ಭಾನುವಾರ, ಫೆಬ್ರವರಿ 28, 2021
20 °C
ತುಮಕೂರಿನ ಸಿರಾ ಯುವಜನ ಒಕ್ಕೂಟದಿಂದ ಬೈಕ್‌ ರ‍್ಯಾಲಿ

ಹಾಸನ: ಯುವ ಸಬಲೀಕರಣ ನಿಗಮ ಸ್ಥಾಪನೆಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಸ್ವಾಮಿ ವಿವೇಕಾನಂದ ಯುವ ಸಬಲೀಕರಣ ನಿಗಮ ಸ್ಥಾಪಿಸುವಂತೆ ಆಗ್ರಹಿಸಿ ತುಮಕೂರು ಜಿಲ್ಲೆಯ ಸಿರಾ ಯುವಜನ ಒಕ್ಕೂಟ ಹಮ್ಮಿಕೊಂಡಿರುವ ಮಂಗಳೂರುವರೆಗಿನ ಬೈಕ್‌ ರ‍್ಯಾಲಿ ಶನಿವಾರ ಹಾಸನ ತಲುಪಿತು.

ಸಿರಾ ಯುವಜನ ಒಕ್ಕೂಟದ ಸದಸ್ಯರು ತುಮಕೂರು, ಹಾಸನ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಬೈಕ್ ಜಾಥಾ ನಡೆಸುವರು. ಮಂಗಳೂರಿನಲ್ಲಿ ಯುವ ಜನರು ಯುವ ಸಬಲೀಕರಣ ನಿಗಮ ಸ್ಥಾಪನಗೆ ಒತ್ತಾಯಿಸಿ ನಡೆಸುತ್ತಿರುವ ‘ಯುವಜನ ಹಕ್ಕುಗಳ ಆಂದೋಲನ’ಕ್ಕೆ ಬೆಂಬಲ ಸೂಚಿಸಿ, ಅಲ್ಲಿ ಆಯೋಜಿಸಿರುವ ಯುವಜನ ಹಬ್ಬದಲ್ಲಿ ಭಾಗವಹಿಸಲಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಿರಾ ಯುವಜನ ಒಕ್ಕೂಟದ ಸಿ.ಎಂ.ಎಸ್. ಗೌಡ, ‘ಯುವಜನರು ದೇಶದ
ಆಸ್ತಿ ಎಂದು ಸರ್ಕಾರ ಮತ್ತು ಸಮಾಜ ಪ್ರತಿಪಾದಿಸುತ್ತವೆ. ದೇಶದ ಜನಸಂಖ್ಯೆಯಲ್ಲಿ ಶೇಕಡಾ 50 ರಷ್ಟು ಯುವ ಸಮುದಾಯವಿದೆ. ಕರ್ನಾಟಕದಲ್ಲಿ 1 ಕೋಟಿ 80 ಲಕ್ಷ ಯುವ ಜನರಿದ್ದಾರೆ. ಇದಕ್ಕಾಗಿ ರಾಜ್ಯದಲ್ಲಿ ಸ್ವಾಮಿ ವಿವೇಕಾನಂದ ಯುವ ಸಬಲೀಕರಣ ನಿಗಮ ಸ್ಥಾಪನೆಗೆ ಕರ್ನಾಟಕ ರಾಜ್ಯ ಯುವ ನೀತಿಯು 2021ರಲ್ಲಿ ಶಿಫಾರಸು ಮಾಡಿತ್ತು. ಅದರೆ, ಅಂದಿನ ಬಿಜೆಪಿ ಸರ್ಕಾರದ ಅವಧಿ ಪೂರ್ಣಗೊಂಡಿದ್ದರಿಂದ ನಿಗಮಕ್ಕೆ ಹಿನ್ನಡೆಯಾಯಿತು’ ಎಂದರು.

‘ರಾಜ್ಯದಲ್ಲಿ ಈಗ ಮತ್ತೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ. ಸಿರಾ ಯುವಜನ ಒಕ್ಕೂಟವು ಹಲವು ಬಾರಿ
ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ಆದರೆ ಇನ್ನೂ ಗಮನಹರಿಸಿಲ್ಲ. ನಿಗಮ ಸ್ಥಾಪನೆಯಾದರೆ ಎಲ್ಲ ಜಾತಿ, ಧರ್ಮಗಳ ಯುವ ಜನರಿಗೆ ಅನುಕೂಲವಾಗಲಿದೆ’ ಎಂದರು.

ಒಕ್ಕೂಟದ ಸದಸ್ಯರಾದ ಭವ್ಯ, ಮೇಘಾ, ಪೂಜಾ, ಜಲಜಾ, ಚಂದ್ರಕಲಾ, ಜಿ.ಕೆ.ಮಂಜುನಾಥ,
ಅಜೇಯ್, ಭೂತರಾಜು, ಮಂಜುನಾಥ, ಜೆ.ಎಸ್.ಜನಾರ್ಧನ ಪಾಲ್ಗೊಂಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು