಟ್ಟಿವೆ.
ಕೊಕ್ಕನಘಟ್ಟ ಗ್ರಾಮದ ಸಮೀಪದಲ್ಲಿರುವ ಹಿಮತ್ ಸಿಂಗ್ ಕಾ ಲೆನಿಲ್ ಕಾರ್ಖಾನೆಯಿಂದ ಕಲುಷಿತ ನೀರು ಕೆರೆಯನ್ನು ಸೇರುತ್ತಿದ್ದು, ಪರಿಣಾಮ ನೂರಾರು ಮೀನುಗಳು ಸಾವಿಗೀಡಾಗುತ್ತಿವೆ. ಹಿಂದೆಯೂ ಕೆರೆಗೆ ಕಲುಷಿತ ನೀರು ಬಿಡಲಾಗಿತ್ತು ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
‘ಕೆರೆ ನೀರು ಕಪ್ಪು ಬಣ್ಣಕ್ಕೆ ತಿರುಗುತ್ತಿದೆ. ಎಚ್ಚೆತ್ತುಕೊಳ್ಳದಿದ್ದರೆ ಮತ್ತಷ್ಟು ಮೀನುಗಳು ಸಾವಿಗೀಡಾಬೇಕಾಗುತ್ತವೆ.
ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿ ಕಲುಷಿತ ನೀರು ಬಿಡದಂತೆ ಹಿಮತ್‌ಸಿಂಗ್ ಕಾ ಕಂಪನಿಗೆ ಎಚ್ಚರಿಕೆ ನೀಡಬೇಕು’ಎಂದು ಕೊಕ್ಕನಘಟ್ಟ ಗ್ರಾಮಸ್ಥರಾದ ಮಹೇಶ್, ಚಂದ್ರೇಗೌಡ, ಸತೀಶ್‌ಗೌಡ, ಲೊಕೇಶ್‌ಗೌಡ, ನಾಗೇಶ್, ಕೆ.ಎಂ. ಲೋಕೇಶ್, ಉಮೇಶ್, ಗೌಡೇಶ್, ಮಂಜುನಾಥ್, ಚಂದ್ರು ಆಗ್ರಹಿಸಿದರು.
‘ಕೆರೆಯಲ್ಲಿ ಮೀನುಗಳು ಮೃತಪಟ್ಟಿರುವ ಬಗ್ಗೆ ಮಾಹಿತಿ ಇಲ್ಲ. ಅಧಿಕಾರಿಗಳಿಂದ ಮಾಹಿತಿ ಪಡೆದು, ಕಲುಷಿತ ನೀರು ಕೆರೆ ಸೇರದಂತೆ ಕ್ರಮ ಕೈಗೊಳ್ಳಲಾಗುವುದು’ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ಹೇಳಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.