ಹಾಸನ: ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಸಂದಿರುವ ಹಿನ್ನೆಲೆಯಲ್ಲಿ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಅಂಗವಾಗಿ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರ ನಿವಾಸಕ್ಕೆ ಶುಕ್ರವಾರ ಜಿಲ್ಲಾಧಿಕಾರಿ ಆರ್.ಗಿರೀಶ್ ಭೇಟಿ ನೀಡಿ, ಗೌರವಿಸಿದರು.

ನಗರದ ಎಚ್.ಎಂ ಶಿವಣ್ಣ, ಜಿ.ಎಲ್.ಮುದ್ದೇಗೌಡ, ರಾಮಣ್ಣ ಅವರನ್ನು ಗೌರವಿಸಿ, ಸ್ವಾತಂತ್ರೋತ್ಸವಕ್ಕೆ ಆಹ್ವಾನಿಸಿದರು.

ನಂತರ ಮಾತನಾಡಿದ ಜಿಲ್ಲಾಧಿಕಾರಿ, ಸರ್ಕಾರದ ನಿರ್ದೇಶದಂತೆ ಹೋರಾಟಗಾರರನ್ನು ಗುರುತಿಸಿ, ಗೌರವಿಸಿ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದೇವೆ. ಜಿಲ್ಲೆಯಲ್ಲಿ ಹಾಸನ ತಾಲ್ಲೂಕಿನಲ್ಲಿ ಮೂವರು, ಅರಸೀಕೆರೆ ತಾಲ್ಲೂಕಿನಲ್ಲಿ ಒಬ್ಬರು ಸ್ವಾತಂತ್ರ್ಯ ಹೋರಾಟಗಾರರಿದ್ದಾರೆ. ದೇಶಕ್ಕಾಗಿ ಅವರು ಕೊಟ್ಟ ಕೊಡುಗೆಯನ್ನು ಮರೆಯುವಂತಿಲ್ಲ ಎಂದು ತಿಳಿಸಿದರು.

ಗೌರವ ಸ್ವೀಕರಿಸಿ ಮಾತನಾಡಿದ ಎಚ್.ಎಂ.ಶಿವಣ್ಣ, ಅಮೃತ ಮಹೋತ್ಸವ ಸಂದರ್ಭದಲ್ಲಿ ಸ್ವಾತಂತ್ರ್ಯ ಚಳುವಳಿ ಹಾಗೂ ರಾಷ್ಟ್ರಾಭಿಮಾನದ ಬಗ್ಗೆ ಯುವ ಪೀಳಿಗೆಗೆ ಅರಿವು ಮೂಡಿಸುವ ಕಾರ್ಯಗಳಾಗಬೇಕು. ಸ್ವಾತಂತ್ರ್ಯ ಹೋರಾಟಗಾರ ವಿಧವಾ ಪತ್ನಿಯನ್ನು ತಾಲ್ಲೂಕುವಾರು ಗುರುತಿಸುವ ಕಾರ್ಯ ಆಗಬೇಕು. ವರ್ಷಕ್ಕೆ ಕನಿಷ್ಠ ಇಬ್ಬರನ್ನು ಸನ್ಮಾನಿಸಬೇಕು ಎಂದು ಅವರು ಹೇಳಿದರು.

ಜಿ.ಎಲ್. ಮುದ್ದೇಗೌಡ ಮಾತನಾಡಿ, ಹಿರಿಯರು ತಂದು ಕೊಟ್ಟ ಸ್ವಾತಂತ್ರ್ಯ ಸಮರ್ಪಕವಾಗಿ ಸದ್ಬಳಕೆಯಾಗಿ ರಾಷ್ಟ್ರದ ಉನ್ನತಿಗೆ ಕಾರಣವಾಗಬೇಕು. ಮಹಿಳೆಯರಿಗೆ ಹೆಚ್ಚಿನ ಸ್ಥಾನ ಮಾನ ದೊರೆಯಬೇಕು. ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಸಹ ಹೆಣ್ಣು ಅವಕಾಶ ವಂಚಿತರಾಗಿದ್ದಾರೆ. ಮಹಿಳೆಯರಿಂದ ಮಾತ್ರ ದೇಶದ ಅಭಿವೃದ್ಧಿ ಎಂದು ತಿಳಿಸಿದರು.

ರಾಮಣ್ಣ ಮಾತನಾಡಿ, ಅಧಿಕಾರಿಗಳು ಹಾಗೂ ಸಾರ್ವಜನಿಕರು ದೇಶ ಅಭಿವೃದ್ಧಿಗೆ ದಕ್ಷತೆಯಿಂದ ಶ್ರಮಿಸಬೇಕು ಎಂದರು.

ಅರಸೀಕೆರೆ ತಾಲ್ಲೂಕಿನ ನೇರ್ಲಗಿ ಬಸವರಾಜ್ ಅವರ ಮನೆಗೆ ತಹಶೀಲ್ದಾರ್ ಸಂತೋಷ್ ಭೇಟಿ ನೀಡಿ, ಗೌರವಿಸಿ ಸ್ವಾತಂತ್ರೋತ್ಸವಕ್ಕೆ ಆಹ್ವಾನ ನೀಡಿದರು.

ಅಮೃತ ಮಹೋತ್ಸವ ಅಂಗವಾಗಿ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರ ಕುರಿತು ದೂರದರ್ಶನದ ವಾಹಿನಿ ವಿಶೇಷ ಚಿತ್ರೀಕರಣ ಕೈಗೊಂಡಿದೆ. ಕಾರ್ಯಕ್ರಮ ಆ.14 ಮತ್ತು 15 ರಂದು ಪ್ರಸಾರವಾಗಲಿದೆ.

ಉಪವಿಭಾಗಾಧಿಕಾರಿ ಬಿ. ಎ. ಜಗದೀಶ್, ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ವಿನೋದ್ ಚಂದ್ರ , ತಹಶೀಲ್ದಾರ್ ನಟೇಶ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.