ಅರಸೀಕೆರೆ: ರಾಜ್ಯದಲೇ ಖ್ಯಾತಿ ಪಡೆದಿರುವ ಅರಸೀಕೆರೆಯ ಪ್ರಸನ್ನ ಗಣಪತಿಯ 84ನೇ ವರ್ಷದ ಮಹೋತ್ಸವವನ್ನು ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದ್ದು, ಸುಂದರ ಆಸ್ಥಾನ ಮಂಟಪ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದರು.

ನಗರದ ಗಾಂಧಿ ಮೈದಾನದಲ್ಲಿ ಪ್ರತಿ ವರ್ಷದಂತೆ ಆಸ್ಥಾನ ಮಂಟಪ ನಿರ್ಮಾಣಕ್ಕೆ ಭಾನುವಾರ ಕಂಬದ ಪೂಜೆ ನೆರವೇರಿಸಿ ಭಾನುವಾರ ಮಾತನಾಡಿದರು. ಅರಸೀಕೆರೆ ಗಣಪತಿ ಪೆಂಡಾಲ್ ಎಂದರೆ ಜನಾಕರ್ಷಣೆಯ ಕೇಂದ್ರವಾಗಿ ಗುರುತಿಸಿಕೊಂಡಿದೆ. ಸುಂದರ ಆಸ್ಥಾನ ಮಂಟಪದ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದ್ದು ಇಂದಿನಿಂದ ಕೆಲಸ ಆರಂಭವಾಗಲಿದೆ. ಸಂಪ್ರದಾಯದ ಪ್ರಕಾರ ಗಣಪತಿ ಪೆಂಡಾಲ್ ನಿರ್ಮಾಣ ಮಾಡುವಾಗ ಪ್ರಥಮ ಬಾರಿಗೆ ಕಂಬದ ಪೂಜೆ ನೆರವೇರಿಸುವುದು ಆಚರಣೆಯಲ್ಲಿದೆ. ಇದರರ್ಥ ಕೆಲಸವು ಯಾವುದೇ ಅಡೆತಡೆಗಳಿಲ್ಲದೆ ನಡೆಯಲಿ ಎಂದು ಗಣಪತಿ ಆಶೀರ್ವಾದ ಪಡೆಯುವ ಆಚರಣೆಯಾಗಿದೆ ಎಂದರು.

ಅಧ್ಯಕ್ಷ ರವೀಂದ್ರನಾಥ್ ಮಾತನಾಡಿ, ಪ್ರಸನ್ನ ಗಣಪತಿ ಪೆಂಡಾಲ್ನ ಭವ್ಯ ಆಸ್ಥಾನ ಮಂಟಪವನ್ನು ಮೈಸೂರು ಅರಮನೆ ಮಾದರಿಯಲ್ಲಿ ನಿರ್ಮಾಣ ಮಾಡಲಾಗುತ್ತದೆ ಹಾಗೂ ಆಕರ್ಷಕ ವಿದ್ಯುತ್ ದೀಪಾಲಂಕಾರ ನಡೆಯಲಿದೆ ಎಂದರು.

ನಗರಸಭಾ ಅಧ್ಯಕ್ಷ ಎಂ.ಸಮೀವುಲ್ಲಾ, ನಗರಸಭಾ ಸದಸ್ಯ ದರ್ಶನ್, ಕರವೇ ಉಪಾಧ್ಯಕ್ಷ ಹೇಮಂತ್ಕುಮಾರ್ ಪ್ರಸನ್ನ ಗಣಪತಿ ಭಕ್ತ ಮಂಡಳಿಯ ಪದಾಧಿಕಾರಿಗಳಾದ ಕುಮಾರಸ್ವಾಮಿ, ನಾಗಭೂಷಣ್, ಸ್ವಾಮಿ, ವಿಭವ್ ಇಟಗಿ, ವಿನೋದ್, ಬಾಲಾಜಿ, ಗೋಪಿನಾಥ್, ರಾಜೇಶ್, ಸಂತೋಷ್ ಮಠ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.