ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮಾನ್ಯ ಜನರ ಜೀವನದ ಜೊತೆ ಸರ್ಕಾರ ಚಲ್ಲಾಟವಾಡುತ್ತಿದೆ: ಎಚ್‌.ಡಿ.ಕುಮಾರಸ್ವಾಮಿ

ಬೆಂಗಳೂರಿನ ಡಾ.ಶಿವರಾಮ ಕಾರಂತ ಬಡಾವಣೆಯಲ್ಲಿನ ಮನೆಗಳ ತೆರವು
Last Updated 25 ಅಕ್ಟೋಬರ್ 2021, 11:31 IST
ಅಕ್ಷರ ಗಾತ್ರ

ಹಿರೀಸಾವೆ: ‘ಬೆಂಗಳೂರಿನ ಡಾ.ಶಿವರಾಮ ಕಾರಂತ ಬಡಾವಣೆಯ ಮನೆಗಳನ್ನು ತೆರವುಗೊಳಿಸುವ ಮೂಲಕ ಸರ್ಕಾರ ಜನಸಾಮಾನ್ಯರ ಜೀವನದ ಜೊತೆ ಚಲ್ಲಾಟವಾಡುತ್ತಿದೆ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಸೋಮವಾರ ಇಲ್ಲಿನ ಸುಶೀಲಮ್ಮ ಎನ್.ಗಂಗಾಧರ್ ಕನ್ವೆನ್ಷನ್ ಹಾಲ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಇಂದು ಕಟ್ಟಡಗಳನ್ನು ಒಡೆದು ಹಾಕುತ್ತಿದ್ದು, ಅದನ್ನು ತಡೆಯಲು ಹೋದ ನಮ್ಮ ಪಕ್ಷದ ಎಂಎಲ್ಎ (ಆ ಭಾಗದ) ಮಂಜುನಾಥ್ ಅವರನ್ನು ಸರ್ಕಾರ ಬಂಧಿಸಿದೆ. ಜನರ ಪರವಾಗಿ ಹೋದ ಶಾಸಕರ ಮೇಲೆ ಸರ್ಕಾರ ಈ ರೀತಿಯ ಕ್ರಮ ಕೈಗೊಂಡಿರುವುದು ಸರಿಯಲ್ಲ’ ಎಂದರು.

‘ಈಗಿನ ಬಿಡಿಎ ಅಧ್ಯಕ್ಷ ವಿಶ್ವನಾಥ ನಮ್ಮ ಸರ್ಕಾರ ಇದ್ದಾಗ ಆದೇ ಬಡಾವಣೆಯ ಜನರ ಪರವಾಗಿ ಮಾತನಾಡುತ್ತಿದ್ದರು. ಇಂದು ಏನು ಮಾಡುತ್ತಿದ್ದಾರೆ. ಸರ್ಕಾರಕ್ಕೆ ನಾನೇ ಎರಡು ಮೂರು ಸಲ ಮನವಿ ಮಾಡಿದ್ದೆ, ಬಡಾವಣೆಯ ಜನರು, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಸಭೆ ನಡೆಸಿ, ಸಮಸ್ಯೆ ಬಗ್ಗೆ ಚರ್ಚೆ ಮಾಡುವ, ನಾನು ಬರುತ್ತೇನೆ ಎಂದು, ಆದರೆ ಸರ್ಕಾರ ಇಂದು ನ್ಯಾಯಾಲಯದ ಆದೇಶ ಎಂದು ಬಡವರ ಮನೆಯನ್ನು ಕೆಡುವುತ್ತಿರುವುದು ಸರಿಯಲ್ಲ’ ಎಂದರು.

‘ಬಡವರು ಸಾಲ ಮಾಡಿ ಮನೆ ನಿರ್ಮಿಸಿದ್ದಾರೆ, ಅವರ ಗತಿ ಏನು. ಬಿಡಿಎನವರು ಅನುಮತಿ ಕೊಟ್ಟ ನಂತರ ಮನೆ ಕಟ್ಟಿದ್ದಾರೆ. ಸರ್ಕಾರವೇ ನೋಟಿಫಿಕೇಷನ್, ಡಿ ನೋಟಿಫಿಕೇಷನ್ ಮಾಡಿದೆ. ಇದರಲ್ಲಿ ಜನರ ತಪ್ಪು ಏನು ಎಂದು ಮುಖ್ಯಮಂತ್ರಿಗಳು ಉತ್ತರಿಸಬೇಕು’ ಎಂದು ಒತ್ತಾಯಿಸಿದರು.

ಶಾಸಕ ಜಮೀರ್ ವಾಗ್ದಾಳಿ ಬಗ್ಗೆ ಮಾತನಾಡಿ, ‘ನನ್ನ ಬಗ್ಗೆ ಏನು ಬಿಚ್ಚಿಡ್ತಾರೋ ಬಿಚ್ಚಿ ಇಡಲಿ. ಅವರ ವಿಷಯದ ಬಗ್ಗೆ ಚರ್ಚೆ ಮಾಡುವುದು ಅನವಶ್ಯಕ. ಕೆಸರ ಮೇಲೆ ಕಲ್ಲು ಎಸೆದರೆ ಕೊಚ್ಚೆ ಹಾರುತ್ತದೆ’ ಎಂದರು.

‘ಗುಬ್ಬಿ ಶಾಸಕ ಶ್ರೀನಿವಾಸ್ ಕಳೆದ ಮೂರು ವರ್ಷದಿಂದ ನಮ್ಮ ಪಕ್ಷದ ಯಾವುದೇ ಚಟುವಟಿಕೆಯಲ್ಲಿ ಭಾಗವಹಿಸಿಲ್ಲ. ಅವರ ಬಗ್ಗೆ ತಲೆಕಡೆಸಿಕೊಳ್ಳುವುದಿಲ್ಲ. 2023ಕ್ಕೆ ರೈತಪರ ಸರ್ಕಾರ ತರಲು ನಾನು ಹೋರಾಟ ಮಾಡುತ್ತಿದ್ದೇನೆ’ ಎಂದರು.

ಶಾಸಕ ಸಿ.ಎನ್. ಬಾಲಕೃಷ್ಣ, ಆದಿಚುಂಚನಗಿರಿ ಹಾಸನ ಶಾಖ ಮಠದ ಶಂಭುನಾಥ ಸ್ವಾಮೀಜಿ, ಮೆಳಿಯಮ್ಮ ಆಧ್ಯಾತ್ಮಿಕ ಕೇಂದ್ರದ ಚಂದ್ರಶೇಖರ ಗುರೂಜಿ ಸೇರಿದಂತೆ ಹಲವು ಜನಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT