ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಲೂರಿನ ಐತಿಹಾಸಿಕ ಕಲ್ಲುಸೇತುವೆ ಸಂರಕ್ಷಿಸಿ

Last Updated 30 ಜೂನ್ 2020, 9:31 IST
ಅಕ್ಷರ ಗಾತ್ರ

ಬೇಲೂರು: ವಿಶ್ವ ಪ್ರಸಿದ್ದ ಬೇಲೂರಿನಲ್ಲಿ ಬ್ರಿಟೀಷರ ಕಾಲದ ಕಲ್ಲು ಜೋಡಣೆಯ ಸೇತುವೆಯನ್ನು, ಪಟ್ಟಣದೊಳಗೆ ಹಾದು ಹೋಗಿರುವ ಯಗಚಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ. ಇಂತಹ ಅತ್ಯುತ್ತಮ ಹಾಗೂ ಪ್ರಸಿದ್ಧವಾದಸೇತುವೆ ಇಂದು ಅಧಿಕಾರಿಗಳ ಹಾಗೂ ಆಡಳಿತ ನಡೆಸುವವರ ಅವಕೃಪೆಗೆ ಒಳಗಾಗಿ ಅವನತಿಯತ್ತ ಸಾಗಿದೆ.

ಮೈಸೂರಿನ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವಧಿಯಲ್ಲಿ ನಿರ್ಮಾಣಗೊಂಡ ಸೇತುವೆ ಇದಾಗಿದ್ದು, ಇಂದು ಅಪಾಯದ ಅಂಚಿನಲ್ಲಿದೆ. ಸೇತುವೆಯ ತಡೆಗೋಡೆಯ ಕಲ್ಲುಗಳು ಉದುರುತ್ತಿವೆ. ತಳಪಾಯದ ಕೆಲ ಕಲ್ಲುಗಳು ಜಾರಿ ಬಿದ್ದಿದೆ. ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಬರುವ ಈ ಸೇತುವೆಯ ಮೇಲೆ ಗಿಡಗಂಟಿಗಳು ಬೆಳೆದು ಬೇರುಗಳು ಕಲ್ಲಿನೊಳಗೆ ಸೇರಿಕೊಂಡು ಸೇತುವೆಯಲ್ಲಿನ ಕಲ್ಲುಗಳನ್ನು ಅಲುಗಾಡುತ್ತಿವೆ. ಆದರೂ ಗಿಡಗಮಟಿ ತೆರವಿಗೆ ಸಂಬಂಧಿಸಿದಇಲಾಖೆ ಅಧಿಕಾರಿಗಳು ಮುಂದಾಗಿಲ್ಲ.

ವರ್ಷದ ಹಿಂದೆ ಈ ಸೇತುವೆ ಮೇಲಿನ ರಸ್ತೆ ತುಂಬಾ ಗುಂಡಿ ಬಿದ್ದಿತ್ತು. ಆದರೆ, ತಾಲ್ಲೂಕಿನ ವಿವಿಧ ಕನ್ನಡ ಪರ ಸಂಘಟನೆಗಳ ಹೋರಾಟದ ಫಲವಾಗಿ ಗುಂಡಿಗಳನ್ನು ಡಾಂಬರು ಹಾಕಿ ಮುಚ್ಚಲಾಯಿತು. ಬಿಟ್ಟರೆ ಉಳಿದ ಯಾವುದೇ ಕೆಲಸ ಮಾಡಿಲ್ಲ. ಡಾಂಬರು ಹಾಕಿದ ಮೇಲೆ ಭಾರಿ ವಾಹನಗಳು ಸೇತುವೆ ಮೇಲೆ ಸಂಚರಿಸುತ್ತಿದ್ದು, ತಳಪಾಯದ ಹಾಗೂ ತಡೆಗೋಡೆಯ ಕಲ್ಲುಗಳ ಉದುರುವಿಕೆ ಶುರುವಾಗಿದೆ. ಈಗಲಾದರೂ ಎಚ್ಚರವಹಿಸದಿದ್ದರೆ ಅಪಾಯ ತಪ್ಪಿದ್ದಲ್ಲ. ಇದರಿಂದ ಯಗಚಿ ಸೇತುವೆ ಅಪಾಯದ ಅಂಚಿನಲ್ಲಿದ್ದು, ಈ ಯಗಚಿ ಸೇತುವೆಯನ್ನು ಉಳಿಸಲು ಸಂಬಂಧಿಸಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಗಮನಹರಿಸಬೇಕು ಎಂದು ಸಾರ್ವಜನಿಕು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT