ಹಿರೀಸಾವೆ: ಸರ್ಕಾರದ ಗಮನಕ್ಕೆ ತಂದು ಅಗ್ನಿ ಶಾಮಕ ಠಾಣೆಯನ್ನು ಹಿರೀಸಾವೆಯಲ್ಲಿ ಶೀಘ್ರ ಆರಂಭಿಸಲಾಗುವುದು ಎಂದು ಸಂಸದ ಶ್ರೇಯಸ್ ಪಟೇಲ್ ಹೇಳಿದರು.

ಇಲ್ಲಿನ ಶ್ರೀಕಂಠಯ್ಯ ವೃತ್ತದಲ್ಲಿ ಸಂಸದರ ಸ್ಥಳಿಯ ಪ್ರದೇಶಾಭಿವೃದ್ಧಿ ಯೋಜನೆಯಲ್ಲಿ ₹10 ಲಕ್ಷ ವೆಚ್ಚದ ಪ್ರಯಾಣಿಕರ ತಂಗುದಾಣ ನಿರ್ಮಾಣದ ಕಾಮಗಾರಿಗೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು. ಹೋಬಳಿಯಲ್ಲಿ ಹೆಚ್ಚು ಬೆಂಕಿ ಅವಘಡಗಳು ಸಂಭವಿಸುತ್ತಿದ್ದು, ಅಗ್ನಿ ಶಾಮಕ ಠಾಣೆ ಬೇಕಾಗಿದೆ ಎಂದರು.

ಬೆಂಗಳೂರು– ಹಾಸನ ರೈಲ್ವೆ ಮಾರ್ಗದಲ್ಲಿ ಬೆಳಗ್ಗೆ ಮತ್ತು ಸಂಜೆ ಕೆಲವು ರೈಲು ನಿಲಗಡೆ ಮತ್ತು ರಾಷ್ಟ್ರೀಯ ಹೆದ್ದಾರಿ–75 ರ ಅಂಬೇಡ್ಕರ್ ವೃತ್ತ ಸೇರಿದಂತೆ ಹಲವು ಕಡೆ ಅಂಡರ್ ಪಾಸ್ ನಿರ್ಮಾಣಕ್ಕೆ ರೈತ ಸಂಘದ ಎಚ್.ಕೆ. ರಘು, ಅಣ್ಣಪ್ಪಸ್ವಾಮಿ, ಬಾಲಕೃಷ್ಣ ಸಂಸದರಿಗೆ ಮನವಿ ಸಲ್ಲಿಸಿದರು. ರಾ.ಹೆ. 75 ರ ಕೆಲವು ಕಡೆ ಅಂಡರ್ಪಾಸ್ ತಾಂತ್ರಿಕ ತೊಂದರೆಗಳನ್ನು ಬಗೆಹರಿಸಲಾಗುವುದು ಮತ್ತು ರೈಲುಗಳ ನಿಲುಗಡೆ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುವುದಾಗಿ ಹೇಳಿದರು.

ರಾಜ್ಯ ವಿದ್ಯುತ್ ಕಾರ್ಖಾನೆ ನಿಗಮದ ಅಧ್ಯಕ್ಷ ಎಚ್.ಸಿ. ಲಲಿತಾ ರಾಘವ್ ಮಾತನಾಡಿ, ಜುಲೈ 18 ಕ್ಕೆ ಮಾಜಿ ಸಚಿವ ದಿ. ಶ್ರೀಕಂಠಯ್ಯ ಜನ್ಮ ಶತಮಾನೋತ್ಸವನ್ನು ಆಯೋಜಿಸಲಾಗುವುದು ಎಂದರು.

ಮಾಜಿ ಶಾಸಕ ಸಿ.ಎಸ್. ಪುಟ್ಟೇಗೌಡ ಮಾತನಾಡಿ, ಜಿಲ್ಲೆಯಲ್ಲಿ ಇಬ್ಬರು ಯುವ ನಾಯಕರಾಗಿದ್ದು, ಬಡವರ ಪರವಾದ ಕೆಲಸ ಮಾಡಿ, ತಾತಂದಿರ ಹೆಸರನ್ನು ಉಳಿಸಿ ಎಂದರು.

ಗ್ರಾಮ ಪಂಚಾಯಿತಿ ಸದಸ್ಯರಾದ ಮಾರುತಿ ಮಂಜುನಾಥ್, ಶಂಕರ್, ಚೇತನ್, ಬಿ.ಆರ್. ಪ್ರಕಾಶ್, ಪುನಿತ್, ಕಾಂಗ್ರೆಸ್ ಮುಖಂಡರಾದ ಯುವರಾಜ್, ಎಚ್.ಎಂ. ರಘು, ಉದಯಕುಮಾರ್, ಎಚ್.ಆರ್. ಬಾಲಕಷ್ಣ, ಬ್ಯಾಡರಹಳ್ಳಿ ಯೋಗೇಶ್, ಮುರುಳೀಧರ್, ಶ್ರೀಧರ್, ಬ್ಯಾಂಗಲ್ ಮಹೇಶ್, ಜಿನ್ನೇನಹಳ್ಳಿ ರಾಮೇಗೌಡ, ಆಕರ್ಷ, ಚಿಕ್ಕರಾಮೇಗೌಡ, ರಾಶಿಗೌಡ, ರಂಗಸ್ವಾಮಿ, ಕಾಂಗ್ರೆಸ್ ಕಾರ್ಯಕರ್ತರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.