ಶನಿವಾರ, ಡಿಸೆಂಬರ್ 4, 2021
20 °C

ಪಿಡಿಒ ಮೇಲೆ ಮಚ್ಚಿನಿಂದ ಹಲ್ಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಆಲೂರು: ಕರ್ತವ್ಯ ನಿರತ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮೇಲೆ ವ್ಯಕ್ತಿಯೊಬ್ಬ ಮಚ್ಚಿನಿಂದ ಹಲ್ಲೆ ಮಾಡಿರುವ ಘಟನೆ ಪಾಳ್ಯ ಹೋಬಳಿ ಮಡಬಲು ಗ್ರಾಮದಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ.

ಪಿಡಿಒ ಮಹಮದ್ ಅವರ ಮೇಲೆ, ಅದೇ ಗ್ರಾಮದ ಪುಟ್ಟರಾಜು ಹಲ್ಲೆ ಮಾಡಿದ್ದು ಪಟ್ಟಣ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅಪಾಯದಿಂದ ಪಾರಾಗಿದ್ದಾರೆ.

‘ಸೋಮವಾರ ಕಚೇರಿಗೆ ಬಂದ ಪುಟ್ಟರಾಜು ನನಗೆ ಮೆಣಸು ಬೆಳೆಯಲು ಬಳ್ಳಿ ಏಕೆ ಕೊಡಲಿಲ್ಲ ಎಂದು ಪ್ರಶ್ನಿಸಿದರು. ಈ ಬಾರಿ ಯೋಜನೆಯಲ್ಲಿ ತಮ್ಮ ಹೆಸರು ಸೇರಿಲ್ಲ. ಮುಂದಿನ ಬಾರಿ ಕೊಡುವುದಾಗಿ ತಿಳಿಸಿದೆನು. ಅದಕ್ಕೆ ನಾಳೆ ಬಂದು ನೋಡಿಕೊಳ್ಳುತ್ತೇನೆ ಎಂದು ಹೇಳಿ ಹೋದನು. ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿಗೆ ಈ ವಿಷಯ ತಿಳಿಸಿದಾಗ ಪೊಲೀಸರಿಗೆ ದೂರು ಕೊಡಲು ತಿಳಿಸಿದರು. ನಾನು ದೂರು ನೀಡಿದೆ. ಮಂಗಳವಾರ ನಾನು ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾಗ ಬಂದು ನನ್ನ ಮೇಲೆ ಪೊಲೀಸ್ ದೂರು ಕೊಡುತ್ತೀಯಾ ಎಂದು ಏಕಾಏಕಿ ಮಚ್ಚು ಬೀಸಿದನು. ಆಗ ತಕ್ಷಣ ನಾನು ಬಗ್ಗಿದಾಗ ಎಡ ಭುಜಕ್ಕೆ ಬಲವಾದ ಪೆಟ್ಟು ಬಿತ್ತು. ಎರಡು ಕಂಪ್ಯೂಟರ್‌ಗಳು ಪುಡಿಯಾಗಿವೆ’ ಎಂದು ಮಹಮದ್‌ ವಿವರಿಸಿದರು.

ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ನಯನ, ಪಿಡಿಒ ಸಂಘದ ಅಧ್ಯಕ್ಷ ರಂಗಸ್ವಾಮಿ ಘಟನೆಯನ್ನು ಖಂಡಿಸಿ ತಪ್ಪಿತಸ್ಥರನ್ನು ಬಂಧಿಸಿ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು