ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ವೇಷದಿಂದ ಸಮಾಜದಲ್ಲಿ ಅಶಾಂತಿ: ಬಾನು ಮುಷ್ತಾಕ್ ಎಚ್ಚರಿಕೆ

‘ಕನ್ನಡ ಸಾಹಿತ್ಯ ಮತ್ತು ಮೌಲ್ಯಗಳು’ ಗೋಷ್ಠಿ
Last Updated 31 ಮಾರ್ಚ್ 2022, 15:57 IST
ಅಕ್ಷರ ಗಾತ್ರ

ಬೂವನಹಳ್ಳಿ (ಚನ್ನವೀರಕಣವಿ ವೇದಿಕೆ): ‘ದ್ವೇಷದಿಂದ ಸಮಾಜದಲ್ಲಿ ಅಶಾಂತಿಸೃಷ್ಟಿಸಿದರೆ ಅದರ ಫಲವನ್ನು ನಾವೇ ಉಣ್ಣಬೇಕಾಗುತ್ತದೆ’ ಎಂದು ಸಾಹಿತಿಬಾನುಮುಷ್ತಾಕ್ ಎಚ್ಚರಿಸಿದರು.

ಜಿಲ್ಲಾ 20ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಗುರುವಾರ ‘ಕನ್ನಡ ಸಾಹಿತ್ಯಮತ್ತು ಮೌಲ್ಯಗಳು’ ಎಂಬ ಗೋಷ್ಠಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಪರಸ್ಪರ ಪ್ರೀತಿ, ವಿಶ್ವಾಸ ಮೂಡಿಸಿದರೆ ಸಮಾಜ ಸದೃಢವಾಗಿರುತ್ತದೆ. ಹುಣಸೆಬೀಜ ಬಿತ್ತಿ, ಮಾವು ಫಲ ಪಡೆಯಲು ಸಾಧ್ಯವಿಲ್ಲ. ಬಿತ್ತಿದ್ದನ್ನೇ ಬೆಳೆಯಬೇಕು, ಬೆಳೆದಿದ್ದನ್ನೇ ತಿನ್ನಬೇಕು ಎಂಬುದಕ್ಕೆ ರಾಮಾಯಣ, ಮಹಾಭಾರತ ಕಾವ್ಯ
ಗಳುಹಾಗೂ ಜೀವನದ ಅನುಭವ ಗಳು ಸಾಕ್ಷಿ’ ಎಂದು ನುಡಿದರು.

‘ಇತ್ತೀಚೆಗೆ ಕನ್ನಡದ ಪೂಜಾರಿ ಹಿರೇಮಗಳೂರು ಕಣ್ಣನ್ ಅವರು ಒಂದುಸಮುದಾಯದ ಹೆಣ್ಣು ಮಕ್ಕಳ ಬಗ್ಗೆ ಕೆಟ್ಟದಾಗಿ ಮಾತನಾಡಿ, ನಂತರ ಅದನ್ನುಹಾಸ್ಯ ಮಾಡಲು ಪ್ರಾಸಕ್ಕಾಗಿ ಆ ಪದ ಬಳಸಿರುವುದಾಗಿ ಸಮರ್ಥಿಸಿಕೊಂಡಿರುವುದು ಖಂಡನೀಯ’ ಎಂದರು.

‘ಹಲಾಲ್ ಪದ ಕುರಿತು ಈಗ ಹೆಚ್ಚು ಚರ್ಚೆ ನಡೆಯುತ್ತಿದೆ. ಹಲಾಲ್ಪದದ ಅರ್ಥ ಪರಿಶುದ್ಧ, ಸಕ್ರಮ ಮತ್ತು ಒಪ್ಪುವಂತಹ ಕ್ರಮ ಎಂದರ್ಥ. ಹರಾಮ್ಹಾಗೂ ಹಲಾಲ್ ಎಂಬ ಪದ ಮುಸ್ಲಿಂರ ಬದುಕಿನಲ್ಲಿ ನಿತ್ಯಜೀವನದಲ್ಲಿ ಹೆಚ್ಚು ಬಳಕೆಯಾಗುತ್ತದೆ. ಹಲಾಲ್ ಎಂದರೆ ಎಲ್ಲರೂ ಸಕ್ರಮ ಮಾರ್ಗದಲ್ಲಿ ನಡೆಯಬೇಕು ಎಂಬುದನ್ನು ಹೇಳುತ್ತದೆ. ಹಲಾಲ್ ಕಟ್ ಎಂದರೆ ಸನ್ಮಾರ್ಗದಲ್ಲಿಕತ್ತರಿಸು ಎಂದರ್ಥ’ ಎಂದು ವ್ಯಾಖ್ಯಾನಿಸಿದರು.‌

‘ಕನ್ನಡ ಸಾಹಿತ್ಯ ಮತ್ತು ರೈತಪರ ಚಿಂತನೆಗಳ’ ಕುರಿತು ವಿಷಯಮಂಡಿಸಿದ ಮೈಸೂರಿನ ಪ್ರಾಧ್ಯಾಪಕ ಪಿ.ಬೆಟ್ಟೇಗೌಡ, ‘ರೈತರು ಮತ್ತು ಕವಿಗಳುಒಂದೇ ದಾರಿಯಲ್ಲಿ ಸಾಗಿಸುತ್ತಿರುವ ಕರ್ಮ ಯೋಗಿಗಳು. ರೈತನ ಕಸುಬು ಪ್ರಪಂಚದಲ್ಲೇ ಅತ್ಯಂತ ಸೃಜನವಾದ ಕಾರ್ಯ. ಹಿಂದೆ ಬಹುತೇಕ ಕವಿಗಳು ಅರಮನೆ ಹಾಗೂ ಗುರು ಮನೆಯಲ್ಲಿ ಸಾಹಿತ್ಯ ರಚನೆ ಮಾಡಿದ್ದರು. ಈಹಿನ್ನೆಲೆಯಲ್ಲಿ ಅವರು ರೈತರ ಬದುಕಿನ ಬಗ್ಗೆ ಹೆಚ್ಚು ಬೆಳಕು ಚೆಲ್ಲಲು ಸಾಧ್ಯವಾಗಿಲ್ಲ’ ಎಂದರು.‌‌

‘ಕನ್ನಡ ಸಾಹಿತ್ಯ ರೈತರ ಬದುಕಿನ ಬಗ್ಗೆ ನಿರ್ಲಕ್ಷ್ಯವಹಿಸಿದೆ. ರೈತರ ಬದುಕಿನಸಾಹಿತ್ಯವನ್ನು ರೈತರೇ ಬರೆದರೆ ಮಾತ್ರ ಅದು ಪ್ರಾಮಾಣಿಕವಾಗಿರುತ್ತದೆ. ಹೋರಾಟಗಾರರನ್ನು ಗುಡಿಯಲ್ಲಿ ಕೂರಿಸಿರುವಂತೆ ರೈತರನ್ನು ಆದರ್ಶದತೆಪ್ಪದಲ್ಲಿ ಕೂರಿಸಿದ್ದೇವೆ. ಆದರೆ, ತೆಪ್ಪ ತೂತಾಗಿ ಮುಳುಗುತ್ತಿರುವುದು ರೈತರಿಗೆ ಮಾತ್ರ ಗೊತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಕನ್ನಡ ಸಾಹಿತ್ಯದಲ್ಲಿ ಮಹಿಳಾ ಪರ ಚಿಂತನೆಗಳು’ ಎಂಬ ವಿಷಯದಕುರಿತು ಚಿಕ್ಕಮಗಳೂರು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಉಪನ್ಯಾಸಕಿ ನಾಗಶ್ರೀ ತ್ಯಾಗರಾಜ್ ವಿಷಯ ಮಂಡಿಸಿದರು. ಸಾಹಿತಿ ಡಿ.ಎಸ್. ರಾಮಸ್ವಾಮಿ ಆಶಯ ನುಡಿಗಳನ್ನಾಡಿದರು.

ಸಮ್ಮೇಳನಾಧ್ಯಕ್ಷ ಹಂಪನಹಳ್ಳಿ ತಿಮ್ಮೇಗೌಡ, ತಹಶೀಲ್ದಾರ್ ನಟೇಶ್, ಕಸಾಪಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಲ್.ಮಲ್ಲೇಶ್ ಗೌಡ, ಬಿ.ಎನ್‌.ರಾಮಸ್ವಾಮಿ,ರಂಗಸ್ವಾಮಿ, ಜಿಲ್ಲಾ ಲೇಖಕಿಯರ ಬಳಗದ ಅಧ್ಯಕ್ಷೆ ವೇದಶ್ರೀರಾಜ್, ಶ್ರೀರಂಗ ಬಿಇಡಿ ಕಾಲೇಜು ಪ್ರಾಂಶುಪಾಲ ಮಿನಿ ವರ್ಗಿಸ್, ಫಾಲಾಕ್ಷ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT