ಗುರುವಾರ , ಆಗಸ್ಟ್ 18, 2022
25 °C

ಹುಚ್ಚು ನಾಯಿಗೆ ಹೊಡೆದಂತೆ ಹೊಡೆಯುತ್ತಾರೆ: ಕೆ.ಎನ್.ರಾಜಣ್ಣಗೆ ಪ್ರಜ್ವಲ್ ಎಚ್ಚರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: ದೇವೇಗೌಡರ ಕಾಲಿನ ದೂಳಿಗೂ ಸಮನಲ್ಲದ ಕೆ.ಎನ್.‌ರಾಜಣ್ಣ‌ ಇದೇ ರೀತಿ‌ ಹುಚ್ಚಾಟದ ಹೇಳಿಕೆ ನೀಡಿದರೆ, ಜನರು ಹುಚ್ಚು ನಾಯಿಗೆ ಹೊಡೆದಂತೆ ಹೊಡೆಯುತ್ತಾರೆ ಎಂದು ಸಂಸದ ಪ್ರಜ್ವಲ್‌ ರೇವಣ್ಣ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂತಹ ಹುಚ್ಚಾಟಕ್ಕೆ ಜನ ಅವರನ್ನು ಮನೆಯಲ್ಲಿ ಕೂಡ್ರಿಸಿದ್ದಾರೆ. ಅವನೊಬ್ಬ ದೊಡ್ಡ ಕಳ್ಳ ಎನ್ನುವುದು ಜನರಿಗೆ ಗೊತ್ತಿದೆ ಎಂದರು.

ರಾಜಕೀಯದಲ್ಲಿ ಇರುವವರಿಗೆ ಒಂದು ಮಿತಿ‌ಇದೆ. ಸಾರ್ವಜನಿಕ‌ ಜೀವನದಲ್ಲಿ ಇರುವುದಕ್ಕೆ ರಾಜಣ್ಣ ನಾಲಾಯಕ್. ಅಂಥವರ ಹೇಳಿಕೆಗೆ ಪ್ರತಿಕ್ರಿಯೆ ನೀಡುವ ಅಗತ್ಯವಿಲ್ಲ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು