ಬೇಲೂರು: ಸ್ವಾತಂತ್ರ್ಯ ದಿನಾಚರಣೆಯಂದು ಇಲ್ಲಿನ ಅಂಚೆ ಕಚೇರಿಯಲ್ಲಿ ನೌಕರರು, ಬಾಡೂಟ ತಯಾರಿಸಿ, ಮದ್ಯಪಾನ ಮಾಡಿ, ನೃತ್ಯ ಮಾಡಿದ್ದಾರೆ ಎನ್ನಲಾದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಅಂಚೆ ಇಲಾಖೆ ಅಧಿಕಾರಿಗಳು ಇದನ್ನು ನಿರಾಕರಿಸಿದ್ದಾರೆ.

‘ವಿಡಿಯೊದಲ್ಲಿ ಕಚೇರಿಯಲ್ಲಿ ಅಡುಗೆ ಮಾಡುವುದು ಮತ್ತು ನೃತ್ಯ ಮಾಡುವ ದೃಶ್ಯಗಳಿದ್ದು, ಮಾಂಸಾಹಾರ, ಮದ್ಯಪಾನ ಮಾಡಿರುವ ಬಗ್ಗೆ ಯಾವುದೇ ದೃಶ್ಯಗಳು ಕಾಣುತ್ತಿಲ್ಲ. ಸಸ್ಯಾಹಾರವಾಗಲಿ ಅಥವಾ ಮಾಂಸಾಹಾರವಾಗಲಿ ಕಚೇರಿಯಲ್ಲಿ ಅಡುಗೆ ತಯಾರಿಸುವುದು ಸರಿಯಲ್ಲ. ಕಚೇರಿಯಲ್ಲಿ ಸಾರ್ವಜನಿಕರಿಗೆ ಸಂಬಂಧಿಸಿದ ದಾಖಲೆಗಳಿರುತ್ತವೆ. ಅವು ನಾಶವಾದರೆ ಯಾರು ಹೊಣೆ? ಸರ್ಕಾರಿ ಕಚೇರಿಗಳಲ್ಲಿ ಈ ರೀತಿಯಾಗಿ ನೃತ್ಯ ಮಾಡಬಹುದೇ’ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ಪೋಸ್ಟ್ ಮಾಸ್ಟರ್ ಮೋಹನ್, ‘ಕಚೇರಿ ಸಿಬ್ಬಂದಿಯಿಂದ ಕರ್ತವ್ಯ ಲೋಪ ಆಗಿಲ್ಲ. ಕುಡಿದು, ಮಾಂಸಾಹಾರ ಸೇವಿಸಿ, ನೃತ್ಯ ಮಾಡಿದ್ದಾರೆ ಎಂದು ಕೆಲವರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡು ಬರಲಾಗುತ್ತಿದೆ’ ಎಂದು ತಿಳಿಸಿದರು.

‘ಸಾರ್ವಜನಿಕರ ಹಣ ದುರುಪಯೋಗ ಹಾಗೂ ಕಚೇರಿಯ ನಿಯಮ ಉಲ್ಲಂಘಿಸಿದ ಕೆಲವರನ್ನು ಅಂಚೆ ಇಲಾಖೆಯಿಂದ ಅಮಾನತು ಮಾಡಲಾಗಿದೆ. ಇದೇ ಕಾರಣ ಇಟ್ಟುಕೊಂಡು, ವಿಡಿಯೊ ಹಂಚುವ ಮೂಲಕ ಅಪಪ್ರಚಾರ ಮಾಡುತ್ತಿದ್ದಾರೆ. ಈ ರೀತಿ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ’ ಎಂದು ಸ್ಪಷ್ಟಪಡಿಸಿದರು.

‘ಭಾಷಣ, ಚರ್ಚಾ ಸ್ಪರ್ಧೆ, ಕ್ರೀಡಾಕೂಟ ಆಯೋಜಿಸಲಾಗುತ್ತಿದೆ. ಎರಡು ವರ್ಷಗಳಿಂದ ಎಲ್ಲರೂ ಸೇರಿ ಇಲ್ಲಿಯೇ ಉಪಾಹಾರ ಸಿದ್ಧಪಡಿಸುತ್ತಿದ್ದೇವೆ. ಈ ಬಾರಿಯೂ ಕಚೇರಿಯ ಹಿಂಭಾಗದಲ್ಲಿ ಫುಲಾವ್ ಮಾಡಿದ್ದೇವೆ. ಅಂದು ಯಾವುದೇ ಡಿಜೆ ಉಪಯೋಗಿಸಿಲ್ಲ. ಕೇವಲ ಮೈಕ್ ಹಾಕಿ, ದೇಶಭಕ್ತಿ ಗೀತೆಗಳ ಸ್ಪರ್ಧೆ ಏರ್ಪಡಿಸಿದ್ದು, ಇದರ ಸಂಪೂರ್ಣ ಸಿಸಿಟಿವಿ ಕ್ಯಾಮೆರಾದ ದೃಶ್ಯಾವಳಿಗಳನ್ನು ಮೇಲಧಿಕಾರಿಗಳಿಗೆ ನೀಡಿದ್ದೇವೆ’ ಎಂದರು.

‘ಈ ಬಗ್ಗೆ ಸೋಮವಾರ ತನಿಖೆ ನಡೆಸಲಾಗಿದ್ದು, ಕಚೇರಿಯ ಹಿಂಭಾಗದ ಕಟ್ಟಡದ ಡೈನಿಂಗ್ ಹಾಲ್ನಲ್ಲಿ ಅಡುಗೆ ಮಾಡಿ, ಸ್ವಾತಂತ್ರ್ಯ ದಿನಾಚರಣೆಯ ಖುಷಿಗೆ ನೃತ್ಯ ಮಾಡಲಾಗಿದೆ. ನೌಕರರಿಂದ ಯಾವುದೇ ತಪ್ಪು ನಡೆದಿಲ್ಲ. ಕಚೇರಿಯಲ್ಲಿದ್ದ ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಲಾಗಿದೆ. ಕೆಲ ಕಿಡಿಗೇಡಿಗಳು ಇಲಾಖೆಯ ಹೆಸರು ಹಾಳು ಮಾಡಲು ಈ ರೀತಿ ಮಾಡಿದ್ದು, ಈ ಬಗ್ಗೆ ಪೊಲೀಸರಿಗೆ ದೂರುನೀಡಲಾಗುವುದು’ ಎಂದು ಅಂಚೆ ಇಲಾಖೆ ಮುಖ್ಯ ಅಧೀಕ್ಷಕ ಜೋಸೆಫ್ ರಾಡ್ರಿಗಸ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.