ಬೇಲೂರು: ಇಲ್ಲಿನ ತಾಲ್ಲೂಕು ಕಚೇರಿ ಆವರಣದಲ್ಲಿ ಕೆಲ ವರ್ಷಗಳ ಹಿಂದೆ ಸಾಲುಮರದ ತಿಮ್ಮಕ್ಕನವರು ನೆಟ್ಟಿದ್ದ ಗಿಡಗಳನ್ನು ಕಿತ್ತುಹಾಕಲಾಗಿದೆ ಎಂದು ಸಾಲಮರದ ತಿಮ್ಮಕ್ಕ ಫೌಂಡೇಷನ್ ಅಧ್ಯಕ್ಷ ಬಳ್ಳೂರು ಉಮೇಶ್ ಆರೋಪಿಸಿದರು.

ಬುಧವಾರ ಸ್ಥಳ ಪರಿಶೀಲಿಸಿ ಅವರು ಮಾತನಾಡಿದರು. ‘ಸಾಲುಮರದ ತಿಮ್ಮಕ್ಕನವರು ತಾಲ್ಲೂಕು ಕಚೇರಿ ಆವರಣದಲ್ಲಿ ನೆರಳೆ ಸೇರಿದಂತೆ ಸಾಕಷ್ಟು ಗಿಡಗಳನ್ನು ನೆಟ್ಟಿದರು. ಅವುಗಳಲ್ಲಿ ಹಲವು ಮರಗಳಾಗಿವೆ. ಕೆಲ ಗಿಡಗಳು ಬೆಳೆಯದಿಂದ ಕಾರಣ ಎರಡು ವರ್ಷಗಳ ಹಿಂದೆ ಮತ್ತೆ ಗಿಡಗಳನ್ನು ನೆಟ್ಟಿದರು. ಇಂದು ಗಿಡಗಳನ್ನು ಕಿತ್ತು ಹಾಕಿರುವ ಮಾಹಿತಿ ಬಂದಾಗ ಇಲ್ಲಿ ಬಂದು ನೋಡಿದಾಗ ಗಿಡಗಳನ್ನು ಕಿತ್ತು ರಾಶಿಹಾಕಲಾಗಿತ್ತು’ ಎಂದರು.

‘ತಹಶೀಲ್ದಾರ್ ಅವರನ್ನು ಈ ಬಗ್ಗೆ ಕೇಳಿದ್ದಾಗ ಸ್ದಳವನ್ನು ಸ್ವಚ್ಛಗೊಳಿಸಲಾಗಿದೆ. ಹೋಗ್ಲಿ ಬಿಡಿ ಎಂದರು.ಸಾಲುಮರದ ತಿಮ್ಮಕ್ಕನವರು ನೆಟ್ಟಿರುವುದು ಸರ್ ಎಂದಾಗ, ಹೌದು ನಾನೇ ಕಿತ್ತಾಕಿರುವುದು, ಏನಾರು ಮಾಡಿಕೊಳ್ಳಿ’ ಎಂದು ಉತ್ತರ ನೀಡಿದರು. ಈ ವಿಷಯವನ್ನು ಶಾಸಕರು ಮತ್ತು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದ್ದು, ತಹಶೀಲ್ದಾರ್ ವಿರುದ್ಧ ಕ್ರಮಕೈಗೊಳ್ಳುವಂತೆ ಅರಣ್ಯ ಸಚಿವರು, ಉಸ್ತುವಾರಿ ಸಚಿವರು ಹಾಗೂ ಮುಖ್ಯಮಂತ್ರಿಗಳಿಗೆ ದೂರು ನೀಡಲಾಗುವುದು’ ಎಂದು ತಿಳಿಸಿದರು.

ಬೇಡವಾದ ಗಿಡ–ಗಂಟಿ ಕಿತ್ತು ಸ್ವಚ್ಛಗೊಳಿಸಲಾಗಿದೆ

ಪತ್ರಿಕೆಯೊಂದಿಗೆ ತಹಶೀಲ್ದಾರ್ ಶ್ರೀಧರ್ ಕಂಕನವಾಡಿ ಮಾತನಾಡಿ ‘ತಾಲ್ಲೂಕು ಕಚೇರಿ ಆವರಣದಲ್ಲಿ ಬೇಡವಾದ ಗಿಡ ಗಂಟಿಗಳು ಹುಲುಸಾಗಿ ಬೆಳೆದಿದ್ದವು. ಈ ಜಾಗಕ್ಕೆ ಸಾಕಷ್ಟು ಜನ ಶೌಚಕ್ಕೆ ಹೋಗಿ ವಾಸನೆ ಬರುತ್ತಿರುವ ಬಗ್ಗೆ ಕಚೇರಿ ಅಕ್ಕ ಪಕ್ಕದ ಮನೆಗಳ ಜನರು ದೂರು ನೀಡಿದ್ದರು. ಹಾಗಾಗಿ ಜಾಗವನ್ನು ಸ್ವಚ್ಛಗೊಳಿಸಿ ಪಾರ್ಕಿಂಗ್ ಹಾಗೂ ಉದ್ಯಾನವನ ನಿರ್ಮಿಸಿ ಜನಗಳು ಕೂರುವ ವ್ಯವಸ್ಥೆ ಮಾಡುವ ಉದ್ದೇಶದಿಂದ ಬೇಡವಾದ ಗಿಡ–ಗಂಟಿಗಳನ್ನು ಸ್ವಚ್ಛಗೊಳಿಸಲಾಗಿದೆ. ನೆರಲೆ ಗಿಡಗಳನ್ನು ಬಿಡಲಾಗಿದೆ. ಯಾವುದೇ ಗಿಡ ಮರಗಳನ್ನು ತೆರವುಗೊಳಿಸಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.