ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಹುಗ್ರಾಮ: ಜಿಲ್ಲೆಗೆ ₹1,515 ಕೋಟಿ

Last Updated 9 ಏಪ್ರಿಲ್ 2022, 15:18 IST
ಅಕ್ಷರ ಗಾತ್ರ

ಹಾಸನ: ‘ಜಲಜೀವನ್ ಮಿಷನ್ ಯೋಜನೆಯಡಿ 2022–23ನೇ ಸಾಲಿನಲ್ಲಿಕೇಂದ್ರ ಸರ್ಕಾರದಿಂದ ಜಿಲ್ಲೆಗೆ ₹1,515 ಕೋಟಿ ವೆಚ್ಚದ ಕಾಮಗಾರಿಗೆಅನುಮೋದನೆ ಸಿಕ್ಕಿದೆ’ ಎಂದು ಬಿಜೆಪಿ ಜಿಲ್ಲಾ ವಕ್ತಾರ ಎಚ್.ಎಂ.ಸುರೇಶ್
ಕುಮಾರ್ ಹೇಳಿದರು.

‘ಜಿಲ್ಲೆಯಲ್ಲಿ 4,35,244 ಗ್ರಾಮೀಣ ಕುಟುಂಬಗಳಿದ್ದು, 2020–21ನೇ ಸಾಲಿನಲ್ಲಿ1,03,939 ಮನೆಗಳಿಗೆ ನಳ ಅಳವಡಿಕೆ ಕಾಮಗಾರಿ ನಡೆಯುತ್ತಿದೆ.2021–22ನೇ ಸಾಲಿನಲ್ಲಿ 51,789 ನಲ್ಲಿ ಸಂಪರ್ಕ ಕಲ್ಪಿಸುವ ಕಾಮಗಾರಿಗೆ ಅನುಮೋದನೆ ಸಿಕ್ಕಿದೆ. ಎಂಟೂ ತಾಲ್ಲೂಕುಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ₹2 ಸಾವಿರ ಕೋಟಿ ನೀಡಲಾಗಿದೆ’ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ದೇಶದ ಗ್ರಾಮೀಣ ಭಾಗದ ಪ್ರತಿ ಹಳ್ಳಿಗೂ ನೀರು ಪೂರೈಸುವ ಈ ಯೋಜನೆ2019ರ ಆಗಸ್ಟ್ 15ರಿಂದ ಆರಂಭಗೊಂಡಿದ್ದು, ಎಲ್ಲೆಡೆ ಕಾಮಗಾರಿ ನಡೆಯುತ್ತಿದೆ. ಈ ಯೋಜನೆ ಅನುಷ್ಠಾನಕ್ಕೆ ಕೇಂದ್ರ ಶೇ 42.5 ಮತ್ತು ರಾಜ್ಯದಿಂದ ಅಷ್ಟೇ ಪಾಲನ್ನು ನೀಡಲಾಗುತ್ತಿದೆ. ದೇಶದಲ್ಲಿ ಗ್ರಾಮೀಣ ಕುಟುಂಬಗಳ ಸಂಖ್ಯೆ 19.30 ಕೋಟಿ ಇದ್ದು, ಹಂತ ಹಂತವಾಗಿ ಪ್ರತಿ ಮನೆಗೂ ನೀರು ನೀಡುವ ಕೆಲಸ ಆಗುತ್ತಿದೆ’ ಎಂದು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯ ಪರಿಷತ್ ಸದಸ್ಯ ಮಾಯಣ್ಣ, ಆಲೂರು ಮಂಡಲ ಅಧ್ಯಕ್ಷ ನಾಗರಾಜು, ಅರಸೀಕೆರೆ ಮಂಡಲದ ರಮೇಶ್, ಹೊಳೆನರಸೀಪುರದ ನಾರಾಯಣ್ ಮತ್ತು ಜಿಲ್ಲಾ ಮಾಧ್ಯಮ ಸಹ ಪ್ರಮುಖ್ ಗಗನ್ ಗಾಂಧಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT