ಅರಸೀಕೆರೆ: ರೇಷ್ಮೆ ಬೆಳೆಗಾರರಿಗೆ ಸರ್ಕಾರದಿಂದ ಪ್ರೋತ್ಸಾಹಧನ, ಸಬ್ಸಿಡಿ ಮತ್ತು ಇತರ ಯೋಜನೆಗಳ ಮೂಲಕ ಬೆಂಬಲ ನೀಡಬೇಕಾದ ಅಗತ್ಯವಿದೆ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದರು.

ತಾಲ್ಲೂಕಿನ ಬೆಂಡೆಕೆರೆ ಗ್ರಾಮದಲ್ಲಿ ನೂತನವಾಗಿ ಮೆರಾಜ್ ಟ್ರೇಡರ್ಸ್ ವತಿಯಿಂದ ಸ್ಥಾಪಿಸಲಾದ ಸ್ವಯಂ ಚಾಲಿತ ರೇಷ್ಮೆ ನೂಲು ಬಿಚ್ಚುವ ಘಟಕಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿದರು.

‘ಕ್ಷೀಣಿಸುತ್ತಿರುವ ರೇಷ್ಮೆ ಕೃಷಿಯನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಕಾರ್ಯಾಗಾರ ನಡೆಸುವ ಅಗತ್ಯವಿದೆ. ರೇಷ್ಮೆ ಬೆಳೆಗಾರರಿಗೆ ಹೊಸ ತಂತ್ರಜ್ಞಾನಗಳನ್ನು ಪರಿಚಯಿಸಲು ಮತ್ತು ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ಚಿಂತಿಸಬೇಕಾಗಿದ್ದು ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡಲಾಗುವುದು’ ಎಂದು ಹೇಳಿದರು.

ಸಂಸದ ಶ್ರೇಯಸ್ ಪಟೇಲ್ ಮಾತನಾಡಿ, ‘ರಾಜ್ಯದ ವಿವಿಧ ಭಾಗಗಳಲ್ಲಿ ರೇಷ್ಮೆ ಪ್ರಮುಖ ಆಧಾರ ಬೆಳೆಯಾಗಿದೆ. ಆದರೆ ರೇಷ್ಮೆ ತಜ್ಞರ ಕೊರತೆಯಿಂದ ಬೆಳೆ ಕ್ಷೀಣಿಸುವಂತ ಪರಿಸ್ಥಿತಿಗೆ ಬಂದಿದೆ. ಈ ಬೆಳೆ ಉತ್ತೇಜನಕ್ಕೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಕಾರ್ಯ ಪ್ರವೃತ್ತವಾಗಬೇಕಿದೆ.ರೇಷ್ಮೆ ಬೆಳೆಗಾರರಿಗೆ ಸರ್ಕಾರ ಪ್ರೋತ್ಸಾಹ ನೀಡಿದಾಗ ಬೆಳೆಗಾರರು ಆರ್ಥಿಕವಾಗಿ ಲಾಭ ಕಂಡುಕೊಳ್ಳುತ್ತಾರೆ’ ಎಂದು ಹೇಳಿದರು.

ಉದ್ಯಮಿ ಮೊಹಮ್ಮದ್ ಮೊಹಿನ್, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಬಿಳಿ ಚೌಡಯ್ಯ, ನಗರಸಭಾ ಅಧ್ಯಕ್ಷ ಎಂ.ಸಮೀವುಲ್ಲಾ, ಉಪಾಧ್ಯಕ್ಷ ಮನೋಹರ್ ಮೇಸ್ತ್ರೀ, ಜಿಲ್ಲಾ ದೀಕ್ಷಾ ಸಮಿತಿ ಸದಸ್ಯೆ ಮಂಜುಳಾಚಂದ್ರನಾಯ್ಕ್ , ಬೆಂಡೆಕೆರೆ ಗ್ರಾಮದ ಮುಖಂಡರಾದ ಬಿ.ಸಿ.ಎಂ. ಬ್ರೀರ್ಕ್ಸ್ ಘಟಕದ ಮುನ್ನಾವರ್ ಪಾಷಾ, ರಾಮನಗರ ಅಕ್ಮಲ್ ಪಾಷಾ, ತರೀಕೆರೆ ಉದ್ಯಮಿ ಇಸ್ರಾರ್ ಪಾಷಾ, ಜಿಲ್ಲಾ ರೇಷ್ಮೆ ಇಲಾಖೆ ಉಪ ನಿರ್ದೇಶಕ ಎಸ್.ಜೆ.ಗೀರಿಶ್, ಸಹಾಯಕ ನಿರ್ದೇಶಕ ಎಚ್.ಟಿ.ದೇವೆಂದ್ರ ಕುಮಾರ್ ಇದ್ದರು

ಅರಸೀಕೆರೆ ತಾಲ್ಲೂಕಿನಲ್ಲಿ ರೇಷ್ಮೆ ಅಭಿವೃದ್ದಿ ಇಲಾಖೆ ಇದ್ದು ರೇಷ್ಮೆ ಬೆಳೆ ಬಗ್ಗೆ ಜಾಗೃತಿ ಮೂಡಿಸಲಾಗುವುದು. ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದ್ದು ಸರ್ಕಾರದ ಗಮನಕ್ಕೆ ತರಲಾಗುವುದು
ಕೆ.ಎಂ.ಶಿವಲಿಂಗೇಗೌಡ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.