ಅವಿಶ್ವಾಸ ನಿರ್ಣಯಕ್ಕ ಸೋಲಾಗಿದ್ದರಿಂದ ಹಾಸನ ನಗರಸಭೆ ಅಧ್ಯಕ್ಷರಾಗಿ ಮುಂದುವರಿದ ಎಂ.ಚಂದ್ರೇಗೌಡರನ್ನು ಬಿಜೆಪಿ ಸದಸ್ಯರು ಅಭಿನಂದಿಸಿದರು
ಹಾಸನದಲ್ಲಿ ಸೋಮವಾರ ವಿಧಾನ ಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣ ಪತ್ರಿಕಾಗೋಷ್ಠಿ ನಡೆಸಿದರು. ಶಾಸಕ ಸ್ವರೂಪ್ ಪ್ರಕಾಶ್ ನಗರಸಭೆ ಜೆಡಿಎಸ್ ಸದಸ್ಯರು ಇದ್ದರು.
ಪಕ್ಷಾತೀತವಾಗಿ ಚಂದ್ರೇಗೌಡರನ್ನು ಬೆಂಬಲಿಸಿದ್ದೇವೆಯೇ ಹೊರತು ಹೊಂದಾಣಿಕೆ ರಾಜಕೀಯ ಇಲ್ಲ. ಚಂದ್ರೇಗೌಡರು ಉತ್ತಮ ಕೆಲಸ ಮಾಡಿದ್ದಾರೆ. ಅಭಿವೃದ್ಧಿಗೆ ಮೆಚ್ಚಿ ಬಿಜೆಪಿ ಕಾಂಗ್ರೆಸ್ ಸದಸ್ಯರೆಲ್ಲ ಬೆಂಬಲ ನೀಡಿದ್ದಾರೆ.
ಶ್ರೇಯಸ್ ಪಟೇಲ್ ಸಂಸದ
ಜಿಲ್ಲೆಯಲ್ಲಿ ಕಾಂಗ್ರೆಸ್‌ಗೆ ಜೆಡಿಎಸ್ ವಿರೋಧ ಪಕ್ಷ. ಸಂಸದರು ಕಾಂಗ್ರೆಸ್ ಸದಸ್ಯರು ನಿರ್ಣಯದ ವಿರುದ್ಧ ಮತ ಚಲಾಯಿಸಿದ್ದಾರೆ. ಇದು ಜೆಡಿಎಸ್ ವಿರುದ್ಧವೇ ಹೊರತು ಬಿಜೆಪಿ ಪರ ಅಲ್ಲ. ತಟಸ್ಥ ಉಳಿದಿದ್ದರೆ ಕಾಂಗ್ರೆಸ್ ಗೌರವ ಹೆಚ್ಚಾಗುತ್ತಿತ್ತು ಎಂಬುದು ನನ್ನ ಅಭಿಪ್ರಾಯ.