ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಜಾವಗಲ್| ಬಾಲಕರ ಕಬಡ್ಡಿ ತಂಡದ ಸಾಧನೆ

Published 8 ಆಗಸ್ಟ್ 2024, 14:24 IST
Last Updated 8 ಆಗಸ್ಟ್ 2024, 14:24 IST
ಅಕ್ಷರ ಗಾತ್ರ

ಜಾವಗಲ್: ಗ್ರಾಮದಲ್ಲಿ ಆಯೋಜಿಸಲಾಗಿದ್ದ ಹೋಬಳಿ ಮಟ್ಟದ ಕ್ರೀಡಾಕೂಟದ ಕಬ್ಬಡಿ ಪಂದ್ಯದಲ್ಲಿ ಪ್ರಥಮ ಸ್ಥಾನವನ್ನು ಪಡೆಯುವ ಮೂಲಕ ಜಾವಗಲ್ ಗ್ರಾಮದ ಕನ್ನಡ ಮಾತ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ತಾಲ್ಲೂಕು ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.

‘ಆಗಸ್ಟ್ 6 ಮತ್ತು 7ರಂದು ಗ್ರಾಮದ ಶ್ರೀನಾಥ್ ಕ್ರೀಡಾಂಗಣದಲ್ಲಿ ನಡೆದ ಪ್ರಾಥಮಿಕ ಶಾಲೆಗಳ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಕನ್ನಡ ಮಾತಾ ಹಿರಿಯ ಪ್ರಾಥಮಿಕ ಶಾಲೆಯ ಬಾಲಕರ ಕಬಡ್ಡಿ ತಂಡ  ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿದೆ’ ಎಂದು  ಶಿಕ್ಷಕ ರವೀಶ್ ತಿಳಿಸಿದರು. ವಿದ್ಯಾರ್ಥಿಗಳನ್ನು  ಮುಖ್ಯ ಶಿಕ್ಷಕ ನಂಜುಂಡಪ್ಪ ಅಭಿನಂದಿಸಿದರು.

ಶಿಕ್ಷಕರಾದ ರವಿ ಸಿ.ಜಿ, ಧನಂಜಯಮೂರ್ತಿ, ಅರಸೀಕೆರೆ ತಾಲ್ಲೂಕು ಶಿಕ್ಷಕರ ಸಂಘದ ನಿರ್ದೇಶಕ ಯು.ಎನ್. ಅಶೋಕ್, ಟಿ.ಪಿ.ಇ.ಒ. ವಸಂತ್ ಕುಮಾರ್  ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT