ಹಾಸನ: ಆಲೂಗಡ್ಡೆ ಬಿತ್ತನೆ ಶುರುವಾಗಿದ್ದು, ಎಪಿಎಂಸಿಯಲ್ಲಿ ಬಿತ್ತನೆ ಆಲೂಗಡ್ಡೆ ಮಾರಾಟವೂ ಶುರುವಾಗಿದೆ. ಆಲೂಗಡ್ಡೆ ಬಿತ್ತನೆಗೂ ಮುನ್ನ ಪೂರ್ವ ತಯಾರಿ ಮಾಡಿಕೊಳ್ಳಬೇಕು. ಅಧಿಕ ಮಳೆಯಾದ ಸಂದರ್ಭದಲ್ಲಿ ರೈತರು ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತೋಟಗಾರಿಕೆ ಇಲಾಖೆ ತಿಳಿಸಿದೆ.

ತಾಲ್ಲೂಕಿನಾದ್ಯಂತ ಹಲವೆಡೆ ಉತ್ತಮ ಮಳೆ ಪ್ರಾರಂಭವಾಗಿದ್ದು, ರೈತರು ಮುಂಗಾರು ಬೇಸಾಯ ಚಟುವಟಿಕೆಗಳನ್ನು ಪ್ರಾರಂಭಿಸುತ್ತಿದ್ದಾರೆ. ಪ್ರಸಕ್ತ ಮುಂಗಾರಿನ ಬಿತ್ತನೆಗಾಗಿ ಆಲೂಗಡ್ಡೆಯನ್ನು ರೈತರು ಎಪಿಎಂಸಿ ಹಾಗೂ ಶೈತ್ಯಾಗಾರಗಳಿಂದ ಖರೀದಿಸುತ್ತಿದ್ದಾರೆ.

ಈಗಾಗಲೇ ಬಿತ್ತನೆಗಾಗಿ ಗಡ್ಡೆಗಳನ್ನು ಖರೀದಿಸಿರುವ ರೈತರು, ಗಡ್ಡೆಗಳನ್ನು ತಕ್ಷಣ ಬಿತ್ತನೆ ಮಾಡಿದರೆ, ಮೊಳಕೆ ಒಡೆಯುವುದಿಲ್ಲ. ಹೆಚ್ಚಿನ ಮಳೆಯಾದ ಸಂದರ್ಭದಲ್ಲಿ ಗಡ್ಡೆಗಳು ಕೊಳೆಯುವ ಸಾಧ್ಯತೆಗಳಿರುತ್ತದೆ. ಗಡ್ಡೆಗಳನ್ನು ಖರೀದಿಸಿದ ನಂತರ ಕನಿಷ್ಠ 10-15 ದಿನಗಳವರೆಗೆ ನೆರಳಿನಲ್ಲಿ ಗಾಳಿ ಆಡುವಂಥ ಸ್ಥಳದಲ್ಲಿ ಹರಡಿ ಹದಗೊಳಿಸಬೇಕು.

10ರಿಂದ 15ದಿನಗಳ ನಂತರ, ಬಿತ್ತನೆಗೆ ಒಂದು ದಿನ ಮುಂಚಿತವಾಗಿ, ದೊಡ್ಡ ಗಡ್ಡೆಗಳನ್ನು ಕಣ್ಣುಗಳ ಆಧಾರದ ಮೇಲೆ ಕತ್ತರಿಸಿ ಅಥವಾ ಚಿಕ್ಕ ಗಡ್ಡೆಗಳನ್ನು (ಸಂಪೂರ್ಣವಾಗಿ) ದುಂಡಾಣು ಹಾಗೂ ಶಿಲೀಂಧ್ರ ನಾಶಕಗಳ ಮಿಶ್ರಣದ ದ್ರಾವಣದಲ್ಲಿ (ಮ್ಯಾಂಕೋಜೆಬ್ 4 ಗ್ರಾಂ+ ಸ್ಟ್ರೆಪ್ಟೋಮೈಸಿನ್ ಸಲ್ಫೇಟ್ 0.5 ಗ್ರಾಂ ಪ್ರತಿ ಲೀಟರ್ ನೀರಿನ ದ್ರಾವಣ) 10ರಿಂದ 15 ನಿಮಿಷ ನೆನೆಸಿ ಬೀಜೋಪಚಾರ ಮಾಡಬೇಕು. ನಂತರ 24 ಗಂಟೆಗಳ ಕಾಲ ನೆರಳಿನಲ್ಲಿ ಒಣಗಿಸಿ, ಬಿತ್ತನೆಗೆ ಉಪಯೋಗಿಸಬೇಕು.

ಉತ್ತಮ ಮಳೆಯಾಗದೇ ಬಿತ್ತನೆ ಮಾಡಿದರೆ, ಭೂಮಿಯಲ್ಲಿನ ತಾಪಮಾನ ಹೆಚ್ಚಾಗಿ ಗಡ್ಡೆಗಳು ಕೊಳೆಯುವ ಹಾಗೂ ಮೊಳಕೆ ಬಾರದಿರುವ ಸಾಧ್ಯತೆಗಳಿರುತ್ತವೆ. ಕನಿಷ್ಠ 3 ರಿಂದ 4 ಹದವಾದ ಮಳೆಯಾಗಿ, ಭೂಮಿಯ ತಾಪಮಾನ ಕಡಮೆಯಾದ ನಂತರವೇ ಆಲೂಗಡ್ಡೆ ಬಿತ್ತನೆ ಮಾಡಬೇಕು.

ಆಲೂಗಡ್ಡೆ ಬಿತ್ತನೆ ಮಾಡಿರುವ ತಾಕುಗಳಲ್ಲಿ ಹೆಚ್ಚಿನ ಮಳೆಯಿಂದ ನೀರು ನಿಂತರೆ, ಗಡ್ಡೆಗಳು ಕೊಳೆಯಲು ಪ್ರಾರಂಭಿಸುತ್ತವೆ. ಆಲೂಗಡ್ಡೆ ಬಿತ್ತನೆಯಾಗಿರುವ ಜಮೀನುಗಳಲ್ಲಿ ಹೆಚ್ಚುವರಿ ಮಳೆ ನೀರು ಬಸಿದು ಹೋಗುವಂತೆ ಬಸಿಗಾಲುವೆ ವ್ಯವಸ್ಥೆ ಕಲ್ಪಿಸಬೇಕು. ನೀರಾವರಿ ವ್ಯವಸ್ಥೆ ಇರುವ ರೈತರು ಏರು ಮಡಿ ಮಾದರಿಯಲ್ಲಿ (ಶುಂಠಿ ಬೇಸಾಯ ಮಾದರಿ) ಬೇಸಾಯ ಮಾಡುವುದು ಸೂಕ್ತ.

ಅಧಿಕ ಮಳೆಯಿಂದ ಆಲೂಗಡ್ಡೆ ಹಾಗೂ ಇತರೆ ತೋಟಗಾರಿಕೆ ಬೆಳೆಗಳು ಹಾನಿಯಾದಲ್ಲಿ ಸಂಬಂಧಿಸಿದ ಹೋಬಳಿಯ ಸಹಾಯಕ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಲು ಜಿಲ್ಲಾ ಪಂಚಾಯತ್ನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.