ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ ನಗರಸಭೆ ಗದ್ದುಗೆ ಏರಿದ ಬಿಜೆಪಿ

ಮೊದಲ ಬಾರಿಗೆ ಕಮಲ ಬಾವುಟ, ಹಾರಾಟ, ಅಧ್ಯಕ್ಷ ಮೋಹನ್, ಉಪಾಧ್ಯಕ್ಷರಾಗಿ ಮಂಗಳಾ ಆಯ್ಕೆ
Last Updated 23 ಏಪ್ರಿಲ್ 2021, 14:31 IST
ಅಕ್ಷರ ಗಾತ್ರ

ಹಾಸನ: ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಭದ್ರಕೋಟೆಯಂತಿದ್ದ ಹಾಸನ ನಗರಸಭೆಯಲ್ಲಿ ಮೊದಲ ಬಾರಿಗೆ ಬಿಜೆಪಿ ಬಾವುಟ ಹಾರಾಡುತ್ತಿದೆ. ಮೀಸಲಾತಿ ಅಧಿಕಾರದ ಮೂಲಕ ಬಿಜೆಪಿ ಪ್ರಥಮ ಬಾರಿಗೆ ಗದ್ದುಗೆ ಏರಿದೆ.

ಮೀಸಲು ಗೊಂದಲ ಕಾರಣಕ್ಕೆ ಚುನಾವಣೆ ನಡೆದು 31 ತಿಂಗಳ ನಂತರ ಹಾಸನ ನಗರಸಭೆ ವರಿಷ್ಠರ ಆಯ್ಕೆ ಘೋಷಣೆಯಾಗಿದ್ದು, ಅಧ್ಯಕ್ಷರಾಗಿ ಬಿಜೆಪಿಯ 34 ನೇ ವಾರ್ಡ್ ಸದಸ್ಯ ಆರ್‌. ಮೋಹನ್ ಮತ್ತು ಉಪಾಧ್ಯಕ್ಷೆಯಾಗಿ 29 ನೇ ವಾರ್ಡ್‌ ಸದಸ್ಯೆ ಮಂಗಳಾ ಪ್ರದೀಪ್ ಶುಕ್ರವಾರ ನಗರಸಭೆ ಕಚೇರಿಯಲ್ಲಿ ಅಧಿಕಾರ ವಹಿಸಿಕೊಂಡರು.

ನಗರಸಭೆ ಅಧ್ಯಕ್ಷ ಸ್ಥಾನವನ್ನು ಪರಿಶಿಷ್ಟ ಪಂಗಡಕ್ಕೆ, ಉಪಾಧ್ಯಕ್ಷ ಸ್ಥಾನವನ್ನು ಬಿಸಿಎಂ(ಎ) ಮಹಿಳೆ ವರ್ಗಕ್ಕೆ ಮೀಸಲು ನಿಗದಿ ಪಡಿಸಿ 2020 ಅ. 8 ರಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಅದಾದ ಬಳಿಕ ಚುನಾವಣೆ ನಡೆಸಲು ನೋಟಿಸ್ ಹೊರಡಿಸಿ, ಅ. 10ಕ್ಕೆ ಚುನಾವಣಾ ದಿನಾಂಕ ನಿಗದಿ ಪಡಿಸಲಾಗಿತ್ತು.

ಈ ನಡುವೆ ಅವೈಜ್ಞಾನಿಕವಾಗಿ ಮೀಸಲು ನಿಗದಿ ಮಾಡಲಾಗಿದೆ ಎಂದು ಆರೋಪಿಸಿ ಜೆಡಿಎಸ್ ಕಡೆಯಿಂದ ರಾಜ್ಯಹೈಕೋರ್ಟ್ ಮೊರೆ ಹೋಗಿದ್ದರಿಂದ ಚುನಾವಣೆ ಪ್ರಕ್ರಿಯೆಗೆ ತಡೆ ಬಿದ್ದಿತ್ತು.

ಒಟ್ಟು 35 ಸದಸ್ಯ ಬಲದ ನಗರಸಭೆಯಲ್ಲಿ ಜೆಡಿಎಸ್‌ 17 ಸ್ಥಾನ, ಬಿಜೆಪಿ 13, ಕಾಂಗ್ರೆಸ್ 2 ಮತ್ತು ಮೂವರುಪಕ್ಷೇತರರು ಜಯ ಗಳಿಸಿದ್ದಾರೆ.ಬಹುಮತ ಆಧಾರದಲ್ಲಿ ಅಧ್ಯಕ್ಷರಾಗುವುದಾಗಿದ್ದರೆ ಒಬ್ಬ ಸದಸ್ಯರ ನೆರವಿನಿಂದ ಜೆಡಿಎಸ್‌ಅಧಿಕಾರದ ಗದ್ದುಗೆ ಏರಬಹುದಿತ್ತು. ಆದರೆ ಮೀಸಲಾತಿ ಎಸ್‌ಟಿಗೆ ನಿಗಿದಿಯಾಗಿದ್ದು, ಜೆಡಿಎಸ್‌ನಲ್ಲಿ ಎಸ್‌ಟಿಯಿಂದ ಗೆದ್ದಿರುವಸದಸ್ಯರು ಇಲ್ಲದಿರುವುದು ಬಿಜೆಪಿಗೆ ವರದಾನವಾಗಿದೆ.

2018ರಲ್ಲಿ ನಡೆದ ಹಾಸನ ನಗರಸಭೆ ಚುನಾವಣೆ ವೇಳೆ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನವನ್ನು ಬಿಸಿಎಂ (ಎ)ಗೆ ನಿಗದಿ ಪಡಿಸಲಾಗಿತ್ತು.

ಮತ್ತೆ ಚುನಾವಣೆಗೆ ಆದೇಶ: ಮೀಸಲು ತಕರಾರು ಹೈಕೋರ್ಟ್‍ನಿಂದ ಸುಪ್ರೀಂಕೋರ್ಟ್ ಅಂಗಳ ತಲುಪಿತು. ಇದನ್ನುಪರಿಶೀಲಿಸಿದ ನ್ಯಾಯಾಲಯ, ನಗರಸಭೆ ಚುನಾವಣೆ ನಡೆಸಿ, ಫಲಿತಾಂಶ ಘೋಷಣೆ ತಡೆ ಹಿಡಿಯುವಂತೆ ಕಳೆದ ಅ. 21 ರಂದು ಆದೇಶ ನೀಡಿತು.

ಸುಪ್ರೀಂಕೋರ್ಟ್ ಆದೇಶದಂತೆ ಅ. 29 ರಂದು ಚುನಾವಣಾಧಿಕಾರಿಯಾಗಿದ್ದ ಹಾಸನ ಉಪ ವಿಭಾಗಾಧಿಕಾರಿ ಬಿ.ಎ.ಜಗದೀಶ್ ಚುನಾವಣೆ ಪ್ರಕ್ರಿಯೆ ನಡೆಸಿ, ಫಲಿತಾಂಶ ಪ್ರಕಟಿಸಿರಲಿಲ್ಲ.ಏ. 21 ರಂದು ಜೆಡಿಎಸ್ ಕಡೆಯಿಂದ ಸಲ್ಲಿಕೆಯಾಗಿದ್ದ ಮೀಸಲು ತಕರಾರು ಅರ್ಜಿಯನ್ನುರಾಜ್ಯ ಹೈಕೋರ್ಟ್ ತಿರಸ್ಕರಿಸಿ ತಡೆ ಹಿಡಿದಿರುವ ಫಲಿತಾಂಶ ಪ್ರಕಟಿಸುವಂತೆ ಆದೇಶಿಸಿತು. ಇದರ ಅನುಸಾರನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಏ. 22 ರಂದು ಚುನಾವಣಾ ಅಧಿಕಾರಿಗೆ ನಿರ್ದೇಶನ ನೀಡಿ ಫಲಿತಾಂಶಪ್ರಕಟಿಸುವಂತೆ ಸೂಚಿಸಿದ್ದರು.

‘ಚುನಾವಣೆ ಪ್ರಕ್ರಿಯೆ ದಿನದಂದು ಮೋಹನ್ ಮತ್ತು ಮಂಗಳಾ ಹೊರತು ಪಡಿಸಿ ಬೇರೆ ಯಾರೂ ನಿಗದಿತ ಸಮಯದಲ್ಲಿನಾಮಪತ್ರ ಸಲ್ಲಿಸಿರಲಿಲ್ಲ. ಕೆಲ ಸದಸ್ಯರು ಚುನಾವಣಾ ನೋಟಿಸನ್ನು ತಪ್ಪಾಗಿ ಗ್ರಹಿಸಿ, ನಾವು ನಾಮಪತ್ರ ಸಲ್ಲಿಸಲುಆಗಲಿಲ್ಲ. ಹೀಗಾಗಿ ಚುನಾವಣೆ ಮುಂದೂಡಿ ಎಂದು ಗೊಂದಲ ಸೃಷ್ಟಿಸಿದ್ದರು. ಹೀಗಾಗಿ ಫಲಿತಾಂಶ ಪ್ರಕಟಿಸದೇ ಚುನಾವಣೆಪ್ರಕ್ರಿಯೆ ಸ್ಥಗಿತಗೊಳಿಸಲಾಗಿತ್ತು. ಅದಾದ ಬಳಿಕ ಉಪಾಧ್ಯಕ್ಷ ಚುನಾವಣೆಗೆ ಸಂಬಂಧಿಸಿದಂತೆ ಸೂಕ್ತ ನಿರ್ದೇಶನ ಕೋರಿನಗರಾಭಿವೃದ್ಧಿ ಇಲಾಖೆಗೆ 2020ರ ನ. 3 ರಂದು ಪತ್ರ ಬರೆಯಲಾಗಿತ್ತು. ಆದರೆ ಈವರೆಗೂ ಯಾವುದೇ ನಿರ್ದೇಶನ ಬಂದಿಲ್ಲ. ಆದ್ದರಿಂದ ಕರ್ನಾಟಕ ಮುನ್ಸಿಪಾಲಿಟಿ ಚುನಾವಣಾ ನಿಯಮದ (1965) ಪ್ರಕಾರ ಒಬ್ಬರೇ ಅಭ್ಯರ್ಥಿ ಇದ್ದರೆ ಅವರನ್ನೇ ನಿಗದಿತಸ್ಥಾನಕ್ಕೆ ಆಯ್ಕೆಯಾಗಿದ್ದಾರೆ ಎಂದು ಘೋಷಿಸಬೇಕು. ಅದರಂತೆ ಮಂಗಳಾ ಪ್ರದೀಪ್ ನಗರಸಭೆ ಉಪಾಧ್ಯಕ್ಷರಾಗಿಆಯ್ಕೆಯಾಗಿದ್ದಾರೆ ಎಂದು ಘೋಷಿಸಲಾಗಿದೆ’ ಎಂದು ಚುನಾವಣಾಧಿಕಾರಿ ಬಿ.ಎ.ಜಗದೀಶ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT