ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳೇಬೀಡಿನ ಕೆಪಿಎಸ್‌ನಲ್ಲಿ ಇಂಗ್ಲಿಷ್ ಫೆಸ್ಟ್

ಶಾಲೆಗೆ ಅನುದಾನ: ಕ್ಷೇತ್ರಶಿಕ್ಷಣಾಧಿಕಾರಿ ಕೆ.ಪಿ.ನಾರಾಯಣ ಭರವಸೆ
Published 1 ಫೆಬ್ರುವರಿ 2024, 13:23 IST
Last Updated 1 ಫೆಬ್ರುವರಿ 2024, 13:23 IST
ಅಕ್ಷರ ಗಾತ್ರ

ಹಳೇಬೀಡು: ಹಳೇಬೀಡಿನ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಗುರುವಾರ ಇಂಗ್ಲಿಷ್ ಫೆಸ್ಟ್ ನಡೆಯಿತು.

ಎಲ್‌ಕೆಜಿಯಿಂದ 7 ನೇ ತರಗತಿಯ ಮಕ್ಕಳು ವಿವಿಧ ಚಟುಚವಟಿಕೆಯಲ್ಲಿ ಭಾಗವಹಿಸಿದ್ದರು. ಹರಳು ಹುರಿದಂತೆ ಎಲ್ಲ ಮಕ್ಕಳು ಇಂಗ್ಲಿಷ್ ಮಾತನಾಡಿ ಗಮನ ಸೆಳೆದರು. ವಿವಿಧ ವೇಷಭೂಷಣ ಧರಿಸಿದ ಮಕ್ಕಳು ಸ್ಪಷ್ಟವಾಗಿ ಇಂಗ್ಲಿಷ್ ಭಾಷೆ ಮಾತನಾಡಿದ್ದನ್ನು ನೋಡಿ ಪೋಷಕರು ಸಂತಸ ವ್ಯಕ್ತಪಡಿಸಿದರು.

ಸ್ವಾಗತ, ನಿರೂಪಣೆ, ವಂದನಾರ್ಪಣೆ ಎಲ್ಲ ಚಟುವಟಿಕೆಯೂ ಇಂಗ್ಲಿಷ್‌ನಲ್ಲಿಯೇ ನಡೆಯಿತು. ನಾಟಕದ ಸಂಭಾಷಣೆ, ಭಾಷಣದ ಮಾತುಗಳು, ಹಾಡುಗಳು ಸ್ವಚ್ಛ ಇಂಗ್ಲಿಷ್ ಭಾಷೆಯಲ್ಲಿ ಕೇಳಿ ಬಂದವು. ಸ್ವಾಗತ ನೃತ್ಯ, ಸ್ವಾಗತ ಭಾಷಣ, ವಾರ್ಷಿಕ ವರದಿ, ಕಂಠಪಾಠ, ಕಥೆ ಹೇಳುವುದು, ಕಾಮಿಡಿ ಮೊದಲಾದ ಕಾರ್ಯಕ್ರಮಗಳು ನಡೆದವು.

ಮುಖ್ಯಶಿಕ್ಷಕ ಎಚ್.ಆರ್.ನಾಗರಾಜು ಅವರ ಸಲಹೆ ಸಹಕಾರದಲ್ಲಿ ನಡೆದ ಫೆಸ್ಟ್ ಅನ್ನು ಶಿಕ್ಷಕರಾದ ಕಲಾವತಿ, ಶಶಿಧರ ಹಾಗೂ ಶಮಂತ್ ನಿರ್ವಹಿಸಿದರು. ಕ್ರೀಡಾ ಸಾಧಕಿ ಕಲಾವತಿ, ಚಿತ್ರಕಲಾ ಪರಿಣತ ಶಂಕರೇಗೌಡ ಅವರನ್ನು ಅಭಿನಂದಿಸಲಾಯಿತು.

ಕ್ಷೇತ್ರಶಿಕ್ಷಣಾಧಿಕಾರಿ ಕೆ.ಪಿ.ನಾರಾಯಣ ಮಾತನಾಡಿ, ಹಳೇಬೀಡಿನ ಕೆಪಿಎಸ್ ಶಾಲೆಯಲ್ಲಿ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಮಕ್ಕಳು ಕಲಿಯುತ್ತಿದ್ದಾರೆ. ಅನುದಾನ ಬಂದಾಗ ಹಳೇಬೀಡು ಕೆಪಿಎಸ್ ಶಾಲೆಗೆ ಮೊದಲ ಆದ್ಯತೆ ನೀಡಲಾಗುವುದು. ಮಾತೃಭಾಷೆ ಜೊತೆಯಲ್ಲಿ ಇಂಗ್ಲಿಷ್ ಭಾಷಾ ಜ್ಞಾನವನ್ನು ಹೆಚ್ಚಿಸುವ ಉದ್ದೇಶದಿಂದ ಜಿಲ್ಲೆಯಾದ್ಯಂತ ಎಲ್ಲ ಸರ್ಕಾರಿ ಶಾಲೆಯಲ್ಲಿಯೂ ಇಂಗ್ಲಿಷ್ ಫೆಸ್ಟ್ ನಡೆಯುತ್ತಿದೆ ಎಂದರು.

ಶಾಲೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಬಿ.ಎಸ್.ಸೋಮಶೇಖರ್ ಉದ್ಘಾಟನೆ ನೆರವೇರಿಸಿದರು. ಪ್ರಾಂಶುಪಾಲರಾದ ವಿನೂತ.ಬಿ.ಎಸ್, ಉಪ ಪ್ರಾಂಶುಪಾಲ ಮುಳ್ಳಯ್ಯ, ಬಿಆರ್ಪಿ ಮೋಹನರಾಜು, ಸಿಆರ್ಪಿ ನಾರಾಯಣ. ಶಾಲಾಭಿವೃದ್ದಿ ಉಪಾಧ್ಯಕ್ಷ ಅಶೋಕ್, ಖಜಾಂಚಿ ಎಚ್.ಪರಮೇಶ್, ಸದಸ್ಯರಾದ ಎಚ್.ಎಂ.ಗೋವಿಂದಪ್ಪ, ಬಸವರಾಜು, ಸಲ್ಮಾ, ರಮೇಶ, ಸೋಮಶೇಖರ್, ನಿಂಗೇಗೌಡ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT