ನುಗ್ಗೇಹಳ್ಳಿ: ವಿರೂಪಾಕ್ಷಪುರ ಗ್ರಾಮದ ಕೆರೆಗೆ ಬಾಗಿನ ಅರ್ಪಣೆ ಮತ್ತು ಶುದ್ಧ ಕುಡಿಯುವ ನೀರಿನ ಘಟಕದ ಕಾಮಗಾರಿಗೆ ಚಾಲನೆ, ನುಗ್ಗೇಹಳ್ಳಿ ಹಿರೇಕೆರೆಗೆ ಸಂಸದ ಶ್ರೇಯಸ್ ಪಟೇಲ್ ಗಂಗೆ ಪೂಜೆ ನಡೆಸಿದರು.

ವಿರೂಪಾಕ್ಷಪುರ ಗ್ರಾಮದಲ್ಲಿ ಶುದ್ಧ ನೀರಿನ ಘಟಕಕ್ಕೆ ಸಂಸದರ ನಿಧಿ ಅನುದಾನದಲ್ಲಿ ₹ 10 ಲಕ್ಷ ವೆಚ್ಚ ಮಾಡಲಾಗುತ್ತಿದೆ. ದಿಡಗ ಹಾಗೂ ಕಬ್ಬಳಿ ಭಾಗದ ಕೆರೆಗಳನ್ನು ತುಂಬಿಸುವ ಯೋಜನೆಗೆ ಶೀಘ್ರದಲ್ಲೇ ಮಂಜೂರಾತಿ ಲಭಿಸಲಿದೆ ಎಂದರು. ಜಿಲ್ಲೆಯ ಎಲ್ಲ ಹೋಬಳಿ ಕೇಂದ್ರಗಳಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿ, ಅಭಿವೃದ್ಧಿ ಕೆಲಸಗಳಿಗೆ ಚುರುಕು ನೀಡಿ, ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ತಿಳಿಸಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಎ. ಗೋಪಾಲಸ್ವಾಮಿ ಮಾತನಾಡಿ, ಕ್ಷೇತ್ರದ ಶಾಸಕರು ಕಾಂಗ್ರೆಸ್ ಸರ್ಕಾರದ ನೀರಾವರಿ ಯೋಜನೆಗಳನ್ನು ತಾವೇ ಮಂಜೂರು ಮಾಡಿಸಿದ್ದೇನೆ ಎಂದು ಸುಳ್ಳು ಹೇಳುವ ರಾಜಕಾರಣ ಮಾಡುತ್ತಿದ್ದಾರೆ ತೋಟಿ ಹಾಗೂ ಕಲ್ಲೇ ಸೋಮನಹಳ್ಳಿ ಏತ ನೀರಾವರಿ ಯೋಜನೆಗಳು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮಂಜೂರು ಆಗಿವೆ ಎಂದರು.

ಮಾಜಿ ಶಾಸಕ ಸಿ.ಎಸ್. ಪುಟ್ಟೇಗೌಡ ನುಗ್ಗೇಹಳ್ಳಿ ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ ಹಲವರ ಪರಿಶ್ರಮವಿದೆ ಕೇವಲ ಒಬ್ಬ ವ್ಯಕ್ತಿಯಿಂದ ಆದ ಯೋಜನೆಯಲ್ಲ ಎಂದರು.

ಹೋಬಳಿ ಕೇಂದ್ರದಲ್ಲಿ ಸಂಸದ ಶ್ರೇಯಸ್ ಪಟೇಲ್ , ಎಂ ಎ ಗೋಪಾಲಸ್ವಾಮಿ ಅವರಿಗೆ ಜೆಸಿಬಿ ಮೂಲಕ ಪುಷ್ಪಾರ್ಚನೆ ಮಾಡಿ, ಕೊಬ್ಬರಿ ಹಾರ ಹಾಕಿ ಸ್ವಾಗತ ಕೋರಲಾಯಿತು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಂಜೇಗೌಡ, ಜತ್ತೆನಹಳ್ಳಿ ರಾಮ ಚಂದ್ರು, ಯುವ ಕಾಂಗ್ರೆಸ್ ಮುಖಂಡ ಜೆ.ಕೆ. ಮಂಜುನಾಥ್, ( ಜೆಕೆಎಂ ) ಯುವರಾಜ್, ಎಂ.ಎ. ರಂಗಸ್ವಾಮಿ, ವೀರಶೈವ ಸಮಾಜದ ಅಧ್ಯಕ್ಷ ಸಂತೇಶಿವರ ರಾಜಣ್ಣ, ಗೋಪಾಲ್, ತಿಮ್ಮೇಗೌಡ, ಎನ್. ಎಸ್. ಲಕ್ಷ್ಮಣ್, ವಿ.ಎನ್. ಧನಂಜಯ, ಕಿರಣ್, ಗೌಡಕಿ ಮಂಜು, ಎನ್.ಡಿ. ಗೌತಮ್ , ಗ್ಯಾಸ್ ರಾಜು, ರಮ್ಯಾ ಲೋಕೇಶ್, ಪ್ರದೀಪ್, ಸುನಾಗು ಮೂರ್ತಿ, ಮಂಜುನಾಥ್, ಬಾಣನಕೆರೆ ಅಶೋಕ್, ಎನ್. ಎಸ್. ಪ್ರಕಾಶ್, ಬಂಡೆಕೆರೆ ಮಹೇಶ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.