ಬೇಲೂರು: ಅಪ್ರಾಪ್ತ ವಯಸ್ಸಿನ ಬಾಲಕನಿಗೆ ಚಲಾಯಿಸಲು ವಾಹನ ನೀಡಿದ್ದ ತಂದೆಗೆ ಇಲ್ಲಿನ ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶೆ ಎಂ.ಎಸ್. ಶಶಿಕಲಾ ಅವರು ₹ 25 ಸಾವಿರ ದಂಡ ವಿಧಿಸಿದ್ದಾರೆ.

ಡಿಸೆಂಬರ್ 14 ರಂದು ಮಾದಿಹಳ್ಳಿ ಹೋಬಳಿ ಇ. ಹೊಸಳ್ಳಿ ಗ್ರಾಮದ 15 ವರ್ಷದ ಯೋಗಿನ್ ತನ್ನ ತಂದೆಗೆ ಸೇರಿದ ಮಾರುತಿ ಆಲ್ಟೋ ಕಾರನ್ನು ಪಟ್ಟಣದ ನೆಹರುನಗರದಲ್ಲಿ ಚಲಾಯಿಸಿಕೊಂಡು ಬರುತ್ತಿದ್ದ. ಈ ವೇಳೆ ಪೊಲೀಸ್ ಇನ್ಸ್ಪೆಕ್ಟರ್ ರೇವಣ್ಣ ಪರಿಶೀಲಿಸಿದ್ದು, ಯೋಗಿನ್ ತಂದೆ ಜಯಣ್ಣ ವಿರುದ್ಧ ಪ್ರಕರಣ ದಾಖಲಿಸಿದ್ದರು.

ಡಿಸೆಂಬರ್ 17ರಂದು ಇಲ್ಲಿನ ಜೆಎಂಎಫ್ಸಿ ಸಿವಿಲ್ ನ್ಯಾಯಾಧೀಶೆ ಎಂ.ಎಸ್. ಶಶಿಕಲಾ ಅವರು ದಂಡ ವಿಧಿಸಿ ಆದೇಶಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.