ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸೆ.7 ರಂದು ಪಾಂಚಜನ್ಯ ಹಿಂದೂ ಗಣಪತಿ ಪ್ರತಿಷ್ಠಾಪನೆ

Published : 5 ಸೆಪ್ಟೆಂಬರ್ 2024, 14:42 IST
Last Updated : 5 ಸೆಪ್ಟೆಂಬರ್ 2024, 14:42 IST
ಫಾಲೋ ಮಾಡಿ
Comments

ಹಾಸನ: ನಗರದ ಪಾಂಚಜನ್ಯ ಹಿಂದೂ ಗಣಪತಿ ಸಮಿತಿ ವತಿಯಿಂದ ಸೆ.7 ರಂದು ಹಾಸನಾಂಬ ಕಲಾಕ್ಷೇತ್ರ ಆವರಣದಲ್ಲಿ ಪಾಂಚಜನ್ಯ ಹಿಂದೂ ಗಣಪತಿ ಉತ್ಸವ- 2024 ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಕಾರ್ಯದರ್ಶಿ ವೇಣುಗೋಪಾಲ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್‌ಎಸ್‌ಎಸ್‌ನಿಂದ ಕಳೆದ 15 ವರ್ಷದಿಂದ ಪಾಂಚಜನ್ಯ ಹಿಂದೂ ಗಣಪತಿ ಉತ್ಸವ ನಡೆಸಿಕೊಂಡು ಬರಲಾಗುತ್ತಿದ್ದು, ನಿತ್ಯ ಮಧ್ಯಾಹ್ನ 12 ಗಂಟೆ ಸಂಜೆ 8 ರವರೆಗೆ ಮಹಾಮಂಗಳಾರತಿ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಸೆ.12 ರಂದು ಗಣೇಶ ಮೂರ್ತಿ ವಿಸರ್ಜಿಸಲಾಗುವುದು ಎಂದರು.

ಸೆ.7 ರಂದು ಶನಿವಾರ ಸಂಜೆ 6 ರಿಂದ ವಾಣಿನಾಗೇಂದ್ರ ಮತ್ತು ಸೃಷ್ಟಿ ನಾಗ್ ಅವರಿಂದ ಸಂಗೀತ ಕಾರ್ಯಕ್ರಮ. ಸೆ. 8 ರಂದು ಮಕ್ಕಳಿಗೆ ಗಣೇಶನ ಚಿತ್ರಕಲಾ ಸ್ಪರ್ಧೆ, ಜೇಡಿ ಮಣ್ಣಿನ ಗಣೇಶ ಮೂರ್ತಿ ರಚನೆ, ರಾಮಾಯಣ ಹಾಗೂ ಮಹಾಭಾರತ ಪಾತ್ರಗಳ ಛದ್ಮವೇಷ ಸ್ಪರ್ಧೆ ಏರ್ಪಡಿಸಲಾಗಿದೆ. ವಿಜೇತರಿಗೆ ಬಹುಮಾನ ನೀಡಲಾಗುವುದು. ಸಂಜೆ 6 ರಿಂದ 9 ರವರೆಗೆ ಕುಟುಂಬ ಪ್ರಬೋಧನ ಕಾರ್ಯಕ್ರಮವಿದೆ ಎಂದರು.

ಸೆ.9ರಂದು ಸಂಜೆ 5 ಗಂಟೆಯಿಂದ ರಾಷ್ಟ್ರ ಸೇವಿಕ ಸಮಿತಿ ವತಿಯಿಂದ ದೇಶಭಕ್ತಿಗೀತೆ, ಸಂಜೆ 6 ಗಂಟೆಗೆ ಭರತನಾಟ್ಯ, ಸಂಜೆ 7 ಕ್ಕೆ ಕೇರಳ ರಾಜ್ಯದ ಕಳರಿ ಮನೂವರ್ ಅವರಿಂದ ಭಾರತೀಯ ಸಮರಕಲೆಯ ಯುದ್ದ ಪ್ರದರ್ಶನ ನಡೆಯಲಿದೆ. ಸೆ.10 ರಂದು ಮಧ್ಯಾಹ್ನ 3.30 ಕ್ಕೆ ಬೈಕ್ ರ‍್ಯಾಲಿ ಇದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.

ಸೆ. 11 ರಂದು ಬೆಳಿಗ್ಗೆ ಗಣಹೋಮ, ಸಂಜೆ 6 ಕ್ಕೆ ವಿದುಷಿ ಡಾ. ಶೈಲಜಾ ಕುಮಾರ್ ಅವರಿಂದ ನೃತ್ಯ ಕಾರ್ಯಕ್ರಮ, ಸಂಜೆ 7 ರಿಂದ ಕೊಳಲು ಗಾಯನ ಕಾರ್ಯಕ್ರಮವಿದೆ. ಸೆ.12 ರಂದು ಮಧ್ಯಾಹ್ನ 12.30 ಕ್ಕೆ ಗಣಪತಿ ವಿಸರ್ಜನಾ ಮೆರವಣಿಗೆ ಹಾಗೂ ಶೋಭಾಯಾತ್ರೆ ನಡೆಯಲಿದ್ದು, ವಿವಿಧ ಸಾಂಸ್ಕೃತಿಕ ಕಲಾ ತಂಡಗಳೊಂದಿಗೆ ಕಲಾಭವನದಿಂದ ಸಹ್ಯಾದ್ರಿ ಸರ್ಕಲ್-  ಬಸವೇಶ್ವರ ಕಲ್ಯಾಣ ಮಂಟಪ- ಪೆನ್‌ಷನ್ ಮೊಹಲ್ಲಾ- ಬಿಎಂ ರಸ್ತೆ- ಸುಭಾಷ್ ಚೌಕ ಮಾರ್ಗವಾಗಿ ಮೆರವಣಿಗೆ ನಡೆಯಲಿದೆ. ನಂತರ ನಗರದ ದೇವಿಗೆರೆಯಲ್ಲಿ ಗಣಪತಿ ವಿಸರ್ಜಿಸಲಾಗುವುದು ಎಂದರು.

ಸಮಿತಿಯ ಅಧ್ಯಕ್ಷ ವಾಸು, ರವಿ ಸೋಮು, ಖಜಾಂಚಿ ಲಾವಣ್ಯ, ನಿರ್ದೇಶಕ ಶರತ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT