ಹಾಸನ: ‘ಮುಡಾಕ್ಕೆ ಸಂಬಂಧಿಸಿದ ದಾಖಲೆಗಳನ್ನು ನಮ್ಮ ಪಕ್ಷದವರು ಕೊಟ್ಟಿದ್ದಾರೋ, ಅವರ ಪಕ್ಷದವರು ಕೊಟ್ಟಿದ್ದಾರೋ ನಮಗೂ ಗೊತ್ತಿಲ್ಲ, ಅವರಿಗೂ ಗೊತ್ತಿಲ್ಲ. ಕೊಡುವಂಥದ್ದು, ತೆಗೆದುಕೊಳ್ಳುವಂಥದ್ದು ಏನೂ ಇರಲ್ಲ. ನಮ್ಮ ಪಕ್ಷದಲ್ಲೂ ಷಡ್ಯಂತ್ರಗಳು ನಡೆಯುತ್ತವೆ ಎನ್ನುವುದನ್ನು ನಾವು ತಳ್ಳಿ ಹಾಕುವಂತಿಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ಹೇಳಿದರು.