ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರೀಸಾವೆ: ನೋಂದಣಿ ಇಲ್ಲದೆ ಹಿಂದಿರುಗಿದ ರೈತರು

ಬೆಳಿಗ್ಗೆಯಿಂದಲೇ ಸರತಿ ಸಾಲಿನಲ್ಲಿ ನಿಂತಿದ್ದ ನೂರಾರು ಮಂದಿ
Published 21 ಫೆಬ್ರುವರಿ 2024, 12:36 IST
Last Updated 21 ಫೆಬ್ರುವರಿ 2024, 12:36 IST
ಅಕ್ಷರ ಗಾತ್ರ

ಹಿರೀಸಾವೆ: ನಾಫೆಡ್‌ಗೆ ಬೆಂಬಲ ಬೆಲೆಯಲ್ಲಿ ಉಂಡೆ ಕೊಬ್ಬರಿ ಮಾರಾಟಕ್ಕೆ ಹೆಸರು ನೋಂದಾಯಿಸಲು ಬುಧವಾರ ಬೆಳಿಗ್ಗೆ ನೂರಾರು ರೈತರು ಇಲ್ಲಿನ ಕೃಷಿ ಪತ್ತಿನ ಸಹಕಾರ ಸಂಘದ ಮಂದೆ ತಮ್ಮ ಸರದಿಗಾಗಿ ಕಾದು ಕುಳಿತಿದ್ದ ರೈತರು, ನೋಂದಣಿ ಇಲ್ಲ ಎಂದು ತಿಳಿದು ಸರ್ಕಾರವನ್ನು ಶಪಿಸುತ್ತ ಹಿಂದಿರುಗಿದರು.

ಕಳೆದ ವಾರ ನೋಂದಣಿ ಮಾಡಿದ್ದನ್ನು ಸರ್ಕಾರ ರದ್ದು ಪಡಿಸಿ, ಹೊಸದಾಗಿ ಇಂದಿನಿಂದ ಹೆಸರು ನೋಂದಾಯಿಸಿ ಕೊಳ್ಳುವುದಾಗಿ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಎಸ್ ಪಾಟಿಲ್ ಮಂಗಳವಾರ ವಿಧಾನ ಪರಿಷತ್‌ನಲ್ಲಿ ಹೇಳಿದ್ದರು. ಈ ಸುದ್ದಿಯಿಂದ ಇಂದಿನಿಂದ ನೋಂದಣಿ ಪ್ರಾರಂಭವಾಗುತ್ತದೆ ಎಂದು ತಿಳಿದು, ಬೆಳಗ್ಗೆ 6 ಗಂಟೆಗೆ ಇಲ್ಲಿನ ಕೃಷಿ ಪತ್ತಿನ ಸಹಕಾರ ಸಂಘದ ಬಳಿ ವೃದ್ಧರು, ಮಹಿಳೆಯರ ಸೇರಿದಂತೆ ನೂರಾರು ಜನರು ಸರತಿಯಲ್ಲಿ ಗಂಟೆಗಟ್ಟೆಲೆ ಕಾದು ಕುಳಿತಿದ್ದರು. 9 ಗಂಟೆಯಾದರೂ ನಾಫೆಡ್‌ನ ಅಧಿಕಾರಿಗಳು ಬರಲಿಲ್ಲ, ಬುಧವಾರ ನೋಂದಣಿ ಇಲ್ಲ ಎಂದು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ನಿರ್ದೇಶಕ ಸಿ.ಎನ್. ಪುಟ್ಟಸ್ವಾಮಿಗೌಡ, ಶಾಸಕ ಸಿ.ಎನ್. ಬಾಲಕೃಷ್ಣ ಮತ್ತು ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಎ. ಗೋಪಾಲಸ್ವಾಮಿ ಅವರು ಸ್ಥಳೀಯರ ಮೂಲಕ ರೈತರಿಗೆ ತಿಳಿಸಿದಾಗ, ಬೇಸರದಿಂದ ರೈತರು ಹಿಂದಿರುಗಿದರು. ಮಧ್ಯಾಹ್ನದವರೆಗೆ ರೈತರು ಕೃಷಿ ಪತ್ತಿನ ಸಹಕಾರ ಸಂಘದ ಬಳಿಗೆ ಬಂದು ಮಾಹಿತಿ ಕೇಳುತ್ತಿದ್ದರು.

ಈ ಹಿಂದೆ ಹೆಚ್ಚು ಉಪಕರಣಗಳನ್ನು ಬಳಸಿಕೊಂಡು, ಅಂತರ ಜಿಲ್ಲೆಯವರ ಹೆಸರನ್ನು ನೋಂದಾಯಿಸಿರುವುದು ಪತ್ತೆಯಾಗಿದೆ. ಹೊಸ ತಂತ್ರಾಂಶವನ್ನು ಸಿದ್ಧಪಡಿಸಲು ಒಂದು ವಾರ ಬೇಕು. ಆಯಾಯಾ ಜಿಲ್ಲೆಯವರು, ನಿಗದಿಪಡಿಸಿರುವ ಸ್ಥಳಗಳಲ್ಲಿ ನೋಂದಣಿ ಮಾಡಿಸುವಂತೆ ತಂತ್ರಾಂಶವನ್ನು ರೂಪಿಸಲಾಗುವುದು ಎಂದು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ನಿರ್ದೇಶಕ ಸಿ.ಎನ್. ಪುಟ್ಟಸ್ವಾಮಿಗೌಡ ಬುಧವಾರ ಹಿರೀಸಾವೆಯಲ್ಲಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT