ಹೊಳೆನರಸೀಪುರ: ಅರಕಲಗೂಡು ರಸ್ತೆಯ ಕೈಗಾರಿಕಾ ಪ್ರದೇಶದ ಸಮೀಪ ಹೇಮಾವತಿ ನಾಲೆಗೆ ಬಿಟ್ಟಿರುವ ನೀರು ರಸ್ತೆಯ ಮೇಲೆ ಹರಿದು ಪೋಲಾಗುತ್ತಿದ್ದರೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಹಾಗೂ ನೌಕರರು ಇತ್ತ ಗಮನಹರಿಸದೇ ನಿರ್ಲಕ್ಷ್ಯ ತೋರಿದ್ದನ್ನು ರೈತರು ಖಂಡಿಸಿದ್ದಾರೆ.

ರೈತರಿಗೆ ನಾಟಿ ಹಾಗೂ ಉಳುಮೆಗೆ ಸಹಾಯವಾಗಲೆಂದು ಹೇಮಾವತಿ ಜಲಾಶಯದಿಂದ ನಾಲೆಗಳಲ್ಲಿ ನೀರನ್ನು ಬಿಟ್ಟಿದ್ದಾರೆ. ರೈತರು ಅವರ ಜಮೀನಿಗೆ ಎಷ್ಟು ನೀರು ಅಗತ್ಯವೋ ಅಷ್ಟು ಬಳಸಿಕೊಂಡು ಜಮೀನಿಗೆ ಹೆಚ್ಚು ನೀರು ಹರಿಯದಂತೆ ತಡೆ ಹಾಕಿ ಮುಂದಿನ ಜಮೀನಿನವರಿಗೆ ನೀರು ಹೋಗುವಂತೆ ನೋಡಿಕೊಳ್ಳುತ್ತಾರೆ. ನಾಲೆಯ ತೂಬಿನ ಮೂಲಕ ಜಮೀನಿಗೆ ಹೆಚ್ಚು ನೀರು ಹರಿಯದಂತೆ ನಿಲ್ಲಿಸಬೇಕಾದದ್ದು ನೀರಾವರಿ ಇಲಾಖೆಯ ಕರ್ತವ್ಯ. ತೂಬುಗಳನ್ನು ನಿಲ್ಲಿಸದ ಕಾರಣ ಕಾಲುವೆಯ ನೀರು ರಸ್ತೆಯ ಮೇಲೆ ಹರಿಯುತ್ತಾ ವ್ಯರ್ಥವಾಗುತ್ತಿದೆ.

ನೀರು ರಸ್ತೆಯ ಮೇಲೆ ಹರಿಯುತ್ತಿರುವುದರಿಂದ ರಸ್ತೆಯಲ್ಲೂ ಕೊರಕಲು ಬೀಳುತ್ತಿದ್ದು ವಾಹನಗಳ ಓಡಾಟಕ್ಕೆ ತೊಂದರೆ ಆಗಿದೆ. ದ್ವಿಚಕ್ರ ವಾಹನ ಸವಾರರಿಗೆ ಅಪಾಯ ತಂದೊಡ್ಡಿದೆ. ಅನಾಹುತ ಸಂಭವಿಸುವ ಮುನ್ನ ರಸ್ತೆ ಮೇಲೆ ನೀರು ಹರಿಯದಂತೆ ಮಾಡಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಲ್ಲಿ ರೈತರು ಹಾಗೂ ನಾಗರಿಕರು ವಿನಂತಿಸಿದ್ದಾರೆ.

Graphic text / Statistics - ಹೊಳೆನರಸೀಪುರ: ಅರಕಲಗೂಡು ರಸ್ತೆಯ ಕೈಗಾರಿಕಾ ಪ್ರದೇಶದ ಸಮೀಪ ಹೇಮಾವತಿ ನಾಲೆಗೆ ಬಿಟ್ಟಿರುವ ನೀರು ರಸ್ತೆಯ ಮೇಲೆ ಹರಿದು ಪೋಲಾಗುತ್ತಿದ್ದರೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಹಾಗೂ ನೌಕರರು ಇತ್ತ ಗಮನಹರಿಸದೇ ಇರುವುದು ರೈತರಲ್ಲಿ ಬೇಸರ ಮೂಡಿಸಿದೆ. ರೈತರು ಬೇಜವಾಬ್ದಾರಿ ಅಧಿಕಾರಿಗಳ ನಡೆಯನ್ನು ಖಂಡಿಸಿದ್ದಾರೆ. ರೈತರಿಗೆ ನಾಟಿ ಹಾಗೂ ಉಳುಮೆಗೆ ಸಹಾಯವಾಗಲೆಂದು ಹೇಮಾವತಿ ಜಲಾಶಯದಿಂದ ನಾಲೆಗಳಲ್ಲಿ ನೀರನ್ನು ಬಿಟ್ಟಿದ್ದಾರೆ. ಕಾಲುವೆ ಮೂಲಕ ಜಮೀನಿಗೆ ನೀರು ತಲುಪಲೆಂದು ನೀರು ಬಿಡಲಾಗಿದೆ. ರೈತರು ಅವರ ಜಮೀನಿಗೆ ಎಷ್ಟು ನೀರು ಅಗತ್ಯವೋ ಅಷ್ಟು ನೀರು ಬಳಸಿಕೊಂಡು ಜಮೀನಿಗೆ ಹೆಚ್ಚುನೀರು ಹರಿಯದಂತೆ ತಡೆಹಾಕಿ ಮುಂದಿನ ಜಮೀನಿನವರಿಗೆ ನೀರು ಹೋಗುವಂತೆ ನೋಡಿಕೊಳ್ಳುತ್ತಾರೆ. ನಾಲೆಯ ತೂಬಿನ ಮೂಲಕ ಜಮೀನಿಗೆ ಹೆಚ್ಚು ನೀರು ಹರಿಯದಂತೆ ನಿಲ್ಲಿಸಬೇಕಾದದ್ದು ನೀರಾವರಿ ಇಲಾಖೆಯ ಕರ್ತವ್ಯ. ತೂಬುಗಳನ್ನು ನಿಲ್ಲಿಸದ ಕಾರಣ ಕಾಲುವೆಯ ನೀರು ರಸ್ತೆಯ ಮೇಲೆ ಹರಿಯುತ್ತಾ ವ್ಯರ್ಥವಾಗುತ್ತಿದೆ. ನೀರು ರಸ್ತೆಯ ಮೇಲೆ ಹರಿಯುತ್ತಿರುವುದರಿಂದ ರಸ್ತೆಯಲ್ಲೂ ಕೊರಕಲು ಬೀಳಿತ್ತಿದ್ದು ವಾಹನಗಳ ಓಡಾಟಕ್ಕೆ ತೊಂದರೆ ಆಗಿದೆ. ದ್ವಿಚಕ್ರ ವಾಹನ ಸವಾರರಿಗೆ ಅಪಾಯ ತಂದೊಡ್ಡಿದೆ. ಅನಾಹುತ ಸಂಭವಿಸುವ ಮುನ್ನ ರಸ್ತೆ ಮೇಲೆ ನೀರು ಹರಿಯದಂತೆ ಮಾಡಬೇಕೆಂದು ಸಂಬಂಧ ಪಟ್ಟ ಅಧಿಕಾರಿಗಳಲ್ಲಿ ರೈತರು ಹಾಗೂ ನಾಗರೀಕರು ವಿನಂತಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.