ಹೊಳೆನರಸೀಪುರ: ಪಟ್ಟಣದ ಕೈಗಾರಿಕೆ ಪ್ರದೇಶದಲ್ಲಿರುವ ಝಮ್ ಝಮ್ ಟಿಂಬರ್ಸ್ ಪ್ಲೆವುಡ್ ಫ್ಯಾಕ್ಟರಿಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಭಾರಿ ಪ್ರಮಾಣದ ಮರದ ದಿಮ್ಮಿಗಳು ಹಾಗೂ ಕತ್ತರಿಸಿ ಇಟ್ಟಿದ್ದ ಮರದ ತುಂಡುಗಳು ಹಾಗೂ ಇತರೆ ವಸ್ತುಗಳು ಸುಟ್ಟು ಕರಕಲಾಗಿದೆ.

ಘಟನೆಯಲ್ಲಿ ಮಿನಿ ಅಗ್ನಿಶಾಮಕ ವಾಹನಕ್ಕೂ ಬೆಂಕಿ ತಗಲಿ ಅಲ್ಪ ಪ್ರಮಾಣದ ಹಾನಿಯಾಗಿದೆ. ಅಗ್ನಿ ಶಾಮಕ ಠಾಣಾಧಿಕಾರಿ ಸೋಮಶೇಖರ್, ಚಾಲಕ ಜನಾರ್ದನ ಹಾಗೂ ವಿಷ್ಣು ಎಂಬುವವರಿಗೆ ಕೈಗಳಿಗೆ ಸಣ್ಣ ಪ್ರಮಾಣದ ಗಾಯಗಳಾಗಿವೆ.

ಪಟ್ಟಣದ ಚಿಟ್ಟನಹಳ್ಳಿ ಬಡಾವಣೆಯಲ್ಲಿರುವ ನರ್ಸಿಂಗ್ ಕಾಲೇಜು ಸಮೀಪದ ಕೈಗಾರಿಕಾ ಪ್ರದೇಶದಲ್ಲಿರುವ ಝಮ್ ಝಮ್ ಟಿಂಬರ್ಸ್ ಪ್ಲೆವುಡ್ ಫ್ಯಾಕ್ಟರಿಯಲ್ಲಿ ಗುರುವಾರ ಮಧ್ಯಾಹ್ನ 1.45ರ ಸುಮಾರಿನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಕಾಣಿಸಿಕೊಂಡಿದೆ.

ಬಿಸಿಲು ಹಾಗೂ ಒಣಗಿದ್ದ ಮರದ ಸಾಮಾನುಗಳಿಗೆ ಕಾಡ್ಗಿಚ್ಚಿನಂತೆ ಕ್ಷಣ ಮಾತ್ರದಲ್ಲಿ ಬೆಂಕಿ ಹರಡಿ ಕಾರ್ಖಾನೆಯಲ್ಲಿದ್ದ ಭಾರಿ ಪ್ರಮಾಣದ ಮರದ ದಿಮ್ಮಿಗಳು ಹಾಗೂ ಕತ್ತರಿಸಿ ಇಟ್ಟಿದ್ದ ಮರದ ದಿಮ್ಮಿಗಳು, ಪ್ಲೈವುಡ್ಗಳು ಹಾಗೂ ಇತರೆ ವಸ್ತುಗಳು ಸುಟ್ಟು ಕರಕಲಾಗಿವೆ.

ಬೆಂಕಿಯ ತೀವ್ರತೆ ಹೆಚ್ಚಿದ ಕಾರಣ ಹಾಸನ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ನವೀನ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಪಟ್ಟಣದ ಅಗ್ನಿಶಾಮಕ ಠಾಣಾಧಿಕಾರಿ ಸೋಮಶೇಖರ್ ಹಾಗೂ ಚನ್ನರಾಯಪಟ್ಟಣದ ಅಗ್ನಿಶಾಮಕ ಠಾಣಾಧಿಕಾರಿ ದೇವರಾಜೇಗೌಡ ಮತ್ತು ಪಟ್ಟಣದ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಬಹಳ ಶ್ರಮಿಸಿದರು. ಅಗ್ನಿಶಾಮಕರ ಕಾರ್ಯದಕ್ಷತೆಯನ್ನು ಕಂಡ ಪ್ರತ್ಯಕ್ಷದರ್ಶಿಗಳು ಅಭಿನಂದಿಸಿ, ಧನ್ಯವಾದ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.