ಮಂಗಳವಾರ, ಮೇ 18, 2021
28 °C

ಹಾಸನ: ಇಬ್ಬರು ಬಾಲಕರು ಸೇರಿ ಏಳು ಮಂದಿಗೆ ಸೋಂಕು 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: ಮುಂಬೈನಿಂದ ಮರಳಿದ್ದ ಇಬ್ಬರು ಬಾಲಕರು ಸೇರಿ ಏಳು ಮಂದಿಗೆ ಕೋವಿಡ್ 19 ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 16ಕ್ಕೆ ಏರಿಕೆಯಾಗಿದೆ. 

7, 8 ವರ್ಷದ ಬಾಲಕರು, 24, 30, 18 ವರ್ಷದ ಮಹಿಳೆ, 33, 30 ವರ್ಷದ ಪುರುಷರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದರಲ್ಲಿ ಚನ್ನರಾಯಪಟ್ಟಣ ತಾಲ್ಲೂಕಿನ ಅಪ್ಪ, ಮಗನಿಗೆ ಸೋಂಕು ತಗುಲಿದೆ. 

ಮುಂಬೈನಿಂದ ಬಂದಿದ್ದ ಎಲ್ಲರನ್ನು ಕ್ವಾರಂಟೈನ್ ನಲ್ಲಿ ಇಡಲಾಗಿತ್ತು. ಸೋಂಕಿತರು ಯಾರೊಂದಿಗೂ ಸಂಪರ್ಕ ಹೊಂದಿರಲಿಲ್ಲ 
ಚನ್ನರಾಯಪಟ್ಟಣದ ಕ್ವಾರಂಟೈನ್‌ ಕೇಂದ್ರದಲ್ಲಿ ಮೂವರು, ಅರಕಲಗೂಡಿನಲ್ಲಿ ಇಬ್ಬರು, ಹೊಳೆನರಸೀಪುರ ಕ್ವಾರಂಟೈನ್‌ ಕೇಂದ್ರದಲ್ಲಿ ಇಬ್ಬರು ಇದ್ದರು. ಎಲ್ಲರ ಗಂಟಲ ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಏಳು ಮಂದಿಯಲ್ಲಿ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ  ಹಾಸನದ ಕೋವಿಡ್ ಆಸ್ಪತ್ರೆ ಐಸೋಲೇಷನ್‌ ವಾರ್ಡ್‌ಗೆ ಸ್ಥಳಾಂತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆರ್‌.ಗಿರೀಶ್‌ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು