ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ: ಹಿಂದಿ ಹೇರಿಕೆ ವಿರೋಧಿಸಿ ಕರವೇ ಪ್ರತಿಭಟನೆ

ಬ್ಯಾಂಕ್‌ ಆಫ್‌ ಬರೋಡಾ ಮ್ಯಾನೇಜರ್‌ಗೆ ಕರವೇ ಮನವಿ
Last Updated 14 ಸೆಪ್ಟೆಂಬರ್ 2021, 13:23 IST
ಅಕ್ಷರ ಗಾತ್ರ

ಹಾಸನ: ಕರ್ನಾಟಕದಮೇಲೆ ಕೇಂದ್ರ ಸರ್ಕಾರ ಹಿಂದಿ ಭಾಷೆ ಹೇರಿಕೆ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ (ಟಿ.ಎ.ನಾರಾಯಣಗೌಡ ಬಣ) ವತಿಯಿಂದ ಮಂಗಳವಾರ ನಗರದ ಎಂ.ಜಿ. ರಸ್ತೆಯಲ್ಲಿರುವ ಬ್ಯಾಂಕ್‌ ಆಫ್‌ಬರೋಡಾ ಎದುರು ಪ್ರತಿಭಟನೆ ನಡೆಸಲಾಯಿತು.

ಬ್ಯಾಂಕ್‌ಗಳಲ್ಲಿ ಹಿಂದಿ ಬಳಕೆ ನಿಲ್ಲಿಸಿ, ಕನ್ನಡ ಭಾಷೆ ಬಳಕೆಗೆ ತರಬೇಕು ಎಂದು ಒತ್ತಾಯಿಸಿ ವೇದಿಕೆಕಾರ್ಯಕರ್ತರು ಘೋಷಣೆಗಳನ್ನು ಕೂಗಿದರು.

ಪ್ರತಿ ವರ್ಷ ಸೆ. 14 ಹಿಂದಿ ದಿವಸ್‌ ಆಚರಣೆ ಮಾಡಲಾಗುತ್ತಿದೆ. ದೇಶದ ಎಲ್ಲಾ ಭಾಷೆ ಕಡೆಗಣಿಸಿ, ಹಿಂದಿಗೆಪ್ರಾಮುಖ್ಯತೆ ಕೊಡಲಾಗುತ್ತಿದೆ. ರಾಜ್ಯದಲ್ಲಿ ಬಹುತೇಕ ಬ್ಯಾಂಕ್‌ಗಳಲ್ಲಿ ಕನ್ನಡದಲ್ಲಿ ಸೇವೆನೀಡದಿರುವುದು, ಹಿಂದಿ ಭಾಷೆಯಲ್ಲಿ ವ್ಯವಹರಿಸಲು ಗ್ರಾಹಕರನ್ನು ಒತ್ತಾಯಿಸಿದ ಅನೇಕ ಪ್ರಕರಣಗಳುಇತ್ತೀಚೆಗೆ ನಡೆದಿವೆ ಎಂದು ಆರೋಪಿಸಿದರು.

ಬ್ಯಾಂಕಿನ ಎಲ್ಲ ಸೇವೆಗಳನ್ನು ಕನ್ನಡದಲ್ಲೇ ನೀಡಬೇಕು. ಬ್ಯಾಂಕ್‌ ವ್ಯವಹಾರ ನಡೆಸಲು ಸುಲಭವಾಗುವಂತೆ ಕನ್ನಡಿಗರನ್ನು ಹೆಚ್ಚು ನೇಮಕ ಮಾಡಿಕೊಳ್ಳಬೇಕು. ಕನ್ನಡ ಬಾರದ ಸಿಬ್ಬಂದಿಯನ್ನು ಅವರ ಮಾತೃಭಾಷೆಗಳ ರಾಜ್ಯಕ್ಕೆ ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದರು.

ಬ್ಯಾಂಕ್‌ಗಳಲ್ಲಿ ಚಲನ್‌, ಖಾತೆ ಪುಸ್ತಕ, ಚೆಕ್‌ ಮತ್ತು ಎಲ್ಲಾ ಅರ್ಜಿಗಳು ಕನ್ನಡದಲ್ಲೇ ಲಭ್ಯವಿರುವಂತೆನೋಡಿಕೊಳ್ಳಬೇಕು. ಹಿಂದಿ ದಿವಸ್‌, ಹಿಂದಿ ಸಪ್ತಾಹ ಇತ್ಯಾದಿ ಭಾಷಾ ಒಕ್ಕೂಟ ವಿರೋಧಿ ಆಚರಣೆಗಳನ್ನು ಕೂಡಲೇ ನಿಲ್ಲಿಸಬೇಕು. ಬ್ಯಾಂಕ್‌ ನಾಮಫಲಕ, ಸೂಚನಾ ಫಲಕಗಳಲ್ಲಿ ಶೇಕಡಾ 60 ರಷ್ಟು ಕನ್ನಡ ಭಾಷೆಯನ್ನೇ ಬಳಸಬೇಕು ಎಂದು ಆಗ್ರಹಿಸಿ ಬ್ಯಾಂಕ್‌ ಆಫ್‌ ಬರೋಡ ಬ್ಯಾಂಕ್‌ನ ಮ್ಯಾನೇಜರ್‌ಗೆ ಮನವಿ ಸಲ್ಲಿಸಲಾಯಿತು.

ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಟಿ. ಮನುಕುಮಾರ್‌, ಉಪಾಧ್ಯಕ್ಷ ಸೀತಾರಾಮು, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ರೇಖಾ ಮಂಜುನಾಥ್‌, ಯುವ ಘಟಕದ ಜಿಲ್ಲಾಧ್ಯಕ್ಷ ಪ್ರೀತಂ ರಾಜ್‌, ಹಾಸನ ತಾಲ್ಲೂಕು ಘಟಕದ ಅಧ್ಯಕ್ಷ ಶಿವಣ್ಣಗೌಡ, ತಾಲ್ಲೂಕು ಉಪಾಧ್ಯಕ್ಷ ತೌಫಿಕ್‌, ವಿದ್ಯಾರ್ಥಿ ಘಟಕದ ಅಭಿಷೇಕ್‌, ದೇವಿಕಾ ಮಧು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT