ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೇಮಾವತಿ ಅಕ್ರಮ: ಅನರ್ಹರ ಪಟ್ಟಿ ಸಿದ್ಧಪಡಿಸಿ- ಮೊಹಮ್ಮದ್ ಮೊಹಿಸಿನ್ ಸೂಚನೆ

ಅಧಿಕಾರಿಗಳ ಸಭೆ ನಡೆಸಿದ ಮೊಹಮ್ಮದ್‌ ಮೊಹಿಸಿನ್
Last Updated 5 ಜನವರಿ 2022, 15:46 IST
ಅಕ್ಷರ ಗಾತ್ರ

ಹಾಸನ: ಹೇಮಾವತಿ, ಯಗಚಿ, ವಾಟೆಹೊಳೆ ಜಲಾಶಯ ಯೋಜನೆಗಳ ಭೂ ಸಂತ್ರಸ್ತರಿಗೆ ಮೀಸಲಿಟ್ಟ ಸರ್ಕಾರಿ ಜಮೀನುಗಳನ್ನು ನಕಲಿ ದಾಖಲೆಗಳನ್ನು ಸೃಷ್ಟಿಸಿ ಭೂಮಿ ಪಡೆದುಕೊಂಡಿರುವ ಅನರ್ಹರ ಪಟ್ಟಿ ಸಿದ್ಧಪಡಿಸಿ, ವರದಿ ಸಲ್ಲಿಸುವಂತೆ ಎಚ್‌ಆರ್‌ಪಿ ಹಗರಣದ ತನಿಖಾ ದಳದ ಮುಖ್ಯಸ್ಥ ಹಾಗೂ ಪುನರ್ ವಸತಿ ಮತ್ತು ಪುನರ್ ನಿರ್ಮಾಣ ಆಯುಕ್ತ ಮೊಹಮ್ಮದ್ ಮೊಹಿಸಿನ್ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಹೇಮಾವತಿ/ಯಗಚಿ/ವಾಟೆಹೊಳೆ ಜಲಾಶಯಗಳ ಭೂ ಪರಿಹಾರ ಅಕ್ರಮಗಳ ವಿರುದ್ಧ ಕ್ರಮ ಜರುಗಿಸುವ ಬಗ್ಗೆ ಸಭೆ ನಡೆಸಿ, ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿ ಸಿದರು.

ಭೂಮಿ ಕಳೆದುಕೊಂಡವರು, ಭೂಮಿ ಪಡೆದವರ ನಿಖರ ಪಟ್ಟಿ ಹಾಗೂ ಫಲಾನುಭವಿಗಳವಂಶ ವೃಕ್ಷ ಪರಿಶೀಲಿಸಬೇಕು. ಭೂ ಸಂತ್ರಸ್ತದ ಲ್ಲವರಿಗೆ ಭೂ ಮಂಜೂರಾತಿ ಮಾಡಿರುವುದು ಹಾಗೂ ಎರಡು ಬಾರಿ ಮಂಜೂರಾತಿ ಪಡೆದವರ ಪಟ್ಟಿ ಸಿದ್ದಪಡಿಸಿ, ವರದಿ ಸಲ್ಲಿಸುವಂತೆ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದರು.

ಮುಳುಗಡೆ ಮಂಜೂರಾತಿ ಪ್ರಮಾಣ ಪತ್ರ ಸೇರಿದಂತೆ ಮೂಲ ದಾಖಲೆಗಳನ್ನು ಪರಿಶೀಲಿಸಬೇಕು. ಅನಧಿಕೃತ ಹಾಗೂ ನಕಲಿ ಮಂಜೂರಾತಿಗಳನ್ನು ಗುರುತಿ ಸಬೇಕು. ಯೋಜನಾ ನಿರಾಶ್ರಿತರಿಗೆ ಕಾಯ್ದಿರಿಸಿರುವ ಜಾಗದಲ್ಲಿ ನೀಡಿರುವ ಭೂಮಿಹಾಗೂ ಅರಣ್ಯ ಭೂಮಿ ಮಂಜೂರಾತಿ ಆಗಿರುವ ಬಗ್ಗೆಯೂ ಮಾಹಿತಿ ನೀಡುವಂತೆ ತಿಳಿಸಿದರು.

ಜಿಲ್ಲಾಧಿಕಾರಿ ಆರ್. ಗಿರೀಶ್ ಮಾತನಾಡಿ, 2005 ರಿಂದ ಈ ವರೆಗೂ ಆಗಿರುವ ಭೂಮಂಜೂರಾತಿಗಳ ಬಗ್ಗೆ ಪಟ್ಟಿ ಮಾಡಲಾಗಿದೆ. ಅವುಗಳಲ್ಲಿ ಮಂಜೂರಾತಿ ಪತ್ರ,ವಂಶವೃಕ್ಷದ ಬಗ್ಗೆ ದಾಖಲೆಗಳನ್ನು ಒದಗಿಸುವಂತೆ ಫಲಾನುಭವಿಗಳಿಗೆ ಸೂಚಿಸಲಾಗಿತ್ತು.ಈವರೆಗೂ ಹಲವರು ದಾಖಲೆ ಒದಗಿಸಿಲ್ಲ. ತಹಶೀಲ್ದಾರ ಮೂಲಕವೇ ಈ ಬಗ್ಗೆ ವರದಿಪಡೆಯಲಾಗುವುದು ಎಂದರು.

ಸಭೆಯಲ್ಲಿ ಬೆಂಗಳೂರು ವಿಭಾಗದ ಹೆಚ್ಚುವರಿ ಪ್ರಾದೇಶಿಕ ಆಯುಕ್ತ ಇಸ್ಲಾವುದ್ದೀನ್ ಜೆ.ಗದ್ಯಾಳ್, ಹೆಚ್ಚುವರಿ ಜಿಲ್ಲಾಧಿಕಾರಿ ಕವಿತಾ ರಾಜಾರಾಂ, ಉಪ ಅರಣ್ಯ ಸಂರಕ್ಷ್ಣಣಾಧಿಕಾರಿಡಾ.ಬಸವರಾಜ್ , ಚಿಕ್ಕಮಂಗಳೂರು ಹೆಚ್ಚುವರಿ ಜಿಲ್ಲಾಧಿಕಾರಿ ರೂಪಾ, ಸಕಲೇಶಪುರಉಪ ವಿಭಾಗಾಧಿಕಾರಿ ಪ್ರತಿಕ್ ಬಯಾಲ್, ಹೇಮಾವತಿ ಜಲಾಶಯ ಯೋಜನೆಯವಿಶೇಷ ಭೂ ಸ್ವಾಧೀನಾಧಿಕಾರಿ ಮಂಜುನಾಥ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT