ಬೇಲೂರು: ರಾಜ್ಯ ಸರ್ಕಾರ ರೈತರ ಹಿತ ಕಾಪಾಡದೆ ಅಧಿಕಾರದ ಲಾಲಾಸೆಯಲ್ಲಿ ತೇಲುತ್ತಿದೆ ಎಂದು ಹೊಳೆನರಸೀಪುರ ಕ್ಷೇತ್ರದ ಶಾಸಕ ಎಚ್.ಡಿ.ರೇವಣ್ಣ ಹೇಳಿದರು.

ಇಲ್ಲಿನ ಶಿವಕುಮಾರಸ್ವಾಮಿ ಸಮುದಾಯ ಭವನದಲ್ಲಿ ಆಯೋಜಿಸಿದ್ದ, ತಾಲ್ಲೂಕು ಮಟ್ಟದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ಹಾಸನ ಜಿಲ್ಲೆಯಲ್ಲಿ ಜೆಡಿಎಸ್ ಶಕ್ತಿ ಕುಂದಿಸಲು, ರಾಜ್ಯ ಸರ್ಕಾರ ಎರಡು ಸಮಾವೇಶಗಳನ್ನು ನಡೆಸಿದೆ. ಜಿಲ್ಲಾಧಿಕಾರಿಗಳಿಂದ ಹಿಡಿದು ಆಶಾ ಕಾರ್ಯಕರ್ತೆಯರು ಹಾಗೂ ನೀರುಗಂಟಿಗಳನ್ನು ಸಹ ಸಮಾವೇಶಕ್ಕೆ ಬಳಸಿಕೊಂಡಿದ್ದಾರೆ. ಜೋಡೆತ್ತು ಎಂದು ಹೇಳಿಕೊಂಡು ಕುಮಾರಣ್ಣನ ಹತ್ತಿರ ರಾತ್ರಿ, ಹಗಲು ಸಹಿ ಮಾಡಿಸಿಕೊಳ್ಳುತ್ತಿದ್ದವರು ಈಗ ಹಾಸನ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷವನ್ನು ಮುಗಿಸಲು ಹುನ್ನಾರ ಮಾಡುತ್ತಿದ್ದಾರೆ ಎಂದರು.

ಜಿಲ್ಲೆಯಲ್ಲಿ ಹೇಳೋರು, ಕೇಲೋರು ಯಾರು ಇಲ್ಲದಂತಾಗಿದೆ, ಯಾವ ಕೆಲಸಗಳು ಅಗುತ್ತಿಲ್ಲ. ಜಿಲ್ಲೆಗೆ ಜೆಡಿಎಸ್ ಪಕ್ಷದ ಕೊಡುಗೆ ಸಾಕಾಷ್ಟಿದೆ. ಈಗಿನ ಸರ್ಕಾರ ಹಾಗೂ ಹಿಂದಿನ ಸರ್ಕಾರ ಏನು ಮಾಡಿಲ್ಲ ಎಂದರು. ಜನವರಿ 24ರಂದು ಹಾಸನದಲ್ಲಿ ಜೆಡಿಎಸ್ ಪಕ್ಷದ ಸಮಾವೇಶ ಆಯೋಜಿಸಲಾಗಿದ್ದು, ಸುಮಾರು 2 ಲಕ್ಷ ಜನ ಸೇರಲಿದ್ದಾರೆ. ಬೇಲೂರಿನಿಂದ ಕನಿಷ್ಠ 20 ಸಾವಿರ ಕಾರ್ಯಕರ್ತರು ಆಗಮಿಸಬೇಕು ಎಂದು ಕರೆ ನೀಡಿದರು.

2028ಕ್ಕೆ ರಾಜ್ಯದಲ್ಲಿ ಎನ್ಡಿಎ ಸರ್ಕಾರ ಅಧಿಕಾರದ ಗದ್ದುಗೆ ಏರುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ರೇವಣ್ಣ ಹೇಳಿದರು.

ಜಿಲ್ಲೆಯ ಈಶಾನ್ಯ ದಿಕ್ಕಾದ ಅರಸೀಕೆರೆಯಿಂದ ಸಮಾವೇಶದ ಪ್ರಚಾರ ಮಾಡಲು ಪ್ರಾರಂಭಿಸಿದ್ದೇನೆ. ನೀನೆ ಸಾಕಿದ ಗಿಣಿ, ನಿನ್ನ ಹದ್ದಾಗಿ ಕುಕ್ಕಿತಲ್ಲೋ ಎಂಬಂತೆ ಅರಸೀಕೆರೆಯಲ್ಲಿ ಅಗಿದೆ. ನಂಬಿಕೆ ದ್ರೋಹಿಗಳು ಇದ್ದಾರೆ ಎಂದರು.

ಆನೆ ಕಾರಿಡಾರ್ ನಿರ್ಮಿಸಲು ಕುಮಾರಣ್ಣ ₹100 ಕೋಟಿ ಮೀಸಲಿಟ್ಟಿದ್ದರು. ಈಗಿನವರು ಬರೀ ಭಾಷಣ ಮಾಡಿ ಹೋಗ್ತಾರೆ ಅದನ್ನು ಮಾಡಲು ಕುಮಾರಣ್ಣನೆ ಬರಬೇಕು ಎಂದು ಪ್ರತಿಪಾದಿಸಿದಿರು.

ಜೆಡಿಎಸ್ ಜಿಲ್ಲಾಘಟಕದ ಅಧ್ಯಕ್ಷ ಕೆ.ಎಸ್.ಲಿಂಗೇಶ್ ಮಾತನಾಡಿ, ಜನರು ಗ್ಯಾರಂಟಿಗೆ ಮರುಳಾಗಿ ಮತ ನೀಡಿದ್ದರಿಂದ ಈಗ ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ, ಕ್ಷೇತ್ರದಲ್ಲಿ ನಾನು ತಂದ ಕೆಲಸಗಳು ಈಗಲೂ ನಡೆಯುತ್ತಿವೆ. ನಾವು ಬೇರು ಮಟ್ಟದಿಂದ ಪಕ್ಷವನ್ನು ಸಂಘಟಿಸಿ ಮುಂದಿನ ಚುನಾವಣೆಗಳನ್ನು ಎದುರಿಸಬೇಕು ಎಂದರು.

ನಾನು ಕ್ಷೇತ್ರಕ್ಕೆ ₹1800 ಕೋಟಿ ಅನುದಾನ ತಂದು, ಅಭಿವೃದ್ಧಿ ಮಾಡಿದರೂ ಚುನಾವಣೆಯಲ್ಲಿ ಸೋಲು ಅನುಭವಿಸಬೇಕಾಯಿತು. ನಾನು, ಎಚ್.ಡಿ.ರೇವಣ್ಣ ಅವರ ಸಹಕಾರದಿಂದ ತಂದ ಅನುದಾನವನ್ನು, ಕೆಲವರು ನಾನೇ ತಂದಿದ್ದು ಎಂದು ಹೇಳುಕೊಳ್ಳುತ್ತಾರೆ ಎಂದರು.

ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ತೋ.ಚ. ಅನಂತಸುಬ್ಬರಾಯ ಮಾತನಾಡಿ, ಮೈತ್ರಿ ವಿಚಾರದಲ್ಲಿ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ಧರಾಗಿರಬೇಕು. ಜನವರಿ 24ರ ನಂತರ ತಾಲ್ಲೂಕು, ಹೋಬಳಿ ಮಟ್ಟದ ಪದಾಧಿಕಾರಿಗಳನ್ನು ಪುನರ್ ನೇಮಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ಎಂ.ಎ.ನಾಗರಾಜು, ಬಿ.ಡಿ.ಚಂದ್ರೇಗೌಡ, ಸಿ.ಎಸ್.ಲೋಕೇಗೌಡ, ಬಲ್ಲೇನಹಳ್ಳಿ ರವಿಕುಮಾರ್, ಮಹಾದೇವ್, ಡಿ.ಇ.ಮಲ್ಲೇಗೌಡ, ರಂಗೇಗೌಡ, ನಾಗೇಶ್, ಜಿ.ಟಿ.ಇಂದಿರಾ, ಅದ್ದೂರಿಕುಮಾರ್, ಮರಿಯಪ್ಪ, ಎಂ.ಡಿ.ದಿನೇಶ್, ನಟರಾಜು,ಭಾರತೀಅರುಣ್ ಕುಮಾರ್, ಸುಭಾನ್, ರಾಜಶೇಖರ್, ಈಶ್ವರಪ್ರಸಾದ್, ಲತಾಮಂಜೇಶ್ವರಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.