ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಲ್ಲೇಮಕ್ಕಿ: ಕಾಡಾನೆ ‘ಕರಡಿ’ ‘ಕ್ಯಾಪ್ಟನ್’ ಕಾದಾಟ

Published 15 ಏಪ್ರಿಲ್ 2024, 20:20 IST
Last Updated 15 ಏಪ್ರಿಲ್ 2024, 20:20 IST
ಅಕ್ಷರ ಗಾತ್ರ

ಬೇಲೂರು (ಹಾಸನ ಜಿಲ್ಲೆ): ತಾಲ್ಲೂಕಿನ ಅರೇಹಳ್ಳಿ ಹೋಬಳಿಯ ಹುಲ್ಲೇಮಕ್ಕಿ ಗ್ರಾಮದಲ್ಲಿ, ಕಾಡಾನೆ ಹಿಂಡಿನಿಂದ ‌ಬೇರ್ಪಟ್ಟ ಎರಡು ಕಾಡಾನೆಗಳ ನಡುವೆ ಸೋಮವಾರ ಅರ್ಧ ಗಂಟೆಗೂ ಹೆಚ್ಚು ಸಮಯ ಕಾದಾಟ ನಡೆಯಿತು.

ಹುಲ್ಲೇಮಕ್ಕಿ ಗ್ರಾಮದ ಯೂನಸ್ ಅವರ ಮನೆಯ ಮುಂಭಾಗದ ಗೇಟಿನ ಸಮೀಪವೇ ಕರಡಿ ಹಾಗೂ ಕ್ಯಾಪ್ಟನ್ ಎಂಬ ಹೆಸರಿನ ಕಾಡಾನೆಗಳು ಕಾದಾಡಿದವು. ಜನರ ಕೂಗಾಟ ಕಿರುಚಾಟ, ಪಟಾಕಿ ಶಬ್ದಕ್ಕೂ ಹೆದರಲಿಲ್ಲ. ನಂತರ ಕಾಡಿಗೆ ಮರಳಿದವು.

ಸ್ಥಳಕ್ಕೆ ಧಾವಿಸಿದ ವಲಯ ಅರಣ್ಯಾಧಿಕಾರಿ, ಇಟಿಎಫ್ ಮತ್ತು ಆರ್‌ಆರ್‌ಟಿ ಸಿಬ್ಬಂದಿ, ಆನೆಗಳು ಸಾಗಿದ ಬಗ್ಗೆ ಮಾಹಿತಿ ಪಡೆದರು. ಆನೆಗಳ ಚಲನವಲನದ ಬಗ್ಗೆ ನಿಗಾ ಇಟ್ಟಿದ್ದು, ಗ್ರಾಮಸ್ಥರು ಎಚ್ಚರಿಕೆ ವಹಿಸುವಂತೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT