ಹಾಸನ: ಜಿಲ್ಲೆಯ ಪ್ರತಿಷ್ಠಿತ ಕ್ಷೇತ್ರ, ಹಾಸನದ ಜೆಡಿಎಸ್ ಟಿಕೆಟ್ ಗೊಂದಲ ಪರಿಹಾರ ಆಗುತ್ತಿಲ್ಲ. ಚುನಾವಣೆ ಹತ್ತಿರವಾದರೂ ಅಭ್ಯರ್ಥಿಯ ಆಯ್ಕೆ ಅಂತಿಮಗೊಂಡಿಲ್ಲ. ಈ ಮಧ್ಯೆ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕೆ.ಎಂ.ರಾಜೇಗೌಡರ ಹೆಸರು ಕೇಳಿ ಬರುತ್ತಿದೆ. ಜೆಡಿಎಸ್ ಕಾರ್ಯಕರ್ತರೂ ಗೊಂದಲಕ್ಕೆ ಬಿದ್ದಿದ್ದಾರೆ.
ಈಗಾಗಲೇ ಎಚ್.ಡಿ. ದೇವೇಗೌಡ, ಎಚ್.ಡಿ. ಕುಮಾರಸ್ವಾಮಿ ಹಾಗೂ ಎಚ್.ಡಿ. ರೇವಣ್ಣ ಅವರು ಕೆ.ಎಂ.ರಾಜೇಗೌಡರೊಂದಿಗೆ ಮಾತನಾಡಿದ್ದು, ಸ್ವರೂಪ್ ಮತ್ತು ಭವಾನಿ ಟಿಕೆಟ್‌ಗೆ ಪಟ್ಟು ಹಿಡಿದರೆ, ಅವರನ್ನೇ ಕಣಕ್ಕೆ ಇಳಿಸುವ ಯೋಚನೆಯೂ ಇದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ, ‘ಭವಾನಿ, ಸ್ವರೂಪ್ ಜೊತೆಗೆ ರಾಜೇಗೌಡರ ಹೆಸರೂ ಪ್ರಸ್ತಾಪವಾಗುತ್ತಿದೆ. ನಾಳೆ ನಾಲ್ಕನೇ ಹೆಸರು ಬಂದರೂ ಬರಬಹುದು. ಚುನಾವಣೆ ಘೋಷಣೆಯಾಗುವವರೆಗೆ ಪಟ್ಟಿ ದೊಡ್ಡದಾದರೂ ಆಶ್ಚರ್ಯವಿಲ್ಲ. ಎಲ್ಲವನ್ನೂ ದೇವೇಗೌಡರೇ ನೋಡಿಕೊಳ್ಳಲಿದ್ದಾರೆ’ ಎಂದು ತಿಳಿಸಿದ್ದಾರೆ.
ಶಶಿಧರ್ ಭೇಟಿ ಮಾಡಿದ ಕುಮಾರಸ್ವಾಮಿ: ಎಚ್.ಡಿ. ಕುಮಾರಸ್ವಾಮಿ, ಬುಧವಾರ ಅರಸೀಕೆರೆ ಕ್ಷೇತ್ರದ ಮುಖಂಡ ಬಿ.ಜಿ. ಶಶಿಧರ್ ಅವರನ್ನು ಭೇಟಿ ಮಾಡಿದ್ದು, ಪಕ್ಷ ಸೇರುವಂತೆ ಮನವೊಲಿಕೆಗೆ ಪ್ರಯತ್ನಿಸಿದ್ದಾರೆ.
ಮಾಜಿ ಶಾಸಕ ಬಸವರಾಜ ಅವರ ಪುತ್ರ ಶಶಿಧರ್, ಈ ಬಾರಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಶಾಸಕ ಶಿವಲಿಂಗೇಗೌಡ ಕಾಂಗ್ರೆಸ್‌ಗೆ ಬರುವುದು ಖಚಿತವಾಗುತ್ತಿದ್ದಂತೆಯೇ ಪಕ್ಷ ತೊರೆದಿದ್ದರು.
ಶಶಿಧರ್ ಭೇಟಿ ಮಾಡಿದ ಕುಮಾರಸ್ವಾಮಿ
ಹಾಸನ: ಜಿಲ್ಲೆಯಲ್ಲಿ ಪಂಚರತ್ನ ಯಾತ್ರೆ ನಡೆಸಿರುವ ಎಚ್.ಡಿ.ಕುಮಾರಸ್ವಾಮಿ, ಬುಧವಾರ ಅರಸೀಕೆರೆ ಕ್ಷೇತ್ರದ ಮುಖಂಡ ಬಿ.ಜಿ. ಶಶಿಧರ್ ಅವರನ್ನು ಭೇಟಿ ಮಾಡಿದ್ದು, ಪಕ್ಷ ಸೇರುವಂತೆ ಮನವೊಲಿಕೆಗೆ ಪ್ರಯತ್ನಿಸಿದ್ದಾರೆ.
ಮಾಜಿ ಶಾಸಕ ಬಸವರಾಜ ಅವರ ಪುತ್ರ ಶಶಿಧರ್, ಈ ಬಾರಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಶಾಸಕ ಶಿವಲಿಂಗೇಗೌಡ ಕಾಂಗ್ರೆಸ್‌ಗೆ ಬರುವುದು ಖಚಿತವಾಗುತ್ತಿದ್ದಂತೆಯೇ ಪಕ್ಷ ತೊರೆದಿದ್ದರು.
‘ಅವರನ್ನು ಜೆಡಿಎಸ್‌ಗೆ ಕರೆತಂದು, ಅರಸೀಕೆರೆ ಕ್ಷೇತ್ರದಲ್ಲಿ ನಿರ್ಣಾಯಕವಾಗಿರುವ ಲಿಂಗಾಯತರ ಮತ ಸೆಳೆಯುವುದರ ಜೊತೆಗೆ, ಪಕ್ಷ ತೊರೆದಿರುವ ಶಿವಲಿಂಗೇಗೌಡರಿಗೂ ತಕ್ಕ ಪಾಠ ಕಲಿಸಬಹುದು’ ಎಂಬ ತಂತ್ರವನ್ನು ಕುಮಾರಸ್ವಾಮಿ ಹೆಣೆದಿದ್ದಾರೆ ಎಂದು ಮೂಲಗಳು ಹೇಳಿವೆ.
*
ಕುಮಾರಣ್ಣ ಸಾಮಾನ್ಯ ಕಾರ್ಯರ್ತನಿಗೆ ಟಿಕೆಟ್ ನೀಡುತ್ತೇನೆ ಎಂದಿದ್ದಾರೆಯೇ ಹೊರತು, ಶಾಸಕನಾಗಿ ಮಾಡುತ್ತೇನೆ ಎಂದಿಲ್ಲ. ಕುಟುಂಬದ ಕಿತ್ತಾಟದಿಂದ ಅವರು ಒತ್ತಡಕ್ಕೆ ಒಳಗಾಗಿದ್ದಾರೆ.
-ಪ್ರೀತಂ ಗೌಡ, ಶಾಸಕ
**
ಕಾರ್ಯಕರ್ತರಿಗೆ ಟಿಕೆಟ್ ನೀಡುವ ವಿಷಯದಲ್ಲಿ ಹಿಂದೆ ಸರಿಯುವುದಿಲ್ಲ. ಅಂತಿಮ ತೀರ್ಮಾನ ಮಾಡುವುದರಲ್ಲಿ ನನಗಿಂತ ಹೆಚ್ಚಾಗಿ ನಮ್ಮ ರಾಷ್ಟ್ರೀಯ ಅಧ್ಯಕ್ಷರಿಗೇ ಅನುಭವ ಇದೆ.
-ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.