ಹಾಸನ: ‘ಮಂಥರ್ ಗೌಡರನ್ನು ಚುನಾವಣೆಗೆ ನಿಲ್ಲಿಸಿ, ನಾನು ಬಂಡವಾಳ ಹಾಕುತ್ತೇನೆ ಎಂದು ಪಕ್ಷದ
ಸಭೆಯಲ್ಲಿ ಹೇಳಿಲ್ಲ. ಅವರು ಪಕ್ಷದ ಸದಸ್ಯರಾಗಿರಲಿಲ್ಲ, ಹಾಗಾಗಿ ಅದರ ಬಗ್ಗೆ ಚರ್ಚೆ ಮಾಡಿಲ್ಲ’ಎಂದು ಶಾಸಕ ಪ್ರೀತಂ ಗೌಡ ತಿರುಗೇಟು ನೀಡಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಮಂಥರ್ ಗೌಡ ಸೋಲಿಗೆ ಪ್ರೀತಂ ಗೌಡ ಕಾರಣ, ಅವರು ನಮ್ಮ ಕುಟುಂಬ ಒಡೆದರು ಎಂದು ಮಂಜು ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಆದರೆ, ಈ ಬಗ್ಗೆ ನಾನು ಬಹಿರಂಗವಾಗಿ ಮಾತನಾಡಲು ಇಷ್ಟಪಡುವುದಿಲ್ಲ' ಎಂದರು.

‘ಹಾಸನ ಆಗಲಿಲ್ಲ ಅಂತ ಅವರು ಕೊಡಗಿಗೆ ಹೋಗಿದ್ದಾರೆ. ಆದರೆ, ನಾನು ಯಾವತ್ತು ಹಾಸನ ಬಿಟ್ಟು ಓಡಿ
ಹೋಗಿಲ್ಲ. ಇಲ್ಲೇ ಇದ್ದೀನಿ, ಸಮಯ ಸಿಕ್ಕಾಗಲೆಲ್ಲಾ ಪಕ್ಷ ಬದಲಿಸುತ್ತಿರುವುದು ನಾನಲ್ಲ. ನಾನು ಸಾಯೋವರೆಗೂ ಬಿಜಪಿಯಲ್ಲೇ ಇರುತ್ತೇನೆ.ಇವತ್ತು ಈ ಪಕ್ಷ, ನಾಳೆ ಇನ್ನೊಂದು ಪಕ್ಷಕ್ಕೆ ಹೋಗುವವರ ಬಗ್ಗೆ ನಾನು ಮಾತನಾಡುವುದಿಲ್ಲ. ಈ ಬಗ್ಗೆ ಜನರೇ ಚರ್ಚೆ ಮಾಡಲಿ. ಕೊಡಗಿನಲ್ಲಿ ಏಕೆ ಮಂಥರ್‌ಗೌಡ ಸೋತರು’ ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು.

‘ಬಾಡಿಗೆ ಗಿರಾಕಿಮಂಜು ಅವರು ಈಗ ಬಿಜೆಪಿ ಬಿಟ್ಟು ಹೋಗುತ್ತಿದ್ದಾರೆ. ಅವರ ಬಗ್ಗೆ ನಾನು ಮಾತನಾಡುವುದಿಲ್ಲ. ಬದ್ಧತೆ ಯಾರಿಗೆ ಇದೆ ಅಂತ ಜನ ತಿಳಿದುಕೊಳ್ಳಲಿ. ಎ.ಮಂಜು ಇನ್ನೂ ಬಿಜೆಪಿಯಲ್ಲಿದ್ದಾರೆ. ಅವರು ಬಿಟ್ಟು ಹೋಗುವುದಾದರೆ ಕಾಫಿ ಕೊಟ್ಟು ಕಳಿಸುವೆ. ಇಲ್ಲಂದ್ರೆ ನೀರು ಸಹ ಕೊಡೋದಿಲ್ಲ. ಕಾಂಗ್ರೆಸ್‌ಗೆ ಹೋಗಲು ರೆಡಿಯಾಗಿರುವವರು ನನ್ನ ಬಗ್ಗೆ ಮಾತನಾಡಿ ಹೋಗುವುದಾದರೆಹೋಗಲಿ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.