ಹಾಸನ: ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಗುರುವಾರವೂ ಮಳೆಯ ಆರ್ಭಟ ಮುಂದುವರಿದಿದೆ.

ಹಾಸನ ನಗರ, ಸುತ್ತಮುತ್ತಲ ಪ್ರದೇಶ, ಸಕಲೇಶಪುರ, ಆಲೂರು, ಬೇಲೂರು, ವ್ಯಾಪ್ತಿಯಲ್ಲಿ ಜೋರು ಮಳೆಯಾಗಿದೆ. ಚನ್ನರಾಯಪಟ್ಟಣ, ಅರಕಲಗೂಡು, ಹೊಳೆನರಸೀಪುರ, ಅರಸೀಕೆರೆ ತಾಲ್ಲೂಕಿನಲ್ಲಿ ವಿವಿಧೆಡೆ ಸಾಧಾರಣ ಮಳೆಯಾಗಿದೆ.

ಹಾಸನದಲ್ಲಿ ಬುಧವಾರ ರಾತ್ರಿಯಿಂದಲೂ ಬೆಳಗಿನ ಜಾವದ ವರೆಗೆ ಜಿಟಿಜಿಟಿ ಮಳೆಯಾಯಿತು. ಬೆಳಿಗ್ಗೆ ಸ್ವಲ್ಪ ಬಿಡುವು ನೀಡಿತ್ತು. ಮಧ್ಯಾಹ್ನದ ನಂತರ ಮತ್ತೆ ಆರಂಭಗೊಂಡು ಸಂಜೆವರೆಗೂ ಸುರಿಯಿತು. ಹಾಸನದ ಹೊಸ ಲೈನ್ ರಸ್ತೆ ಸಂಪೂರ್ಣ ಗುಂಡಿಮಯವಾಗಿದ್ದು, ವಾಹನಗಳ ಓಡಾಟ ವಿರಳವಾಗಿತ್ತು.

ಹಾಸನ, ಸಕಲೇಶಪುರ ತಾಲ್ಲೂಕಿನಲ್ಲಿ ಸುರಿದ ಧಾರಾಕಾರ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿತು. ಮುಖ್ಯ ರಸ್ತೆಗಳೆಲ್ಲ ಜಲಾವೃತವಾಗಿ ಸಂಚಾರಕ್ಕೆ ತೊಂದರೆಯಾಗಿತ್ತು. ಜನರು ತುಂತುರು ಮಳೆಯಲ್ಲಿಯೇ ತೊಯ್ದುಕೊಂಡು ಹೋದರು.

ಮಾರನಹಳ್ಳಿಯಲ್ಲಿ 8 ಸೆ.ಮೀ. ಮಳೆ
ಗುರುವಾರ ಬೆಳಿಗ್ಗೆವರೆಗಿನ 24 ಗಂಟೆಯಲ್ಲಿ ದಾಖಲಾದ ಹೋಬಳಿವಾರು ಮಳೆ ವರದಿ: ಹಾಸನ ತಾಲ್ಲೂಕಿನ ಸಾಲಗಾಮೆ 2.4 ಮಿ.ಮೀ., ಹಾಸನ 1.6 ಮಿ.ಮೀ., ಕಟ್ಟಾಯ 14.3 ಮಿ.ಮೀ., ದುದ್ದ 0.8 ಮಿ.ಮೀ., ಶಾಂತಿಗ್ರಾಮ 2 ಮಿ.ಮೀ., ಗೊರೂರು 15.3 ಮಿ.ಮೀ. ಮಳೆಯಾಗಿದೆ.

ಸಕಲೇಶಪುರ ತಾಲ್ಲೂಕಿನ ಬಾಳ್ಳುಪೇಟೆ 16.3 ಮಿ.ಮೀ., ಸಕಲೇಶಪುರ 23.8 ಮಿ.ಮೀ., ಬೆಳಗೋಡು 18.6
ಮಿ.ಮೀ., ಹಾನಬಾಳು 34.2 ಮಿ.ಮೀ., ಶುಕ್ರವಾರ ಸಂತೆ 69 ಮಿ.ಮೀ., ಮಾರನಹಳ್ಳಿ 88.2 ಮಿ.ಮೀ., ಹೊಸೂರು 22 ಮಿ.ಮೀ., ಹೆತ್ತೂರು 77.4 ಮಿ.ಮೀ., ಯಸಳೂರು 48.1 ಮಿ.ಮೀ. ಮಳೆಯಾಗಿದೆ.

ಆಲೂರು ತಾಲ್ಲೂಕಿನ ಪಾಳ್ಯ 16.4ಮಿ.ಮೀ., ಆಲೂರು 8.4 ಮಿ.ಮೀ., ಕುಂದೂರು 25.8, ಕೆ. ಹೊಸಕೋಟೆ 37
ಮಿ.ಮೀ ಮಳೆಯಾಗಿದೆ. ಅರಸೀಕೆರೆ ತಾಲ್ಲೂಕಿನ ಬಾಣಾವರ 7 ಮಿ.ಮೀ., ಜಾವಗಲ್ 7.4 ಮಿ.ಮೀ., ಕಣಕಟ್ಟೆ 2.4
ಮಿ.ಮೀ., ಗಂಡಸಿ 1.2 ಮಿ.ಮೀ., ಮಳೆ ಸುರಿದಿದೆ.
ಅರಕಲಗೂಡು ತಾಲ್ಲೂಕಿನ ಮಲ್ಲಿಪಟ್ಟಣ 13 ಮಿ.ಮೀ., ಕೊಣನೂರು 4 ಮಿ.ಮೀ., ಬಸವಾಪಟ್ಟಣ 1.8 ಮಿ.ಮೀ.,
ರಾಮನಾಥಪುರ 2 ಮಿ.ಮೀ., ದೊಡ್ಡಮಗ್ಗೆ 4.2 ಮಿ.ಮೀ. ದೊಡ್ಡ ಬೆಮ್ಮತ್ತಿ 7.3 ಮಿ.ಮೀ., ಕಸಬಾ 7 ಮಿ.ಮೀ.
ಮಳೆಯಾಗಿದೆ.

ಬೇಲೂರು ತಾಲ್ಲೂಕಿನ ಹಳೆಬೀಡು 11.4 ಮಿ.ಮೀ., ಬೇಲೂರು 11.2 ಮಿ.ಮೀ., ಹಗರೆ 5 ಮಿ.ಮೀ., ಬಿಕ್ಕೋಡು 15 ಮಿ.ಮೀ., ಗೆಂಡೆಹಳ್ಳಿ 32.0 ಮಿ.ಮೀ, ಅರೆಹಳ್ಳಿ 26 ಮಿ.ಮೀ., ಮಳೆಯಾಗಿದೆ.

ಚನ್ನರಾಯಪಟ್ಟಣ ತಾಲ್ಲೂಕಿನ ಕಸಬಾ 2.4 ಮಿ.ಮೀ., ಬಾಗೂರು 2.2 ಮಿ.ಮೀ., ನುಗ್ಗೇಹಳ್ಳಿ 2.2 ಮಿ.ಮೀ., ಶ್ರವಣಬೆಳಗೊಳ 4.8 ಮಿ.ಮೀ., ಮಳೆಯಾಗಿದೆ.
ಹೊಳೆನರಸೀಪುರ ತಾಲ್ಲೂಕಿನ ಹಳೆಕೋಟೆ 10.4 ಮಿ.ಮೀ. ಹೊಳೆನರಸೀಪುರ 4.6 ಮಿ.ಮೀ., ಹಳ್ಳಿ ಮೈಸೂರು 2.2 ಮಿ.ಮೀ. ಮಳೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.