ಅರಸೀಕೆರೆ: ಸೀತಾ ಮಹಿಳಾ ಸಂಘವು ಲೋಕಕಲ್ಯಾಣಾರ್ಥವಾಗಿ ಏಳು ದಿನಗಳ ಕಾಲ ಸೌಂದರ್ಯ ಲಹರಿ ಸಪ್ತಾಹ ಹಮ್ಮಿಕೊಂಡಿದೆ. ಇದು ಧಾರ್ಮಿಕ ಕಾರ್ಯಕ್ರಮವಾಗಿದೆ ಎಂದು ಪುರೋಹಿತ ರವಿಪುರಾಣಿಕ್ ಹೇಳಿದರು

ನಗರದ ಶ್ರೀರಾಮ ಮಂದಿರದಲ್ಲಿ ಶನಿವಾರದಿಂದ ಆರಂಭಗೊಂಡಿರುವ ಕಾರ್ಯಕ್ರಮದ ಅಂಗವಾಗಿ ಮಂಗಳವಾರ ಸೌಂದರ್ಯ ಲಹರಿ ಪಾರಾಯಣ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಸೀತಾ ಮಹಿಳಾ ಸಂಘವು ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಸದಾ ಆಚರಿಸುತ್ತಿದೆ. ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಧಾರ್ಮಿಕ ಕಾರ್ಯಕ್ರಮಗಳಿಗೆ ಹೆಚ್ಚಿನ ಒತ್ತನ್ನು ನೀಡುತ್ತಿರುವುದು ಸಂಸ್ಕೃತಿ ಸಂಸ್ಕಾರವು ಪ್ರಸರಿಸುತ್ತಿದೆ. ಮಾನವನು ಎಷ್ಟೇ ಆಧುನಿಕ ರೀತಿಯಲ್ಲಿ ಮುಂದುವರೆದರೂ ಭಗವಂತನ ಕೃಪೆ ಬಹಳ ಅಗತ್ಯವಾಗಿದೆ ಎಂದು ವಿಜ್ಞಾನಿಗಳು ಸಹ ಮನಗಂಡಿದ್ದಾರೆ’ ಎಂದು ಹೇಳಿದರು.

‘ಯಾವುದೇ ಒಂದು ಬೃಹತ್ ಕಾರ್ಯವನ್ನು ಕೈಗೊಳ್ಳಬೇಕಾದರೆ ವಿದ್ವಾಂಸರು ಹಾಗೂ ತಂತ್ರಜ್ಞರು ದೇವರ ಸ್ಮರಣೆ ಮಾಡುವುದನ್ನು ನಾವು ನೋಡುತ್ತಿದ್ದೇವೆ’ ಎಂದು ಹೇಳಿದರು.

ಸೀತಾ ಮಹಿಳಾ ಸಂಘದ ಅಧ್ಯಕ್ಷೆ ಪ್ರೇಮ, ಉಪಾಧ್ಯಕ್ಷೇ ಗಾಯಿತ್ರಿ, ಕಾರ್ಯದರ್ಶಿ ಜಯಶ್ರೀ ಖಜಾಂಚಿ ಶುಭ ಹಾಗೂ ಸಂಘದ ಮಾರ್ಗದರ್ಶಕರು, ಹಿರಿಯರು, ಮಾಜಿ ಅಧ್ಯಕ್ಷರು ಶಕುಂತಲಮ್ಮ, ಹೇಮಾ, ಗೀತ ಇನ್ನಿತರರು ಉಪಸ್ಥಿತರಿದ್ದರು.

ನೆಮ್ಮದಿ ಶಾಂತಿ ಮತ್ತು ಸಮೃದ್ಧಿ ಲೋಕಕ್ಕೆ ದೊರಕಬೇಕಾದರೆ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿರಬೇಕು. ಆ ನಿಟ್ಟಿನಲ್ಲಿ ಸೀತಾ ಮಹಿಳಾ ಸಂಘ ಸಕ್ರಿಯವಾಗಿ ತನ್ನನ್ನು ತೊಡಗಿಸಿಕೊಂಡಿದೆ
ರವಿ ಪುರಾಣಿಕ್ ಪುರೋಹಿತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.