ಮಂಗಳವಾರ, ಸೆಪ್ಟೆಂಬರ್ 21, 2021
22 °C
ಅವಧಿಗೂ ಮುನ್ನವೇ ಆರೈಕೆ ಕೇಂದ್ರದ ಸಿಬ್ಬಂದಿ ಬಿಡುಗಡೆ; ಆರೋಪ

ಎರಡು ತಿಂಗಳು ಕೆಲಸ ನೀಡಲು ಆಗ್ರಹ: ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಯನ್ನು ಅವಧಿಗೂ ಮುನ್ನವೇ ಬಿಡುಗಡೆ ಮಾಡಿದ್ದು, ಎರಡು ತಿಂಗಳ ಅವಧಿಗೆ ಆರೋಗ್ಯ ಇಲಾಖೆಯೇ ಕೆಲಸ ನೀಡಬೇಕು ಎಂದು ಆಗ್ರಹಿಸಿ ಆಲೂರು ತಾಲ್ಲೂಕು ಕೋವಿಡ್ ಆರೈಕೆ ಕೇಂದ್ರದ ಸಿಬ್ಬಂದಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ಕೋವಿಡ್‌ ಎರಡನೇ ಅಲೆ ಸಂದರ್ಭದಲ್ಲಿ ಗೌರವ ಧನದ ಆಧಾರದ ಮೇಲೆ 6 ತಿಂಗಳ ಅವಧಿಗೆ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗಿತ್ತು. ನೇಮಕ ಮಾಡುವಾಗಲೇ ಒಂದೂವರೆ ತಿಂಗಳು ತಡವಾಗಿತ್ತು.  ಈಗ ಎರಡು ತಿಂಗಳು ಅವಧಿ ಬಾಕಿ ಇರುವಾಗಲೇ  ಎಲ್ಲರನ್ನೂ ಬಿಡುಗಡೆ ಮಾಡಲಾಗಿದೆ ಎಂದು ಸಿಬ್ಬಂದಿ ಆರೋಪಿಸಿದರು.

ಡಿ ಗ್ರೂಪ್‌ ನೌಕರ ಎಚ್‌.ಆರ್‌.ಪ್ರತಾಪ್‌ ಕುಮಾರ್‌ ಮಾತನಾಡಿ, ‘ಕೋವಿಡ್‌ ಕರ್ತವ್ಯಕ್ಕಾಗಿ ಬೇರೆ ಕೆಲಸಗಳನ್ನು ಬಿಟ್ಟು ಬರಲಾಗಿತ್ತು. ಆದರೆ, ಏಕಾಏಕಿ ಕೆಲಸದಿಂದ ತೆಗೆದಿರುವುದರಿಂದ ಶುಶ್ರೂಷಕರು, ಡಿ ಗ್ರೂಪ್‌ ನೌಕರರು, ಪ್ರಯೋಗಾಲಯ ತಂತ್ರಜ್ಞರು ಬೇರೆ ಕೆಲಸ ಇಲ್ಲದೆ ಕಂಗಾಲಾಗಿದ್ದಾರೆ’ ಎಂದು ಅಳಲು ತೋಡಿಕೊಂಡರು.

‘ಕೋವಿಡ್ ಸಂದರ್ಭದಲ್ಲಿ ಪ್ರಾಣದ ಹಂಗು ತೊರೆದು ಕರ್ತವ್ಯ ನಿರ್ವಹಿಸಿದ್ದೇವೆ. ಹಾಗಾಗಿ ಉಳಿದ ಎರಡು ತಿಂಗಳು ಇಲಾಖೆಯಿಂದ ಯಾವುದೇ ಕೆಲಸ ನೀಡಿದರೂ ಮಾಡಲು ಸಿದ್ಧ. ರಾಜ್ಯದಲ್ಲಿ ಕೋವಿಡ್‌ 3ನೇ ಅಲೆ ಬಗ್ಗೆ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಹಾಗಾಗಿ ಈ ಹಿಂದೆ ಕೋವಿಡ್‌ ಆರೈಕೆ ಕೇಂದ್ರದಲ್ಲಿ ಕರ್ತವ್ಯ ಸಿರ್ವಹಿಸಿದ್ದ ಸಿಬ್ಬಂದಿಗೆ ಮೊದಲ ಆದ್ಯತೆ ನೀಡಬೇಕು’ ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಆರ್‌.ಗಿರೀಶ್‌ ಅವರಿಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಕೋವಿಡ್‌ ಆರೈಕೆ ಕೇಂದ್ರದ ಶುಶ್ರೂಷಕಿಯರಾದ ಎಸ್‌.ಡಿ.ಕವಿತಾ, ಕೆ.ಸುಜಾತಾ, ಎನ್‌.ಡಿ.ದಾಕ್ಷಾಯಿಣಿ, ಎಂ.ಕೆ.ಮಮತ, ಅಬ್ದುಲ್‌ ಬಷೀರ್‌, ಸುನಿತಾ, ಬಾನುಮತಿ, ಪ್ರಯೋಗಾಲಯ ತಂತ್ರಜ್ಞರಾದ ಎಸ್‌.ಸಂತೋಷ್‌, ಗ್ರೂಪ್‌ ಡಿ ನೌಕರರಾದ ಕೆ.ಎಸ್‌.ಕೀರ್ತಿ, ಮಣಿ, ಬಿ.ಕೆ.ಅಶ್ವಥ್‌, ಶಶಿಧರ, ಕೆ.ಆರ್‌.ಯಶವಂತ್‌, ಭರತ್‌, ರತೀರ್ಶ, ಇರ್ಫಾನ್‌ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು