ಬೇಲೂರು (ಹಾಸನ): ವಿನಾಯಕ ಮೂರ್ತಿಗೆ ಅಪಮಾನ ಮಾಡಿದ್ದನ್ನು ಖಂಡಿಸಿ, ಪಟ್ಟಣದಲ್ಲಿ ಸೋಮವಾರ ಅರ್ಧ ದಿನ ಬಂದ್ ಆಚರಿಸಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಸೋಮವಾರ ಚನ್ನಕೇಶವ ದೇಗುಲದಿಂದ ಜಲ ತಂದು ವಿನಾಯಕ ಮೂರ್ತಿಗೆ ದೇಗುಲದಲ್ಲಿ ಅಭಿಷೇಕ ನಡೆಸಲಾಯಿತು. ಮೂರ್ತಿಯನ್ನು ಶುದ್ಧೀಕರಿಸಿ, ಅಭಿಷೇಕ, ಹೋಮ ಹವನಗಳನ್ನು ನೆರವೇರಿಸಲಾಯಿತು. ನಂತರ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ಇದಕ್ಕೂ ಮೊದಲು ಮಾತನಾಡಿದ ಶಾಸಕ ಎಚ್.ಕೆ. ಸುರೇಶ್, ‘ವಿನಾಯಕ ಮೂರ್ತಿಗೆ ಚಪ್ಪಲಿ ಇಟ್ಟಿರುವ ಲೀಲಮ್ಮನ ಹಿಂದೆ ಯಾರಿದ್ದಾರೆ ಎಂಬುದನ್ನು ಪತ್ತೆ ಮಾಡುವಂತೆ ಆಗ್ರಹಿಸಿ ಶಾಂತಿಯುತ ಪ್ರತಿಭಟನೆ ನಡೆಸಿದ್ದೇವೆ’ ಎಂದರು.

ಮಾನಸಿಕ ಅಸ್ವಸ್ಥೆ:

‘ಲೀಲಮ್ಮಗೆ 6 ವರ್ಷಗಳಿಂದ ಮಾನಸಿಕ ಆರೋಗ್ಯ ಸರಿಯಿಲ್ಲ’ ಎಂದು ಪ್ರಕರಣದಲ್ಲಿ ಬಂಧಿತಳಾಗಿರುವ ಲೀಲಮ್ಮ ಅವರ ತಾಯಿ ಲಕ್ಷಮ್ಮ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.