ಹಾಸನ: ‘ಸಂಪುಟ ಪುನರ್‌ರಚನೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ, ಬಡ್ತಿ ಎಲ್ಲವನ್ನೂ ಕಾಂಗ್ರೆಸ್ ಹೈಕಮಾಂಡ್ ತೀರ್ಮಾನ ಮಾಡುತ್ತದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ತಿಳಿಸಿದರು.
‘ಮುಂಬಡ್ತಿ ಸಿಗುತ್ತದೆ’ ಎಂಬ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿಕೆಗೆ ಗುರುವಾರ ಇಲ್ಲಿ ಪ್ರತಿಕ್ರಿಯೆ ನೀಡಿದ ಅವರು ‘ರಾಹುಲ್ ಗಾಂಧಿಯವರು ಅವರಿಗೆ ಬಡ್ತಿ ಕೊಡುತ್ತೇವೆ ಎಂದರೆ ನಾವು ತಪ್ಪಿಸಲು ಆಗುತ್ತದೆಯೇ? ಅದರ ಬಗ್ಗೆ ಅವರನ್ನೇ ಕೇಳಿ’ ಎಂದರು.
ನಟ ದರ್ಶನ್‌ಗೆ ಜೈಲಿನಲ್ಲಿ ಆತಿಥ್ಯದ ಬಗ್ಗೆ ಕೇಳಿದ್ದಕ್ಕೆ ಸಿಟ್ಟಾದ ಸಚಿವರು ‘ದೇಶದಲ್ಲಿ ದರ್ಶನ್ ಮಾತ್ರವೇ ಇರೋದಾ? ದಿನವಿಡೀ ಟಿವಿಯಲ್ಲಿ ಅದನ್ನೇ ತೋರಿಸುತ್ತೀರಿ. ಅದಕ್ಕಿಂತ ಒಳ್ಳೆಯದನ್ನು ತೋರಿಸಿ. ಅವನೇನು ಸಮಾಜಕ್ಕೆ ರೋಲ್ ಮಾಡೆಲ್ಲಾ?’ ಎಂದು ಪ್ರಶ್ನಿಸಿದರು.