ಹಾಸನ: ಉಪ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಪತ್ನಿ ಸಮೇತರಾಗಿ ಹಾಸನಾಂಬೆ ದೇವಿ ದರ್ಶನ ಪಡೆದರು. ಡಿ.ಕೆ.ಶಿವಕುಮಾರ್ ಅವರಿಗೆ ಮಂಗಳವಾದ್ಯಗಳೊಂದಿಗೆ ಸ್ವಾಗತ ಕೋರಲಾಯಿತು.

ದರ್ಶನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ‘ನಾನು, ನನ್ನ ಕುಟುಂಬ, ಶಾಸಕರಾದ ಶಿವಲಿಂಗೇಗೌಡ, ರಾಜೇಗೌಡ ದೇವಿ ದರ್ಶನಕ್ಕೆ ಬಂದಿದ್ದೇವೆ. ನಾನೊಬ್ಬ ಭಕ್ತನಾಗಿ ಬಂದಿದ್ದೇನೆ. ಉಪ ಮುಖ್ಯಮಂತ್ರಿ, ಪಕ್ಷದ ಅಧ್ಯಕ್ಷನಾಗಿ ಬಂದಿಲ್ಲ ಎಂದರು.

ಐದು ವರ್ಷ ಸತತವಾಗಿ ಬಂದಿದ್ದೆ. ಕಳೆದ ವರ್ಷ ಭಾರತ್ ಜೋಡೋ ಕಾರ್ಯಕ್ರಮದಿಂದ ಬಂದಿರಲಿಲ್ಲ. ತಾಯಿಯ ಆಶೀರ್ವಾದಿಂದ ನಾಡಿನ ಜನರ ಸೇವೆ ಮಾಡುವ ಅವಕಾಶ ಸಿಕ್ಕಿದೆ ಎಂದರು.

ನನಗೆ ದೇವರ ಬಗ್ಗೆ ನಂಬಿಕೆ ಇದೆ. ರಾಜ್ಯದಲ್ಲಿ ಮಳೆ, ಬೆಳೆಯಾಗಿ ಎಲ್ಲರೂ ಸಮೃದ್ದಿಯಾಗಿರಲಿ. ಎಲ್ಲ ವರ್ಗದ ಜನರಿಗೆ ಸುಖ, ಶಾಂತಿ ಸಿಗಲಿ ಎಂದು ಬೇಡಿದ್ದೇನೆ. ಮುಖ್ಯಮಂತ್ರಿ ಕೂಡ ದೇವಿಯ ದರ್ಶನಕ್ಕೆ ಬಂದಿದ್ದರು ಎಂದರು.

ಮೊದಲು ಭಕ್ತ, ಆಮೇಲೆ ಉಪಮುಖ್ಯಮಂತ್ರಿ, ಆಮೇಲೆ ಪಕ್ಷದ ಅಧ್ಯಕ್ಷ. ಮೂರು ಕೆಲಸ ಮಾಡಲು ಕುಟುಂಬ ಸಮೇತನಾಗಿ ಬಂದಿದ್ದೇನೆ. ಈಗ ಸದ್ಯ ನಮಗೆ ದೇವಿ ಶಕ್ತಿ ಕೊಟ್ಟಿದ್ದಾಳೆ ಎಂದರು.

136 ಜನ ಜೊತೆಗೆ ಇಬ್ಬರು ಪಕ್ಷೇತರ ಶಾಸಕರು ಶಕ್ತಿ ಸಿಕ್ಕಿದೆ. ಈ ಶಕ್ತಿಯಿಂದ ಎಲ್ಲ ಜನರ ಬದುಕಿನಲ್ಲಿ ಬದಲಾವಣೆ ತರುವಂತಹ ಆಶೀರ್ವಾದ ಆ ತಾಯಿ ಕೊಡಲಿ ಎಂದು ಪ್ರಾರ್ಥಿಸಿದ್ದೇನೆ ಎಂದು ಹೇಳಿದರು.

ರಾಜಕೀಯದ ಬಗ್ಗೆ ಮಾತನಾಡಲು ಡಿ.ಕೆ. ಶಿವಕುಮಾರ್ ನಿರಾಕರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.