ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚನ್ನರಾಯಪಟ್ಟಣ: ರಸ್ತೆ ಸಂಚಾರ ಸುರಕ್ಷತಾ ಸಪ್ತಾಹ

Published 1 ಜುಲೈ 2023, 13:49 IST
Last Updated 1 ಜುಲೈ 2023, 13:49 IST
ಅಕ್ಷರ ಗಾತ್ರ

ಚನ್ನರಾಯಪಟ್ಟಣ: ರೋಟರಿ ಕ್ಲಬ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸಂಚಾರಿ ಪೊಲೀಸ್ ಠಾಣೆಯಿಂದ ರಸ್ತೆ ಸಂಚಾರ ಮತ್ತು ಸುರಕ್ಷತಾ ಸಪ್ತಾಹ ಅಭಿಯಾನದ ಅಂಗವಾಗಿ ಶನಿವಾರ ಬೈಕ್ ಜಾಥಾ ನಡೆಯಿತು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಿಂದ ಬೈಕ್ ಜಾಥಾಕ್ಕೆ ಡಿವೈಎಸ್‍ಪಿ ಪಿ. ರವಿಪ್ರಸಾದ್ ಚಾಲನೆ ನೀಡಿದರು. ಪೊಲೀಸರು, ರೋಟರಿ ಕ್ಲಬ್ ಸದಸ್ಯರು ಹೆಲ್ಮೆಟ್ ಧರಿಸಿ ಪಟ್ಟಣದ ಬಿ.ಎಂ.ರಸ್ತೆ, ಕೆ.ಆರ್. ವೃತ್ತ, ನವೋದಯ ವೃತ್ತ, ಮೈಸೂರು ರಸ್ತೆ ಮೂಲಕ ಕಾಲೇಜು ಆವರಣಕ್ಕೆ ಜಾಥಾ ಸೇರಿತು.

‘ರಸ್ತೆ ಸುರಕ್ಷತಾ ಸಪ್ತಾಹ ಅಭಿಯಾನದ ಉದ್ದೇಶ ಅಪಘಾತ ತಡೆಗಟ್ಟುವುದು. ಅಪಘಾತವಾದಾಗ ಪ್ರಾಣಹಾನಿ, ದೈಹಿಕ ಹಾನಿ ಉಂಟಾಗುತ್ತದೆ. ಇವುಗಳನ್ನು ತಡೆಯಬೇಕಾದರೆ ರಸ್ತೆ ನಿಯಮ ಪಾಲಿಸಬೇಕು. ಅದೇ ರೀತಿ ಹೆಲ್ಮೆಟ್ ಧರಿಸಿ ಮೋಟಾರ್ ಬೈಕ್ ಚಾಲನೆ ಮಾಡಬೇಕು’ ಎಂದರು.

ಕಾಲೇಜು ಪ್ರಾಂಶುಪಾಲರಾದ ಡಾ. ಪೂರ್ಣಿಮಾ ಮಾತನಾಡಿ, ‘ಹೆಲ್ಮೆಟ್ ಧರಿಸಿ ಮೋಟಾರ್ ಬೈಕ್ ಚಾಲನೆ ಮಾಡುವುದರಿಂದ ಬೈಕ್ ಸವಾರರಿಗೆ ರಕ್ಷಣೆ ದೊರಕುತ್ತದೆ’ ಎಂದರು.

ರೋಟರಿ ಕ್ಲಬ್ ಅಧ್ಯಕ್ಷ ಎ.ಸಿ. ಜಯರಾಘವೇಂದ್ರ, ಕಾರ್ಯದರ್ಶಿ ಎಚ್.ಎನ್. ಶಿವನಂಜೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT