ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಾಸನ | ಜೂಜಾಟ: 19 ಜನರ ಬಂಧನ, ₹1.07 ಲಕ್ಷ ವಶ

Published 10 ಜುಲೈ 2024, 14:48 IST
Last Updated 10 ಜುಲೈ 2024, 14:48 IST
ಅಕ್ಷರ ಗಾತ್ರ

ಹಾಸನ: ಬೇಲೂರಿನ ದುರ್ಗಮ್ಮ ದೇವಸ್ಥಾನದ ಬಳಿ ಇಸ್ಪೀಟ್‌ ಜೂಜಾಟ ಆಡುತ್ತಿದ್ದ ತಂಡದ ಮೇಲೆ ದಾಳಿ ನಡೆಸಿರುವ ಪೊಲೀಸರು, 19 ಜನರನ್ನು ಬಂಧಿಸಿದ್ದು, ₹1.07 ಲಕ್ಷ ವಶಕ್ಕೆ ಪಡೆದಿದ್ದಾರೆ.

ಬೇಲೂರು ಠಾಣೆಯ ಸಬ್‌ ಇನ್‌ಸ್ಪೆಕ್ಟರ್‌ ಪ್ರವೀಣ್‍ಕುಮಾರ್, ಈ ದಾಳಿ ನಡೆಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ತೇಗೂರು ಗ್ರಾಮದ ಮೋಹನ್‍ರಾಜ್ ಅರಸ್, ಶಿವಕುಮಾರ್, ಅನಿಲ್‍ಕುಮಾರ್, ಕೃಷ್ಣರಾಜು, ಪ್ರಸನ್ನ, ದಿವಾಕರ್, ಹರೀಶ, ಲೋಕೇಶ್ ರಾಜ್, ಪುನೀತ, ಯಲ್ಲರಾಜು, ಸಚಿನ್, ಅರುಣ, ಕಿರಣ್‍ಕುಮಾರ್, ಶಿವರಾಜು, ಲೋಕೇಶ್‍ರಾಜ್, ಸತೀಶ್‍ರಾಜ್, ಲಕ್ಷ್ಮಣ್‍ರಾಜ್, ನಟರಾಜು, ಯೋಗೇಶ್ ರಾಜ್ ಅರಸ್ ಎಂಬುವವರನ್ನು ಬಂಧಿಸಿದ್ದಾರೆ.

ಜೂಜಾಟಕ್ಕೆ ಪಣವಾಗಿಟ್ಟಿದ್ದ ₹1,07,090 ವಶಕ್ಕೆ ಪಡೆದಿದ್ದು, ಬೇಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT