ಹಾಸನ: ಆಲೂರು ತಾಲ್ಲೂಕಿನ ಅಡಿಬೈಲು ಗ್ರಾಮದಲ್ಲಿ ಕಾಡಾನೆಯೊಂದು ವೃದ್ಧನನ್ನು ಕೊಂದು, ಸೊಂಡಿಲಿನಿಂದ ಹೊಸಕಿ ಹಾಕಿರುವ ಘಟನೆ ನಡೆದಿದೆ.

ವಿಶೇಷ ಎಂದರೆ ದಾಳಿ ಮಾಡಿದ್ದ ಆನೆಯು ವೃದ್ಧನ ಶವದ ಮೇಲೆ ಕಾಫಿ ಗಿಡಗಳನ್ನು ಬೀಳಿಸಿ ಅಲ್ಲಿಂದ ಕಾಲ್ಕಿತ್ತಿರುವ ಶಂಕೆ ವ್ಯಕ್ತವಾಗಿದೆ.

ಅಡಿಬೈಲು ಗ್ರಾಮದ ಪುಟ್ಟಯ್ಯ (78) ಮೃತ ವೃದ್ಧ. ಅವರು ಮಂಗಳವಾರ ಸಂಜೆ ಮಗ್ಗೆಯಿಂದ ಅಡಿಬೈಲು ಗ್ರಾಮಕ್ಕೆ ನಡೆದುಕೊಂಡು ಹೋಗುತ್ತಿದ್ದಾಗ ಏಕಾಏಕಿ ದಾಳಿ ನಡೆಸಿದ ಆನೆ, ಕಾಲಿನಿಂದ ತುಳಿದು ಮರಕ್ಕೆ ಅಪ್ಪಳಿಸಿ ಬಿಸಾಡಿದೆ. ನಂತರ ಶವಕ್ಕೆ ಕಾಫಿ ಗಿಡಗಳನ್ನು ಮುಚ್ಚಿ ಹೋಗಿದೆ ಎಂದು ಸ್ಥಳೀಯರು ಹೇಳಿದ್ದಾರೆ.

ಪುಟ್ಟಯ್ಯ ಮನೆಗೆ ಬಾರದ್ದರಿಂದ ಕುಟುಂಬಸ್ಥರು ಹುಡುಕಾಟ ನಡೆಸಿದ್ದರು. ಬುಧವಾರ ಬೆಳಿಗ್ಗೆ ಕಾಫಿ ತೋಟದಲ್ಲಿ ಶವ ಪತ್ತೆಯಾಗಿದೆ.
.ಸಿದ್ದಾಪುರ | ಕಾಡಾನೆ ದಾಳಿ: ಟೀ ಅಂಗಡಿ, ಕಾರು ಜಖಂ.ಬೇಲೂರು: ಕಾಫಿಬೀಜ ತಿಂದು, ಚೆಲ್ಲಾಪಿಲ್ಲಿ ಮಾಡಿದ ಕಾಡಾನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.