ಶ್ರವಣಬೆಳಗೊಳ: ಚಂದ್ರಗಿರಿಯ ಚಿಕ್ಕಬೆಟ್ಟದಲ್ಲಿರುವ ಅಂತರಾಳ ಪಾರ್ಶ್ವನಾಥ ಸ್ವಾಮಿಗೆ ಪುಷ್ಯ ಮಾಸದ ಶುದ್ಧ ಬಹುಳ ಪಂಚಮಿ ಪ್ರಯುಕ್ತ ಧಾರ್ಮಿಕ ವಿಧಿವಿಧಾನಗಳು ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನೇತೃತ್ವದಲ್ಲಿ ಶ್ರದ್ಧಾ ಭಕ್ತಿಯಿಂದ ನೆರವೇರಿದವು.

16 ಅಡಿ ಎತ್ತರದ 7 ಹೆಡೆಯ ಸರ್ಪದ ಸುಂದರ ಅಂತರಾಳ ಪಾರ್ಶ್ವನಾಥ ಸ್ವಾಮಿಯ ಸನ್ನಿಧಿಯಲ್ಲಿ ಮಂಗಳ ಕಲಶ ಸ್ಥಾಪಿಸಲಾಗಿತ್ತು. ನಂತರ ಜಲ, ಬೆಣ್ಣೆ, ಕ್ಷೀರ, ಅರಿಸಿನಗಳಿಂದ ಮಹಾಭಿಷೇಕ ನಡೆಸಿ ಪುಷ್ಪವೃಷ್ಟಿ ಮಾಡಲಾಯಿತು.

ಶಾಂತಿಧಾರದೊಂದಿಗೆ ವಿವಿಧ ನೈವೇದ್ಯಗಳನ್ನು ಅರ್ಪಿಸಿ ಅಷ್ಟವಿಧಾರ್ಚನೆಯೊಂದಿಗೆ ಮಹಾಮಂಗಳಾರತಿ ಮಾಡಲಾಯಿತು.

ಪೂಜೆಯ ನೇತೃತ್ವವನ್ನು ಎಂ.ಪಿ.ಶಾಂತಕುಮಾರ್, ಎಸ್.ಎಸ್.ವಿಮಲ್ ವಹಿಸಿದ್ದು ಭಕ್ತಾದಿಗಳಿಗೆ ಗಂಧೋದಕ ವಿತರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.