ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜ್ವಲ್ ರೇವಣ್ಣ ಗೆಲುವಿಗೆ ಎಲ್ಲರೂ ಸಹಕರಿಸಿ: ಸೂರಜ್ ರೇವಣ್ಣ

Published 18 ಏಪ್ರಿಲ್ 2024, 16:36 IST
Last Updated 18 ಏಪ್ರಿಲ್ 2024, 16:36 IST
ಅಕ್ಷರ ಗಾತ್ರ


ಕೊಣನೂರು : ಹಾಸನ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯಥರ್ಿ ಪ್ರಜ್ವಲ್ ರೇವಣ್ಣರವರ ಗೆಲುವಿಗೆ ಎಲ್ಲರೂ ಸಹಕರಿಸಿ ಎಂದು ಎಂಎಲ್ಸಿ ಸೂರಜ್ ರೇವಣ್ಣ ವಿನಂತಿಸಿದರು.
ಹೋಬಳಿಯ ಸರಗೂರು, ಕೆರೆಕೋಡಿ, ಕೊಣನೂರು ಮುಂತಾದೆಡೆಗಳಲ್ಲಿ ವಿವಿಧ ಸಮುದಾಯಗಳ ಮುಖಂಡರುಗಳೊಂದಿಗೆ ಚಚರ್ಿಸಿ, ದೇವಾಲಯ, ಸಮುದಾಯ ಭವನಗಳಿಗೆ ಭೇಟಿ ನೀಡಿ ಪ್ರಜ್ವಲ್ ರೇವಣ್ಣ ಪರ ಮತಯಾಚನೆ ಮಾಡುತ್ತಾ ಮಾತನಾಡಿದರು.
ನನ್ನ ಎರಡು ವರ್ಷದ ಅವಧಿಯಲ್ಲಿ ಎಂಎಲ್ಸಿ ಅನುದಾನದಲ್ಲಿ ತಾಲ್ಲೂಕಿಗೆ ಒಮ್ಮೆ 54 ಲಕ್ಷ ರೂ ಹಾಗೂ ಮತ್ತೊಮ್ಮೆ 45 ಲಕ್ಷ ರೂಗಳನ್ನು ದೇವಾಲಯದ ಅಭಿವೃದ್ದಿಗೆ, 4 ಕೋಟಿ ರೂ ಗಳನ್ನು ರಸ್ತೆಗಳ ಅಭಿವೃದ್ಧಿಗೆ ನೀಡಿದ್ದೇನೆ. ಮುಂದೆಯೂ ಸಹ ಯಾವುದೆ ಅಭಿವೃದ್ದಿ ಕಾರ್ಯಗಳಿಗೆ ನನ್ನನ್ನೆ ನೇರವಾಗಿ ಸಂಪಕರ್ಿಸಿ ಎಂದು ತಿಳಿಸುತ್ತಾ, ಜಿಲ್ಲೆಯ ಅಭಿವೃದ್ಧಿಗಳ ಬಗ್ಗೆ ಯೋಚನೆ ಮಾಡಿ ಮತನೀಡಿ. ಹಾಸನ ಜಿಲ್ಲೆಯಲ್ಲಿ ಇಂಜಿನಿಯರಿಂಗ್ ಹಾಗೂ ಮೆಡಿಕಲ್ ಕಾಲೇಜು, ಜಿಲ್ಲಾಸ್ಪತ್ರೆ, ಜಿಲ್ಲಾ ರಸ್ತೆಗಳು, ದೇವಾಲಯಗಳು, ಸಮುದಾಯ ಭವನಗಳು ಹೀಗೆ ಹತ್ತು ಹಲವಾರು ಕಾರ್ಯಗಳು ಮಾಜಿ ಪ್ರಧಾನಮಂತ್ರಿ ದೇವೇಗೌಡರ ಆಶೀವರ್ಾದದಿಂದ ಆಗಿವೆ.
ಎಲ್ಲಾ ಸಮಾಜಗಳಿಗೂ ಜಾತ್ಯತೀತವಾಗಿ ಕೆಲಸಗಳನ್ನು ದೇವೇಗೌಡರವರು, ಕುಮಾರಸ್ವಾಮಿಯವರು, ರೇವಣ್ಣರವರು, ಪ್ರಜ್ವಲ್ ರವರು, ಶಾಸಕ ಎ.ಮಂಜು ರವರು ಮಾಡಿದ್ದಾರೆ. ಜಿಲ್ಲೆಯಲ್ಲಿ ಬಿಜೆಪಿ, ಜೆಡಿಎಸ್ ನವರು ಒಟ್ಟಾಗಿ ಹೋಗುತ್ತೇವೆ, ನರೇಂದ್ರ ಮೋದಿಜಿಯವರು ಮತ್ತೊಮ್ಮೆ ಪ್ರಧಾನಿಯಾಗಲು ಹಾಗೂ ಎನ್ಡಿಎ ಸಂಸದರ ಸಂಖ್ಯೆ ಹೆಚ್ಚಿಸಲು ಪ್ರಜ್ವಲ್ ರೇವಣ್ಣ ರವರನ್ನು ಮತ್ತೊಮ್ಮೆ ಗೆಲ್ಲಿಸಿ ಎಂದು ಮನವಿ ಮಾಡಿದರು.
ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಹೊನ್ನವಳ್ಳಿ ಸತೀಶ್, ಮುಖಂಡ ಚೌಡೇಗೌಡ, ನಂಜಪ್ಪಾಚಾರ್, ಶಿವಮೂತರ್ಿ, ಲಕ್ಷ್ಮಣ್, ರಮೇಶ್, ಹರೀಶ್, ಸುರೇಶ್, ಕುಮಾರ್, ರಘು, ಸುನಿಲ್, ಮೋಹನ, ಮಾಧವರಾವ್, ಕಿರಣ್, ಬಿ.ಎಂ. ನಾಗರಾಜ್, ಕೆ. ರವಿಕುಮಾರ್, ಡಿಶ್ಸೋಮು, ಉಮೇಶ್, ದಿನೇಶ್, ರವಿಕುಮಾರ್, ನಂದೀಶ್, ಗಾಂಧಿನಗರ ದಿವಾಕರ್ ಮುಂತಾದ ಹಲವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT