ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಕಲೇಶಪುರ | ಅಂತರರಾಜ್ಯ ಕಾರುಕಳ್ಳನ ಬಂಧನ: 5 ಕಾರು,₹2.75 ಲಕ್ಷ ನಗದು ವಶ

Published 8 ಆಗಸ್ಟ್ 2023, 12:37 IST
Last Updated 8 ಆಗಸ್ಟ್ 2023, 12:37 IST
ಅಕ್ಷರ ಗಾತ್ರ

ಸಕಲೇಶಪುರ: ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಕಾರು ಕಳವು ಮಾಡುತ್ತಿದ್ದ ಅಂತರ ರಾಜ್ಯ ಆರೋಪಿಯನ್ನು ಇಲ್ಲಿನ ಪೊಲೀಸರು ಆತ ಕಳ್ಳತನ ಮಾಡಿದ್ದ ಕಾರು ಸಹಿತ ಬಂಧಿಸುವಲ್ಲಿ ಯಶಸ್ವಿ ಆಗಿದ್ದಾರೆ.

ಕೇರಳದ ಕಣ್ಣೂರು ಜಿಲ್ಲೆ ಪುದಿಯತೆರವು ತಾಲ್ಲೂಕಿನಲ್ಲಿ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ ಕೆ.ಎಸ್‌. ದಿಲೀಪ್‌ ಬಂಧಿತ ಆರೋಪಿ. ಆರೋಪಿಯಿಂದ ಮಾರುತಿ ಆಲ್ಟೋ, ಮಹಿಂದ್ರಾ ಬೊಲೇರೋ, ಎರಡು ಓಮಿನಿ ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ. ಇನ್ನಿತರ ಕಡೆಗಳಲ್ಲಿ ಕಾರು ಕಳ್ಳತನ ಮಾಡಿ ಬಿಡಿಭಾಗಗಳನ್ನು ಮಾರಾಟ ಮಾಡಿದ್ದ ₹2.75 ಲಕ್ಷ ನಗದು, ಕಳ್ಳತನಕ್ಕೆ ಬಳಸುತ್ತಿದ್ದ ಸೆನ್ಸಾರ್ ಮಿಷನ್ ವಶಕ್ಕೆ ಪಡೆಯಲಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಮಾರ್ಗದರ್ಶನ, ಎಎಸ್‌ಪಿ ತಮ್ಮಯ್ಯ ಮೇಲ್ವಿಚಾರಣೆ ಹಾಗೂ ಡಿವೈಎಸ್‌ಪಿ ಎಚ್‌.ಎನ್‌. ಮಿಥುನ್‌ ಅವರ ಉಸ್ತುವಾರಿಯಲ್ಲಿ ಇನ್‌ಸ್ಪಕ್ಟರ್‌ಗಳಾದ ಚೈತನ್ಯ ಆಲೂರಿನ ಗಂಗಾಧರ್, ಇಲ್ಲಿಯ ಗ್ರಾಮಾಂತರ ಪೊಲೀಸ್‌ ಠಾಣೆಯ ಅಪರಾಧ ವಿಭಾಗದ ಪಿಎಸ್‌ಐ ಯು ಖತೀಜಾ ಮತ್ತು ಕಾನೂನು ಸುವ್ಯವಸ್ಥೆ ವಿಭಾಗದ ಪಿಎಸ್‌ಐ ಸದಾಶಿವ ತಿಪರೆಡ್ಡಿ, ಸುನೀಲ್‌, ಖಾದರ್‌ ಅಲಿ, ಸತೀಶ್‌, ಆಲೂರು ಠಾಣೆಯ ರಾಕೇಶ್‌, ಸೋಮಶೇಖರ್‌, ಹೈವೇ ಮೊಬೈಲ್‌ ಚಾಲಕರಾದ ಪ್ರದೀಪ್‌ ಎಎಸ್‌ಐ ವಜೀರ್ ಕಾರ್ಯಾಚರಣೆ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT