ಕೊಣನೂರು: ಶಿಕ್ಷಣದ ಜೊತೆಗೆ ಸಂಸ್ಕಾರ ನೀಡಿದಾಗ ವಿದ್ಯಾರ್ಥಿಗಳ ಭವಿಷ್ಯದಲ್ಲಿ ಶಾಂತಿ ನೆಮ್ಮದಿ ನೆಲೆಸಲು ಸಾಧ್ಯ ಎಂದು ಅಖಿಲಭಾರತ ವೀರಶೈವ ಮಹಾಸಬಾದ ಅರಕಲಗೂಡು ತಾಲ್ಲೂಕು ಘಟಕದ ಅಧ್ಯಕ್ಷ ಸುರೇಶ ಹೇಳಿದರು.

ರಾಮನಾಥಪುರ ಹೋಬಳಿಯ ಬಸವಾಪಟ್ಟಣದ ಶ್ರೀ ತೋಂಟದಾರ್ಯ ಸಭಾಭವನದಲ್ಲಿ ಇಲ್ಲಿನ ಎಸ್ ಸಿ ವಿ ಡಿ ಎಸ್ ಅನುದಾನಿತ ಶಾಲೆಯ ನಿವೃತ್ತ ಶಿಕ್ಷಕರಿಗೆ ಸನ್ಮಾನ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ಎಚ್.ಬಿ.ಲಿಂಗಮೂರ್ತಿ ಹಾಗೂ ಕೆ.ವಿ ಚಂದ್ರಶೇಖರ್ ಮತ್ತು ಎನ್.ಎಚ್ ಶಿವಮೂರ್ತಿ, ಬಿ.ಎಂ. ಜಯಣ್ಣ, ಜಿ. ಮಹೇಶ್, ನಳಿನಿ ಹಾಗೂ ಅಶೋಕ್ರಿಗೆ ಗುರುವಂದನೆ ಸಲ್ಲಿಸಿ ಅವರು ಮಾತನಾಡಿದರು.

‘ಗುರುವಿಗೆ ಸಮಾಜದಲ್ಲಿ ಉತ್ತಮ ಸ್ಥಾನವಿದ್ದು, ಗುರುವಿನಿಂದ ದೊರಕುವ ಸಂಸ್ಕಾರ ಬಹಕಾಲ ಬಾಳುತ್ತದೆ. ತಂದೆ ತಾಯಿಗಳು ಮತ್ತು ಸಮಾಜವು ಈ ನಿಟ್ಟಿನಲ್ಲಿ ಗಮನಹರಿಸಬೇಕು’ ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ 2024-25 ನೇ ಸಾಲಿನಲ್ಲಿ ಹೆಚ್ಚಿನ ಅಂಕ ಪಡೆದ ಸಂಸ್ಥೆಯ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ಮಾಡಲಾಯಿತು. ಉದ್ಯಮಿ ಅಂಬರೀಷ್, ಬಿ.ಜಿ ಚನ್ನಬಸಪ್ಪ, ಮಹೇಂದ್ರಕುಮಾರ್ ಮಾತನಾಡಿ ಎಸ್.ಸಿ.ವಿ ಡಿ ಎಸ್ ಶಾಲೆಯ, ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.

ಸಿ ಆರ್.ಪಿ ವಿಶ್ವಶ್ವೇರಯ್ಯ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಜಗದೀಶ್, ನಿವೃತ್ತ ಶಿಕ್ಷಕ ಟಿ ಮಲ್ಲೇಶ್, ಪತ್ರಕರ್ತ ಎಂ.ಎನ್.ಕುಮಾರಸ್ವಾಮಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.