ಸಕಲೇಶಪುರ: ನಿಮ್ಮಲ್ಲಿ ಯಾವುದೇ ಪ್ರತಿಭೆ ಇಲ್ಲದೇ ಇದ್ದರೂ ಪರವಾಗಿಲ್ಲ. ಹಣ ಕೊಟ್ಟರೆ ಡಾಕ್ಟರೇಟ್ ನೀಡುವ ಕಾನೂನು ಬಾಹಿರ ಸಂಸ್ಥೆಗಳು ತಲೆ ಎತ್ತಿರುವುದು ಆತಂಕ ಉಂಟು ಮಾಡಿದೆ ಎಂದು ಹೆಗ್ಗೋಡಿನ ನೀನಾಸಂ ಮಾಜಿ ಪ್ರಾಂಶುಪಾಲ, ರಂಗ ನಿರ್ದೇಶಕ ಕೆ.ಜಿ. ಮಹಾಬಲೇಶ್ವರ್ ಆತಂಕ ವ್ಯಕ್ತಪಡಿಸಿದರು.

ತಾಲ್ಲೂಕಿನ ರಕ್ಷಿದಿ ಗ್ರಾಮದಲ್ಲಿ ಬೆಳ್ಳೇಕೆರೆ ಜೈ ಕರ್ನಾಟಕ ಸಂಘದ ಆಶ್ರಯದಲ್ಲಿ ಶನಿವಾರ ನಡೆದ ಎಸ್.ಕೆ. ಕರೀಂಖಾನ್ ಸೌಹಾರ್ದ ಹಾಗೂ ಅಮೃತ ಕಾವ್ಯ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ವೇದಿಕೆ ಮೇಲೆ ಕರೆದು ಸನ್ಮಾನ ಮಾಡಿಸಿಕೊಳ್ಳುವುದಕ್ಕೆ ಅಸಹ್ಯ ಆಗುವಂತಹ ಸನ್ನಿವೇಶ ನಿರ್ಮಾಣ ಆಗಿದೆ. ಓದಿ ಪದವಿ ಪಡೆದಿಲ್ಲ. ಯಾವುದಾದರೂ ಒಂದು ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿಲ್ಲ. ಪ್ರಬಂಧ ಮಂಡನೆ ಮಾಡಿಲ್ಲ. ಸಾಹಿತ್ಯ, ಸಂಸ್ಕೃತಿ ಸಂರಕ್ಷಿಸಿ ಮುಂದಿನ ಪೀಳಿಗೆಗೆ ಹೊತ್ತೊಯ್ಯುವ ಕೆಲಸ ಮಾಡಿಲ್ಲ. ಪತ್ರಿಕೆಗಳಲ್ಲಿ ನೋಡಿದರೆ, ಯಾವುದೋ ಗೊತ್ತು ಗುರಿ ಇಲ್ಲದ ಸಂಸ್ಥೆಯೊಂದು ಹಣ ವಸೂಲಿ ಮಾಡಿಕೊಂಡು ಒಂದು ಪೇಟ, ಶಾಲು, ಡಾಕ್ಟರೇಟ್ ಎಂಬ ಒಂದು ನಕಲಿ ಸರ್ಟಿಫಿಕೇಟ್ ಕೊಡುತ್ತಿದ್ದು, ಇದರ ವಿರುದ್ಧ ಸರ್ಕಾರ, ವಿಶ್ವವಿದ್ಯಾಲಯಗಳು ಏಕೆ ಕಾನೂನು ಕ್ರಮ ಕೈಗೊಳ್ಳುತ್ತಿಲ್ಲ? ಅಂಥವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಿ. ಗೌರವ ಡಾಕ್ಟರೇಟ್ ಎಂಬ ಪದವಿಗೆ ಅಂಟಿರುವ ವ್ಯಾಪಾರ, ನಕಲಿ, ಮೋಸ ವಂಚನೆಗಳನ್ನು ಅಳಿಸುವ ಕೆಲಸ ಆಗಬೇಕು ಎಂದರು.

ರಂಗಕರ್ಮಿ ಪ್ರಸಾದ್ ರಕ್ಷಿದಿ ಅವರ ತಂಡ ಜಾನಪದ ಜಂಗಮ ಡಾ. ಎಸ್.ಕೆ. ಕರೀಂಖಾನ್ ಹೆಸರಿನಲ್ಲಿ ಹಾಗೂ ಲೇಖಕಿ ದಿವಂಗರ ಅಮೃತಾ ರಕ್ಷಿದಿ ಹೆಸರಿನಲ್ಲಿ ಅಚ್ಯುತ ಕೆಜಿಎಫ್, ಮಧು ಕಾರಗಿ ಹಾಗೂ ವಿನಯ್ ಗುಂಟೆ ಅವರಿಗೆ ಪ್ರಶಸ್ತಿ ನೀಡುತ್ತಿದ್ದು, ಪ್ರಶಸ್ತಿ ಪುರಸ್ಕೃತರು ನಿಜಕ್ಕೂ ಅಪ್ರತಿಮ ಸಾಧಕರು. ಇಂಥವರಿಗೆ ರಾಜ್ಯ ಪ್ರಶಸ್ತಿ ನೀಡುತ್ತಿರುವುದು ಶ್ಲಾಘನೀಯ ಎಂದರು.

ಮಾಜಿ ಶಾಸಕ ಎಚ್.ಎಂ.ವಿಶ್ವನಾಥ್ ಮಾತನಾಡಿ, ಕಿವಿ ಕೇಳದ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲ್ಲೂಕಿನ ಕೆರವಡಿ ಗ್ರಾಮದ ಮಧು ಕಾರಗಿ, ಯುಜಿಸಿ, ನೆಟ್, ಜಿಆರ್ಎಫ್ ಪರೀಕ್ಷೆಗಳಲ್ಲಿ ಉತ್ತೀರ್ಣಗೊಂಡು ಇದೀಗ ಪಿಎಚ್ಡಿ ಮಾಡುತ್ತಿದ್ದಾರೆ. ಶ್ರವಣ ದೋಷವನ್ನು ಮೀರಿ ಕಾವ್ಯ ಸೃಷ್ಟಿಯಲ್ಲಿ ತೊಡಗಿರುವ ಇವರು, ‘ಕನಸುಗಳ ಚೀಲ’, ‘ತೆರೆದ ಬಾಗಿಲು’ ಕೃತಿ ಬಿಡುಗಡೆ ಮಾಡಿ ರಾಜ್ಯ ಪ್ರಶಸ್ತಿಗಳನ್ನು ಪಡೆದಿರುವುದು ಶ್ಲಾಘನೀಯ. ಇಂತಹ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿರುವುದು ಹೆಮ್ಮೆಯ ವಿಷಯ ಎಂದರು.

ಶಾಸಕ ಸಿಮೆಂಟ್ ಮಂಜು ಮಾತನಾಡಿ, ಮಲೆನಾಡಿನ ನಿಸರ್ಗದ ಮಡಿಲಲ್ಲಿ ಇರುವ ಪೂರ್ಣಚಂದ್ರ ತೇಜಸ್ವಿ ರಂಗಮಂದಿರದ ಅಭಿವೃದ್ಧಿಗೆ ಶಾಸಕರ ನಿಧಿಯಿಂದ ವಿಶೇಷ ಅನುದಾನ ನೀಡಲಾಗುವುದು. ರಂಗ ಚಟುವಟಿಕೆಗಳಿಗೆ ಮತ್ತಷ್ಟು ಪ್ರೋತ್ಸಾಹ ನೀಡಲಾಗುವುದು ಎಂದರು.

ಮಣಿಪಾಲದ ಕೆಂಎಂಸಿ ವಾಕ್– ಶ್ರವಣ ತಜ್ಞ ಡಾ .ಕಿಶನ್ ಮಾತನಾಡಿದರು. ಅಚ್ಯುತ್ ಕೆ.ಜಿ.ಎಫ್. ಅವರಿಗೆ ತಿಪ್ಪಮ್ಮ ಕೊಮಾರಯ್ಯ ಹೆತ್ತೂರು ಎಸ್.ಕೆ.ಕರೀಂ ಖಾನ್ ಸೌಹಾರ್ದ ಪ್ರಶಸ್ತಿ ಹಾಗೂ ದೊಡ್ಡಬಳ್ಳಾಪುರದ ವಿನಯ್ ಗುಂಟೆ, ಹಾವೇರಿಯ ಮಧು ಕಾರಗಿ ಅವರಿಗೆ ಅಮೃತಾ ರಕ್ಷಿದಿ ಅಮೃತ ಕಾವ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಮಾಲಿನಿ ವಿಶ್ವನಾಥ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ರಾಧೆ ರಕ್ಷಿದಿ, ಸುಬ್ಬು ಹೊಲೆಯಾರ್, ಪ್ರಸಾದ್ ರಕ್ಷಿದಿ, ಕ್ಯಾಮನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಜೆ. ಮಲ್ಲೇಶ್, ಹೆತ್ತೂರು ನಾಗರಾಜ್, ಮಲ್ನಾಡ್ ಮಹಬೂಬ್, ಜೈ ಭೀಮ ಮಂಜು, ಅರುಣ್ ರಕ್ಷಿದಿ, ಸತೀಶ್ ಬೆಳ್ಳೇಕೆರೆ, ಕೆ.ಎಸ್. ರಾಜಶೇಖರ್, ಅಕ್ಷರ ರಕ್ಷಿದಿ, ತೌಫಿಕ್ ಅಹಮ್ಮದ್, ಕಲಾಪ್ರಿಯ ಮಂಜು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.