ಹೊಳೆನರಸೀಪುರ: ಪಟ್ಟಣದಲ್ಲಿ ಸಮಸ್ಯೆಗಳು ಬಹಳಷ್ಟಿದ್ದು, ತಿಂಗಳಿಗೆ ಎರಡು ಸಲ ಭೇಟಿ ನೀಡುತ್ತೇನೆ. ಇಂದಿನ ಸಭೆಯಲ್ಲಿ ನೀಡಿರುವ ಸಲಹೆ ಹಾಗೂ ಸಮಸ್ಯೆ ಕುರಿತಂತೆ ಅಧಿಕಾರಿಗಳಿಗೆ ಸಲಹೆ ನೀಡಲಾಗಿದೆ. ಮುಂದಿನ ಸಭೆಯಲ್ಲಿ ಕೈಗೊಂಡ ಕ್ರಮದ ಸಂಪೂರ್ಣ ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಸೂಚನೆ ನೀಡಿದರು.

ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಕುಂದುಕೊರತೆ ಅಹವಾಲು ಸ್ವೀಕಾರ ಸಭೆಯಲ್ಲಿ ಅವರು ಮಾತನಾಡಿದರು.

ಪುರಸಭೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಸಮಸ್ಯೆ ನಿವಾರಣೆಗೆ ಆದ್ಯತೆ ನೀಡಬೇಕು. ಒಳಚರಂಡಿ ವ್ಯವಸ್ಥೆ ಹದಗೆಟ್ಟಿದೆ. ಚರಂಡಿಗಳಿಗೆ ಸ್ಲ್ಯಾಬ್ ಆಳವಡಿಸದ ಕಾರಣದಿಂದ ರಸ್ತೆಯಲ್ಲಿನ ಪ್ಲಾಸ್ಟಿಕ್ ಹಾಗೂ ಇತರೆ ವಸ್ತುಗಳು ಚರಂಡಿ ಸೇರಿ, ಸಮಸ್ಯೆ ಉಂಟಾಗಿದೆ. ಇದನ್ನು ನಿವಾರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.

ರಸ್ತೆಗಳು ಗುಂಡಿ ಬಿದ್ದಿದ್ದು, ಗುಂಡಿಗಳಿಂದಾಗಿ ಅಪಘಾತಗಳು ನಡೆಯುತ್ತಿದೆ, ಪುರಸಭೆ ವ್ಯಾಪ್ತಿಯಲ್ಲಿ ರಸ್ತೆಗಳ ಗುಂಡಿ ಮುಚ್ಚುವ ಕೆಲಸ ಆಗಬೇಕು. ಬಡಾವಣೆಗಳಲ್ಲಿ ಎಷ್ಟು ಉದ್ಯಾನಗಳಿವೆ? ಅವುಗಳು ಅಭಿವೃದ್ಧಿ ಆಗಿದೆಯಾ ಎಂದು ಪ್ರಶ್ನಿಸಿದ ಜಿಲ್ಲಾಧಿಕಾರಿ, ದೊಡ್ಡವರು ಕ್ರೀಡಾಂಗಣಕ್ಕೆ ಹೋಗುತ್ತಾರೆ. ಮಕ್ಕಳು ಆಟವಾಡಲು ಎಲ್ಲಿ ಹೋಗುತ್ತಾರೆ? ಉದ್ಯಾನಗಳ ಆಭಿವೃದ್ಧಿಗೂ ಆದ್ಯತೆ ನೀಡಿ ಎಂದರು.

ಯುಜಿಡಿ ನೀರನ್ನು ಹೇಮಾವತಿ ನದಿಗೆ ಹಾಗೂ ಕಾಲುವೆಗೆ ಬಿಡಲಾಗುತ್ತಿದೆ. ರಸ್ತೆಬದಿಯಲ್ಲಿ ಕಸ ಹಾಕದಂತೆ ಎಚ್ಚರಿಸಲು ಪುರಸಭೆಯಿಂದ ಸೂಚನಾ ಫಲಕವನ್ನು ಹಾಕಿರುವ ಜೊತೆಗೆ ವಾಹನಗಳ ಟಯರ್ನಲ್ಲಿ ಅಲಂಕಾರ ಮಾಡಿದ್ದಾರೆ. ಆದರೆ ಮಳೆ ಬಂದಾಗ ಟಯರ್ನಲ್ಲಿ ನೀರು ಸೇರಿ ಸೊಳ್ಳೆಗಳ ಸಮಸ್ಯೆ ಉಂಟಾಗುತ್ತದೆ. ಪುರಸಭೆ ವ್ಯಾಪ್ತಿಯ ಸೂರನಹಳ್ಳಿ ಸಮೀಪವಿರುವ ಸ್ಮಶಾನ ಜಾಗ ಮತ್ತು ರಸ್ತೆ ಒತ್ತುವರಿ ಮಾಡಿರುವ ಜೊತೆಗೆ ಯಾವುದೇ ಮೂಲ ಸೌಕರ್ಯ ಇಲ್ಲ ಎಂದು ಜನರು ದೂರಿದರು.

ಈ ಕುರಿತು ಟಿಪ್ಪಣಿ ಮಾಡಿಕೊಳ್ಳುವುದರ ಜತೆಗೆ ಸಾರ್ವಜನಿಕ ಸಮಸ್ಯೆ ನಿವಾರಣೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಪುರಸಭಾ ಮುಖ್ಯಾಧಿಕಾರಿ ಶಿವಶಂಕರ್ ಅವರಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.

ಪರಿಸರ ಎಂಜಿನಿಯರ್ ರುಚಿದರ್ಶಿನಿ ಮಾತನಾಡಿ, ಒಳಚರಂಡಿ ಸಮಸ್ಯೆಗೆ ಕಾರಣ ಮತ್ತು ಹಳೇ ಯಂತ್ರೋಪಕರಣಗಳ ಬಗ್ಗೆ ವಿವರಿಸಿದರು. ಮುಖ್ಯಾಧಿಕಾರಿ ಶಿವಶಂಕರ್, ಹೊಸ ಒಳಚರಂಡಿ ಪೈಪ್ ಲೈನ್ ಹಾಗೂ ಉನ್ನತೀರಣಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದ್ದು, ಹಣಕಾಸು ವಿಭಾಗದಿಂದ ಅನುಮೋದನೆ ದೊರಯಬೇಕಿದೆ ಎಂದರು.

ಸುಳ್ಳು ಮರಣ ಪ್ರಮಾಣಪತ್ರ ಹಾಗೂ ಸುಳ್ಳು ವಂಶವೃಕ್ಷ ನೀಡಿ ದಾಖಲೆ ಸೃಷ್ಟಿಸಲಾಗಿದೆ ಎಂದು ತಿಳಿಸಿದ ವಕೀಲ ಪ್ರತಾಪ್, ದಾಖಲೆಗಳನ್ನು ನೀಡಿದರು.

ಪರಿಶೀಲನೆ ನಡೆಸಬೇಕು. ಆರೋಪ ಸರಿ ಇದ್ದರೆ ಮೊದಲು ಸಂಬಂಧಿಸಿದವರನ್ನು ಅಮಾನತು ಮಾಡಿ, ನಂತರ ಶಿಸ್ತುಕ್ರಮ ಕೈಗೊಳ್ಳಿ ಎಂದು ತಹಶೀಲ್ದಾರ್ ವೈ.ಎಂ.ರೇಣುಕುಮಾರ್ ಅವರಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ನಿವೇಶನ ಸಮಸ್ಯೆ ಪರಿಶೀಲನೆ ಸಭೆಗೂ ಮುನ್ನ ಕೆಎಸ್ಆರ್ಟಿಸಿ ಡಿಪೋ ಸಮೀಪದ ವಿವಾದಿತ ನಿವೇಶನದಲ್ಲಿ ಬೌದ್ಧ ಮಹಾಸಭಾದವರು ನಿರ್ಮಿಸಿಕೊಂಡಿದ್ದ ಟೆಂಟ್ ತೆರವು ಸಂಬಂಧ ಉಂಟಾಗಿದ್ದ ಸಮಸ್ಯೆ ಕುರಿತಂತೆ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಲತಾಕುಮಾರಿ ಪರಿಶೀಲನೆ ನಡೆಸಿದರು. ನಂತರ ತಾಲ್ಲೂಕು ಕಚೇರಿಯಲ್ಲಿ ಬೌದ್ಧ ಮಹಾಸಭಾದವರು ಹಾಗೂ ಹಲವು ದಲಿತ ಸಂಘದವರು ಆ ಸ್ಥಳದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ ತಮ್ಮ ಸಂಘಕ್ಕೆ 10 ಗುಂಟೆ ಜಮೀನು ಮಂಜೂರು ಮಾಡುವಂತೆ ಕೋರಿದರು. ವಿವಾದಿತ ಭೂಮಿಯ ಕುರಿತು 1960ರಿಂದ ದಾಖಲೆಗಳು ಸಂಪೂರ್ಣ ನಕ್ಷೆ ಆರ್ಟಿಸಿ ಪಟ್ಟಾ ಪಹಣಿ ಸೇರಿದಂತೆ ಎಲ್ಲ ಎಲ್ಲಾ ದಾಖಲೆಗಳನ್ನು ನೀಡಬೇಕು ಎಂದು ತಹಶೀಲ್ದಾರ್ಗೆ ಅವರಿಗೆ ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.