ಹಳೇಬೀಡಿನ ದ್ವಾರಸಮುದ್ರ ಕೆರೆಯಲ್ಲಿ ಸೋಮವಾರ ಸಂಜೆ ಗ್ರಾಮ ದೇವತೆ ಕರಿಯಮ್ಮ ಹಾಗೂ ಹೊಯ್ಸಳೇಶ್ವರ ಸ್ವಾಮಿಯ ತೆಪ್ಪೋತ್ಸವ ನಡೆಯಿತು
ತೆಪ್ಪೋತ್ಸವ ಹೊಯ್ಸಳರ ನಾಡಿನ ವೈಭವ
ಗ್ರಾಮ ದೇವತೆ ಹಾಗೂ ಹೊಯ್ಸಳೇಶ್ವರ ಸ್ವಾಮಿಯ ತೆಪ್ಪೋತ್ಸವ ಪ್ರಸಕ್ತ ವರ್ಷಕ್ಕೆ ಮಾತ್ರ ಸಿಮೀತವಾಗಬಾರದು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್.ಆರ್.ಮಧು ಹೇಳಿದರು. ಹೊಯ್ಸಳೇಶ್ವರ ದೇವಾಲಯ ಪಕ್ಕದಲ್ಲಿರುವ ದ್ವಾರ ಸಮುದ್ರ ಕೆರೆಯಲ್ಲಿ ತೆಪ್ಪೋತ್ಸವ ನಡೆಸುವುದರಿಂದ ಹೊಯ್ಸಳರ ನಾಡಿನ ವೈಭವ ಹೆಚ್ಚಾಗಲಿದೆ. ದೂರದಿಂದ ಆಗಮಿಸಿದ ಪ್ರವಾಸಿಗರು ಸಹ ಉತ್ಸವವನ್ನು ಕಣ್ತುಂಬಿಕೊಳ್ಳುತ್ತಾರೆ ಎಂದು ಅವರು ಹೇಳಿದರು.